ಮನೆ ಬಾಗಿಲಿಗೇ ಬಂದು ಸಾಕು ನಾಯಿ ಹೊತ್ತೊಯ್ದ ಚಿರತೆ
ತೋಟದ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಜಡಯ ಗ್ರಾಮದಲ್ಲಿ ನಡೆದಿದೆ.
ತುರುವೇಕೆರೆ : ತೋಟದ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಜಡಯ ಗ್ರಾಮದಲ್ಲಿ ನಡೆದಿದೆ.
ಜಡಯದ ತೋಟದ ಮನೆಯಲ್ಲಿ ಯೋಗೀಶ್, ರಾಟ್ ವೀಲರ್ ಜಾತಿಯ ನಾಯಿ ಸಾಕಿದ್ದರು. ತಡರಾತ್ರಿ ಆರು ಅಡಿಗೂ ಎತ್ತರವಿರುವ ಕಾಂಪೌಂಡ್ ಎಗರಿ ಒಳ ಬಂದ ಚಿರತೆ ಓಡಿಸಲು ನಾಯಿ ಪ್ರಯತ್ನಿಸಿದೆ. ನಂತರ ಚಿರತೆ, ನಾಯಿಯನ್ನು ಓಡಿಸಿಕೊಂಡು ಹೋಗಿದೆ.
ಯೋಗೀಶ್ ಅವರ ಸಹೋದರ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ಕಾಂಪೌಂಡ್ ಒಳಗೆ ಹಾರಿ ನಾಯಿಯ ಬೇಟೆ ದೃಶ್ಯ ಸೆರೆಯಾಗಿದೆ. ಅರಣ್ಯ ಇಲಾಖೆಯವರು ಬೋನು ಇರಿಸಿ ಚಿರತೆ ಮತ್ತು ಕರಡಿ ಹಿಡಿಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಕಾಡು ಬೆಕ್ಕು ಹಿಡಿಯಲು ಹೋಗಿ ಚಿರತೆ ಸಾವು
ಉತ್ತರಕನ್ನಡ(ಡಿ.01): ಕಾಡು ಬೆಕ್ಕು ಹಿಡಿಯಲು ಹೋದ ಚಿರತೆಯೊಂದು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ಸಮೀಪದ ಬೆಳಗಲ್ ಮನೆ ಬಳಿ ಇಂದು(ಶುಕ್ರವಾರ) ಸಂಜೆ ನಡೆದಿದೆ.
ಜೀವ ಉಳಿಸಿಕೊಳ್ಳಲು ಕಾಡು ಬೆಕ್ಕು ಲೈನ್ ಕಂಬ ಹತ್ತಿತ್ತು, ಹಸಿದ ಚಿರತೆ ಕೂಡಾ ಕಾಡು ಬೆಕ್ಕು ಹಿಡಿಯಲು ವಿದ್ಯುತ್ ಕಂಬ ಏರಿತ್ತು. ಈ ವೇಳೆ ವಿದ್ಯುತ್ ತಂತಿ ತಗುಲಿ ಚಿರತೆ ಹಾಗೂ ಕಾಡುಬೆಕ್ಕು ಮೃತಪಟ್ಟಿದೆ.
ನಡು ರಸ್ತೆಯಲ್ಲಿ ರಿಷಬ್‌ಗೆ ಶಾಕ್ ಕೊಟ್ಟ ಪೊಲೀಸರು: ಆದರೆ ಶೆಟ್ಟರ ಸರಳತೆಗೆ ಫಿದಾ ಆದ ಸಿಬ್ಬಂದಿ!
ಘಟನಾ ಸ್ಥಳಕ್ಕೆ ಡಿಎಫ್ಓ. ಅಜ್ಜಯ್ಯ ಹಾಗೂ ಆರ್‌ಎಫ್‌ಓ ಶಿವಾನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಮೂರು ವರ್ಷ ಪ್ರಾಯದ ಚಿರತೆ ಎಂದು ತಿಳಿದು ಬಂದಿದೆ.