Asianet Suvarna News Asianet Suvarna News

ಸಾಲಿಗ್ರಾಮದಲ್ಲೊಂದು ಅಪರೂಪದ ಮನೆ, ಗಿಜಿಗುಡುವ ಪಕ್ಷಿಧಾಮ, ಸುತ್ತೆಲ್ಲವೂ ಉದ್ಯಾನವನ

ಇರುವುದು ಕೇವಲ 15 ಸೆಂಟ್ಸ್‌ ಜಾಗ. ಇದರಲ್ಲೇ ಪುಟ್ಟದೊಂದು ತಾರಸಿ ಮನೆ. ಮನೆಯ ಮುಂದೆ ಗಿಜಿಗುಡುವ ಪಕ್ಷಿಧಾಮ, ಸುತ್ತೆಲ್ಲವೂ ಉದ್ಯಾನವನ! ಔಷಧೀಯ ಸಸ್ಯಗಳ ನಡುವೆ ಚಿಲಿಪಿಲಿ ಹಕ್ಕಿಗಳ ಕಲರವ ನೋಡಲು ಎರಡು ಕಣ್ಣು ಸಾಲದು. ಅಷ್ಟಕ್ಕೂ ಸ್ವರ್ಗಲೋಕದಂತೆ ಕಾಣುವ ಆ ಮನೆ ಎಲ್ಲಿದೆ ಎನ್ನುವ ಕುತೂಹಲ ನಿಮಗಿದ್ದರೆ ಈ ವಿಶೇಷ ವರದಿಯನ್ನೊಮ್ಮೆ ಓದಲೇಬೇಕು.

A home in kundapura where people maintain a beautiful garden
Author
Bangalore, First Published Jun 3, 2020, 9:05 AM IST

ಕುಂದಾಪುರ(ಜೂ. 03): ಇರುವುದು ಕೇವಲ 15 ಸೆಂಟ್ಸ್‌ ಜಾಗ. ಇದರಲ್ಲೇ ಪುಟ್ಟದೊಂದು ತಾರಸಿ ಮನೆ. ಮನೆಯ ಮುಂದೆ ಗಿಜಿಗುಡುವ ಪಕ್ಷಿಧಾಮ, ಸುತ್ತೆಲ್ಲವೂ ಉದ್ಯಾನವನ! ಔಷಧೀಯ ಸಸ್ಯಗಳ ನಡುವೆ ಚಿಲಿಪಿಲಿ ಹಕ್ಕಿಗಳ ಕಲರವ ನೋಡಲು ಎರಡು ಕಣ್ಣು ಸಾಲದು. ಅಷ್ಟಕ್ಕೂ ಸ್ವರ್ಗಲೋಕದಂತೆ ಕಾಣುವ ಆ ಮನೆ ಎಲ್ಲಿದೆ ಎನ್ನುವ ಕುತೂಹಲ ನಿಮಗಿದ್ದರೆ ಈ ವಿಶೇಷ ವರದಿಯನ್ನೊಮ್ಮೆ ಓದಲೇಬೇಕು.

ಸಾಲಿಗ್ರಾಮದ ತೋಡುಕಟ್ಟುವಿನಲ್ಲಿ ಸ್ವರ್ಗದಂತೆ ಕಾಣುವ ಈ ಸ್ಥಳಕ್ಕೆ ಬೃಂದಾವನ ಎಂಬ ನಾಮಫಲಕವಿದೆ. ಇತ್ತೀಚೆಗಷ್ಟೇ ಸೇವಾ ನಿವೃತ್ತಿ ಪಡೆದ ಬಿಸಿಎಂ ಇಲಾಖೆಯ ಕುಂದಾಪುರ ತಾಲೂಕು ವಿಸ್ತರಣಾಧಿಕಾರಿ ಬಿ.ಎಸ್‌. ಮಾದರ ಅವರ ಪರಿಸರಪ್ರೇಮ ಹಾಗೂ ಪಕ್ಷಿಪ್ರೇಮದ ಪ್ರತೀಕವಿದು. ಮನೆಯ ಮುಂದೆ ವಿವಿಧ ಬಗೆಯ ಔಷಧೀಯ ಸಸ್ಯಗಳ ತೋಟಕ್ಕೆ ಬೃಂದಾವನ ಎಂಬ ಹೆಸರಿಟ್ಟು ಆ ಗಿಡಗಳನ್ನೆಲ್ಲಾ ಸ್ವತಃ ಪೋಷಿಸಿಕೊಂಡು ಬರುತ್ತಿರುವ ಬಿ.ಎಸ್‌. ಮಾದರ ಅವರ ಕಾಯಕಕ್ಕೆ ಅವರ ಪತ್ನಿ, ಮಕ್ಕಳ ಸಹಯೋಗವಿದೆ. ಹಕ್ಕಿಗಳೊಂದಿಗೆ ಸಮಯ ಕಳೆಯುವ ಬಿ.ಎಸ್‌. ಮಾದರ ಅವರಿಗೆ ಹಕ್ಕಿಗಳೆಂದರೆ ಪಂಚಪ್ರಾಣ.

ಮಂಗಳೂರಿಗೆ ಎನ್‌ಡಿಆರ್‌ಎಫ್‌ ತಂಡ ಆಗಮನ

ಎಲ್ಲವೂ ಅಚ್ಚುಕಟ್ಟು!: ಈ ಪುಟ್ಟಮನೆಯ ಮೇಲೊಂದು ಅತಿಥಿಗೃಹ. ತೋಟದೊಳಗೆ ಎರಡು ಬಾಡಿಗೆ ಮನೆಗಳು. ಮನೆಯ ಮುಂದೆಯೇ ಅಲ್ಲಲ್ಲಿ ಗೂಡುಗಳಲ್ಲಿರುವ ಲವ್‌ ಬರ್ಡ್ಸ್, ಚಿಟ್ಗುಬ್ಬಿ, ಪಾರಿವಾಳ, ಗಿಳಿ, ವಿವಿಧ ಥಳಿಯ ಬೆಕ್ಕುಗಳು, ಬಾತುಕೋಳಿ, ಮೊಲ ಮೊದಲಾದ ಪ್ರಾಣಿ-ಪಕ್ಷಿಗಳು. ಇನ್ನು ಅಡಕೆ, ತೆಂಗು, ಬಸಳೆ, ಬಣ್ಣಬಣ್ಣದ ಹೂವಿನ ಗಿಡಗಳು, ವಿವಿಧ ಬಗೆಯ ಔಷಧೀಯ ಸಸ್ಯಗಳನ್ನು ನೆಟ್ಟು ಪೋಷಿಸಿಕೊಂಡು ಬಂದಿರುವ ಮಾದರ ಪಕ್ಷಿಗಳಂತೆ ಸಸ್ಯಗಳನ್ನೂ ಸಲಹುತ್ತಿದ್ದಾರೆ.

ಮಾಡಿನ ನಡುವೆ ಅಡಕೆ: ಬಾಡಿಗೆ ಮನೆ ನಿರ್ಮಿಸುವಾಗ ಅಡಚಣೆಯಾಗುತ್ತಿದ್ದ ಅಡಕೆ ಮರವನ್ನು ಕತ್ತರಿಸದೆ ಹೆಂಚಿನ ಮಾಡಿನ ಮಧ್ಯೆಯೇ ಅಡಕೆ ಮರ ಚಿಗುರೊಡೆಯಲು ಅವಕಾಶ ಮಾಡಿಕೊಟ್ಟಿರುವುದು ಬಿ.ಎಸ್‌. ಮಾದರ ಅವರ ಪರಿಸರ ಕಾಳಜಿ ಎತ್ತಿ ತೋರಿಸುತ್ತದೆ.

ಮಂಗಳೂರು ಪಂಪ್‌ವೆಲ್‌ ಮೇಲ್ಸೇತುವೆಗೆ ವೀರ ಸಾವರ್ಕರ್‌ ಹೆಸರು!

ಮೂಲತಃ ಬಿಜಾಪುರದವರಾದ ಮಾದರ 40 ವರ್ಷಗಳಿಗೂ ಮಿಕ್ಕಿ ಬಿಸಿಎಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಮೊನ್ನೆಯಷ್ಟೆಸೇವಾ ನಿವೃತ್ತಿ ಪಡೆದಿದ್ದಾರೆ. ಪತ್ನಿ ಉಷಾದೇವಿ ಸರ್ಕಾರಿ ಶಾಲೆ ಶಿಕ್ಷಕಿ. ಹಿರಿಯ ಪುತ್ರ ಕಾರ್ತಿಕ್‌ ರಾಷ್ಟ್ರ ಮಟ್ಟದ ತ್ರಿವಿಧ ಜಿಗಿತಗಾರ. ಸದ್ಯ ಕ್ರೀಡಾ ಕೋಟಾದಡಿ ರೈಲ್ವೆ ಇಲಾಖೆಯಲ್ಲಿ ದೂರದ ರಾಜಧಾನಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರು ಪುತ್ರಿಯರಾದ ಕೀರ್ತಿ ಹಾಗೂ ಜ್ಯೋತಿ ಉನ್ನತ ಶಿಕ್ಷಣದಲ್ಲಿ ತೊಡಗಿಕೊಂಡಿದ್ದಾರೆ. ಸತತ ಆರು ವರ್ಷಗಳ ಕಾಲ ಬಿಸಿಎಂ ಹಾಸ್ಟೆಲ್‌ನ ತಾಲೂಕು ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಬಿಎಸ್‌ ಮಾದರ ವಿದ್ಯಾರ್ಥಿಗಳಿಗೆÜ ನೆಚ್ಚಿನ ಅಧಿಕಾರಿಯಾಗಿದ್ದಾರೆ. ಬಿ.ಎಸ್‌. ಮಾದರ ಅಧಿಕಾರ ಪಡೆದುಕೊಂಡ ಬಳಿಕ ಕುಂದಾಪುರ ತಾಲೂಕಿನ ಬಿಸಿಎಂ ಹಾಸ್ಟೆಲ್‌ಗಳು ಮೇಲ್ದರ್ಜೆಗೆ ಏರಿದೆ.

ಕೆಲಸ ಮುಗಿಸಿ ಮನೆಗೆ ಬಂದರೆ ತೋಟದಲ್ಲೇ ಸಮಯ ಕಳೆಯುತ್ತಾರೆ. ನಮ್ಮೆಲ್ಲರ ಜೊತೆ ಬೆರೆಯುವುದಕ್ಕಿಂತಲೂ ಹೆಚ್ಚು ಪ್ರಾಣಿ-ಪಕ್ಷಿಗಳು, ಗಿಡಗಳ ಜೊತೆ ಬೆರೆಯುತ್ತಾರೆ. ಪತಿಯ ಕೆಲಸದಲ್ಲಿ ನನಗೆ ಮೆಚ್ಚುಗೆ ಇದೆ. ಗಿಡ, ಪಕ್ಷಿಗಳನ್ನು ನೋಡಿದಾಗೆಲ್ಲಾ ಬೇಸರ ಕಳೆಯುತ್ತದೆ ಎಂದು ಬಿ.ಎಸ್‌ ಮಾದರ ಪತ್ನಿ ಉಷಾದೇವಿ ತಿಳಿಸಿದ್ದಾರೆ.

ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ ಬಾಂಬ್!

ಪರಿಸರ ದಿನಾಚರಣೆಯ ದಿನ ನಾವು ಹೊರಗಿನ ಫೋಟೋ ತೆಗೆದು ಹಾಕಲ್ಲ. ಮನೆಯೊಳಗಿನ ಗಿಡಗಳ ಫೆäಟೋ ತೆಗೆದು ಹಾಕುತ್ತೇವೆ. ಮನೆಯಲ್ಲಿ ಬೆಳೆದ ಬಸಳೆ ಸೊಪ್ಪನ್ನು ಒಂದು ದಿನವೂ ಕತ್ತರಿಸಿ ಸಾಂಬಾರು ಮಾಡಿದ್ದಿಲ್ಲ. ಅಪ್ಪನ ಕಣ್ಣಿಗೆ ಅದು ಅಲ್ಲೇ ಚೆನ್ನಾಗಿ ಕಾಣಿಸಬೇಕು ಅನ್ನೋದು. ಅವರ ದಾರಿಗೆ ನಾವ್ಯಾವತ್ತೂ ಅಡ್ಡ ಬಂದಿಲ್ಲ ಎಂದು ಮಾದರ ಮಕ್ಕಳು ಕಾರ್ತಿಕ್‌, ಜ್ಯೋತಿ, ಬಿ.ಎಸ್‌ ತಿಳಿಸಿದ್ದಾರೆ.

-ಶ್ರೀಕಾಂತ ಹೆಮ್ಮಾಡಿ

Follow Us:
Download App:
  • android
  • ios