ಮುಂಬರುವ ಚುನಾವಣೆಯಲ್ಲಿ ಮತದಾರರಿಂದ ತಕ್ಕ ಪಾಠ : ಕೈ ನಾಯಕ

ಸರ್ಕಾರಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ತಮ್ಮ ಸ್ವಂತದ್ದು ಎಂಬಂತೆ ಬಿಂಬಿಸಿಕೊಂಡು ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿರುವ ಶಾಸಕ ಸಾ.ರಾ. ಮಹೇಶ್‌ ಅವರಿಗೆ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಾಲೂಕು ಕಾಂಗ್ರೆಸ್‌ ವಕ್ತಾರ ಸೈಯದ್‌ ಜಾಬಿರ್‌ ಹೇಳಿದರು.

A lesson to be learned from the voters in the upcoming elections snr

ಕೆ.ಆರ್‌. ನಗರ :ಸರ್ಕಾರಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ತಮ್ಮ ಸ್ವಂತದ್ದು ಎಂಬಂತೆ ಬಿಂಬಿಸಿಕೊಂಡು ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿರುವ ಶಾಸಕ ಸಾ.ರಾ. ಮಹೇಶ್‌ ಅವರಿಗೆ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಾಲೂಕು ಕಾಂಗ್ರೆಸ್‌ ವಕ್ತಾರ ಸೈಯದ್‌ ಜಾಬಿರ್‌ ಹೇಳಿದರು.

ಶಾಸಕರು ದಿನನಿತ್ಯ ಹತ್ತಾರು ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ. ಆದರೆ ಅವುಗಳಲ್ಲಿ ಅರ್ಧದಷ್ಟುಕೆಲಸಗಳು ಪ್ರಗತಿಯಲ್ಲಿ ಇಲ್ಲ. ಈ ಸಂಬಂಧ ಅಧಿಕಾರಿಗಳನ್ನು ಮಾಹಿತಿ ಕೇಳಿದರೆ ಭಯದಿಂದ ಅವರು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮಾತೆತ್ತಿದರೆ ರಾಜ್ಯದ ಇತರೆ ಯಾವುದೇ ಶಾಸಕರು ಮಾಡದ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಪುಕ್ಕಟೆ ಪ್ರಚಾರ ಪಡೆಯುವ ಶಾಸಕರು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ದುಸ್ಥಿತಿ ಮತ್ತು ಹತ್ತಾರು ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವುದಕ್ಕೆ ಜನರಿಗೆ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುವಾಗ ರೈತರ ಉದ್ದಾರ ಮಾಡಿ ಬಿಡುತ್ತೇನೆ ಎಂದು ಸಾ.ರಾ. ಮಹೇಶ್‌ ಬೊಬ್ಬೆ ಹೊಡೆಯುತ್ತಿದ್ದರು. ಆದರೆ ಅದು ಕೇವಲ 23 ದಿನಗಳು ಕಬ್ಬು ಅರೆಯುವ ಕಾರ್ಯ ನಡೆಸಿ, ಆನಂತರ ಸ್ಥಗಿತವಾಗಿದ್ದು ಈ ಸಂಬಂದ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಎರಡು ವರ್ಷಗಳ ಹಿಂದೆ ಕೊರೋನಾ ಸಂಕಷ್ಟದ ಸಮಯದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್‌. ನಗರ ತಾಲೂಕಿನ ಜನರಿಗೆ ತರಕಾರಿ ಮತ್ತು ಆಹಾರದ ಕಿಟ್‌ಗಳನ್ನು ವಿತರಿಸುವಾಗ ನನ್ನ ಸ್ವಂತ ಆಸ್ತಿ ಅಡವಿಟ್ಟು ಕೋಟ್ಯಾಂತರ ಸಾಲ ಮಾಡಿದ್ದೇನೆ ಎಂದಿದ್ದರು. ಆದರೆ ಈಗ ಸಂಕ್ರಾಂತಿ ಕೊಡುಗೆ ನೀಡಲು ಎಲ್ಲಿಂದ ಹಣ ಬಂತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌. ಮಹದೇವ್‌, ಉದಯಶಂಕರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಎಂ.ಜೆ. ರಮೇಶ್‌, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಸ್‌. ಸೋಮೇಶ್‌ ಇದ್ದರು.

ಸಿದ್ದರಾಮಯ್ಯರಿಂದ ಕಾಂಗ್ರೆಸ್ ತೊರೆದೆ

ಚಿಕ್ಕಬಳ್ಳಾಪುರ (ಜ.25) : ಸಿದ್ದರಾಮಯ್ಯನವರು ಜನತಾದಳದಲ್ಲಿದ್ದು, ಎಲ್ಲ ಬಗೆಯ ಅಧಿಕಾರ ಅನುಭವಿಸಿದ ಬಳಿಕ, ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಗೆದ್ದ ಬಳಿಕ, ಅನೈತಿಕವಾಗಿ ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚಿಸಲು ನಮ್ಮನ್ನು ಬಲಿಪಶು ಮಾಡಿದರು. ಈಗ ‘ಪ್ರಜಾಧ್ವನಿ’ ಯಾತ್ರೆಯ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ, ನಾನು ಮಾಡಿದ ಆರೋಪಗಳಿಗೆ ಒಂದೇ ಒಂದು ಉತ್ತರ ನೀಡಲು ಕಾಂಗ್ರೆಸ್‌ ನಾಯಕರಿಗೆ ಸಾಧ್ಯವಾಗಿಲ್ಲ ಎಂದರು.

ಸ್ತ್ರೀಶಕ್ತಿ ಸಾಲಮನ್ನಾ; ರೈತರು, ಸ್ತ್ರೀಶಕ್ತಿಗೆ ಸಾಲ ಮೊತ್ತ ಹೆಚ್ಚಳ

ನನಗೆ ಕಾಂಗ್ರೆಸ್‌ ಟಿಕೆಟ್‌ ದೊರೆಯುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. ನನಗೆ 2013ರಲ್ಲಿ ಟಿಕೆಟ್‌ ಕೊಡಿಸಿದ್ದು ನನ್ನ ರಾಜಕೀಯ ಗುರುಗಳಾದ ಎಸ್‌.ಎಂ.ಕೃಷ್ಣ ಹಾಗೂ ಡಾ.ಜಿ.ಪರಮೇಶ್ವರ್‌. ನಾನು ಸಿದ್ದರಾಮಯ್ಯ ಬಳಿ ಟಿಕೆಟ್‌ಗಾಗಿ ಸಹಾಯ ಕೇಳಿಯೇ ಇಲ್ಲ. ಶಾಸಕನಾದ ಬಳಿಕ ನನ್ನನ್ನು ವಿಶ್ವಾಸದಿಂದ ನೋಡಿದ್ದಾರೆ. ಆಗ ನಾನೂ ಅವರನ್ನು ಸಮರ್ಥನೆ ಮಾಡಿದ್ದೆ. ಆದರೆ, ತಪ್ಪು ಮಾಡಿದಾಗ ಅದನ್ನು ನೇರವಾಗಿ ಖಂಡಿಸಿದ್ದೇನೆ ಎಂದರು.

ಸಿದ್ದರಾಮಯ್ಯ ಜನತಾದಳದಲ್ಲಿದ್ದಾಗ ಉಪಮುಖ್ಯಮಂತ್ರಿಯಾಗಿದ್ದರು. ಅಂದ ಮೇಲೆ ಕಾಂಗ್ರೆಸ್‌ಗೆ ಏಕೆ ಬಂದರು, ಆಶಯಕ್ಕಾ?, ಬದ್ಧತೆಗಾ?. ಇವರು ಮಾತ್ರ ಬಹಳ ಪವಿತ್ರರು, ನಾವೆಲ್ಲರೂ ಅಪವಿತ್ರರಾ?. ಇಷ್ಟುವಯಸ್ಸಾಗಿರುವವರೇ ಹೀಗೆ ಮಾಡುವಾಗ, ಯುವಕರಾದವರು ನಾವೇನು ಮಾಡಬೇಕು?. ಜಿಲ್ಲೆಗೆ ಮೆಡಿಕಲ್‌ ಕಾಲೇಜ್‌ ತಂದವರು ಯಾರೆಂದು ಚಿಕ್ಕಮಕ್ಕಳನ್ನು ಕೇಳಿದರೂ ಹೇಳುತ್ತಾರೆ ಎಂದರು.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಗೇ ಅಧಿಕಾರ : ಅರುಣ್‌ಸಿಂಗ್‌

‘ಹೇಗಾದರೂ ಮಾಡಿ ಸುಧಾಕರ್‌ ಅವರನ್ನು ಸೋಲಿಸಿ, ದಮ್ಮಯ್ಯ’ ಎಂದು ಸಿದ್ದರಾಮಯ್ಯನವರು ಅಂಗಲಾಚುತ್ತಿದ್ದಾರೆ. ನನ್ನನ್ನು ಸೋಲಿಸಲು ಕರಿ ಚಿರತೆಯನ್ನು ಕರೆ ತರುವುದಾಗಿ ಹೇಳುತ್ತಿದ್ದಾರೆ. ಇದು ಕರಿ ಚಿರತೆಯಲ್ಲ, ಕಳ್ಳ ಚಿರತೆ. ದಲಿತ ಎಂದು ಬೋಗಸ್‌ ಪ್ರಮಾಣ ಪತ್ರ ನೀಡಿ, ಐದು ವರ್ಷ ಶಾಸಕನಾಗಿದ್ದವರನ್ನು ಚಿಕ್ಕಬಳ್ಳಾಪುರದ ಜನತೆ ಸುಮ್ಮನೆ ಬಿಡುತ್ತಾರೆಯೇ?. ಇಂತವರು ಹತ್ತು ಜನ ಬರಲಿ, ನಾನು ಹೆದರುವುದಿಲ್ಲ ಎಂದು ಕಿಡಿ ಕಾರಿದರು.

Latest Videos
Follow Us:
Download App:
  • android
  • ios