ಕೋಲಾರದಲ್ಲಿ ಮತ್ತೊಮ್ಮೆ ರೈತರ ಆವಿಷ್ಕಾರ: ಅಪರೂಪದ ಜುಕಿನಿ ಬೆಳೆಯನ್ನು ಬೆಳೆದ ರೈತ!

ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದ್ದಿದ್ರು ಸಹ ಜಿಲ್ಲೆಯ ರೈತರು ಇದುವರೆಗೂ ಹೆದರಿ ಹಿಂದೆ ಸರಿದಿಲ್ಲ.ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಹುದು ಅಂತ ಈ ಭಾಗದ ರೈತರು ಪದೇ ಪದೇ ಸಾಭೀತು ಮಾಡ್ತಿದ್ದಾರೆ. 

A farmer who grew a rare zucchini crop in kolar gvd

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಜೂ.03): ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದ್ದಿದ್ರು ಸಹ ಜಿಲ್ಲೆಯ ರೈತರು ಇದುವರೆಗೂ ಹೆದರಿ ಹಿಂದೆ ಸರಿದಿಲ್ಲ.ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಬಹುದು ಅಂತ ಈ ಭಾಗದ ರೈತರು ಪದೇ ಪದೇ ಸಾಭೀತು ಮಾಡ್ತಿದ್ದಾರೆ. ಅದೆಂಹದ್ದೇ ಕಷ್ಟ ಎದುರಾದ್ರು ಸಹ ಹೊಸ ತರಹದ ಬೆಳೆ ಬೆಳೆದು, ಬೇರೆ ಭಾಗಗಳಿಗೂ ರಫ್ತು ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಹೊಸ ಬೆಳೆ ಬೆಳೆಯುವ ಮೂಲಕ ಬೇಡಿಕೆ ತಕ್ಕಂತೆ ಪೂರೈಕೆ ಮಾಡುವ ಮೂಲಕ ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ. 

ಹೌದು! ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಇಮರಕುಂಟೆ ಗ್ರಾಮದ ಪ್ರಗತಿಪರ ರೈತ ಈರಪ್ಪ ರೆಡ್ಡಿ ಎಂಬುವವರು ಇದೇ ಮೊದಲ ಬಾರಿಗೆ ಜುಕಿನಿ ಅನ್ನೋ ಬೆಳೆ ಬೆಳೆದು ಜನರ ಗಮನ ಸೆಳೆದಿದ್ದಾರೆ. ಕಡಿಮೆ ಬಂಡವಾಳದಲ್ಲಿ ಬೆಳೆಯುವ ಜುಕಿನಿ ಬೆಳೆಯಿಂದ ರೈತ ಈರಪ್ಪ ರೆಡ್ಡಿ ಅವರಿಗೆ ಒಳ್ಳೆಯ ಲಾಭ ಸಹ ತಂದು ಕೊಡುತ್ತಿದೆ. ಈ ಜುಕಿನಿ ಬೆಳೆ ನೋಡಲು ಥೇಟ್ ಸೌತೆಕಾಯಿ ತರ ಇರುವ ಒಂದು ಹಣ್ಣಿನ ಜಾತಿಗೆ ಸೇರಿದ್ದು,ಇದನ್ನು ತರಕಾರಿ ರೂಪದಲ್ಲೂ ಬಳಸಲಾಗ್ತಿದೆ. ಕೆಲವರು ಜುಕಿನಿಯನ್ನು ಸಾಂಬಾರು ಹಾಗೂ ಪಲ್ಯ ಮಾಡಿಕೊಂಡು ಸೇವಿಸುತ್ತಾರೆ. ಜುಕಿನಿ ಬೆಳೆ ಹಸಿರು ಹಾಗೂ ಹಳದಿ ಬಣ್ಣದಲ್ಲಿ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಎರಡಕ್ಕೂ ಭಾರಿ ಬೇಡಿಕೆ ಸಹ ಇದೆ. 

ಸಿದ್ದು ಸ್ಪರ್ಧೆಗಾಗಿ ಹೆಚ್ಚಿದ ಒತ್ತಡ, ಈ ಕ್ಷೇತ್ರಕ್ಕೆ ನಿಲ್ಲುತ್ತಾರಾ ಸಿದ್ದರಾಮಯ್ಯ?

ಸದ್ಯ ಬೇರೆ ಬೆಳೆಗಳಿಗೆ ಹೋಲಿಸಿದರೆ ಜುಕಿನಿ ಅಲ್ಪಾವಧಿ ಬೆಳೆಯಾಗಿದೆ. ಸಸಿ ನಾಟಿ ಮಾಡಿದ  30 ರಿಂದ 40 ದಿನಗಳೊಳಗೆ ಫಸಲು ಬಿಡಲು ಶುರುವಾಗುತ್ತೆ. ನಿಗದಿತ ಕಾಲಮಿತಿಯಲ್ಲಿ ಅಂದ್ರೆ ಕೇವಲ ಒಂದು ತಿಂಗಳು ಕಾಲ ಮಾತ್ರ ಜುಕಿನಿ ಫಸಲು ನೀಡುತ್ತದೆ. ರೈತರು ಸಹ ಬೆಳೆ ಬೆಳೆಯುವಾಗ ಬೇರೆ ಬೆಳೆಯಂತೆ ಕಷ್ಟ ಪಡಬೇಕಾಗಿಲ್ಲ ಯಾಕಂದ್ರೆ ಅಷ್ಟೇ ಸುಲಭವಾಗಿ ಜುಕಿನಿ ಬೇಸಾಯ ಮಾಡಬಹುದು. ಜುಕಿನಿ, ಬೇಸಿಗೆ ಕಾಲದಲ್ಲಿ ಬೆಳಳೆಯುವ ಬೆಳೆಯಾಗಿದ್ದು, ಪ್ರತಿ ಒಂದು ಎಕರೆಗೆ 40 ಸಾವಿರ ಖರ್ಚು ಬರುತ್ತದೆ. ಒಂದು ಎಕರೆಗೆ ಏನಿಲ್ಲ ಅಂದ್ರು 10 ರಿಂದ 15 ಟನ್ ಕಾಯಿ ಬೆಳೆಯಬಹುದು. ಅಬ್ಬಬ್ಬಾ ಅಂದರೆ ಜುಕಿನಿ 3 ಅಡಿ ಅಷ್ಟು ಎತ್ತರಕ್ಕೆ ಬೆಳೆಯುತ್ತದೆ. 

ಬೀಜ ಬಲಿತರೆ ಮುಗೀತು ಅಂದ್ರೆ ಕಾಯಿ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದಲೇ ರೈತರು 15 ರಿಂದ 25 ಸೆ.ಮಿ ಇರುವಾಗಲೇ ಕೊಯ್ಲು ಮಾಡಬೇಕಾಗಿದೆ. ಜುಕಿನಿಯನ್ನು ತರಕಾರಿಯಂತೆ ಕೆಲವರು ಬೇಯಿಸಿ ತಿಂದರೆ, ಕೆಲವರು ಬ್ರೆಡ್, ಕೇಕ್, ಸಲಾಡ್ ಹಾಗೂ ಮಾಂಸದ ತಿನಿಸುಗಳಲ್ಲಿ ಬಳಸುತ್ತಾರೆ ಅಂತ ಬೆಳೆಗಾರ ಈರಪ್ಪರೆಡ್ಡಿ ತಿಳಿಸಿದರು. ಜುಕಿನಿ ಕಾಯಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದ್ದು,ಕೆಜಿಗೆ 70 ರಂತೆ ಮಾರಾಟ ಮಾಡಲಾಗ್ತಿದೆ. ಜುಕಿನಿಗೆ ಚೆನ್ನೈ ಮತ್ತು ಬೆಂಗಳೂರಿನ ಮಾಲುಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಹಾಗಾಗಿ, ವ್ಯಾಪಾರಸ್ಥರು ತೋಟಕ್ಕೆ ಬಂದು ಖರೀದಿಸಿ ಕೊಂಡೊಯ್ಯುತ್ತಾರೆ. 

ಕೋಲಾರ ತಾಲೂಕು ಕಚೇರಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ: ಚಪ್ಪಲಿ ಸವಿಸಿದ್ರು ಇಲ್ಲಿ ಯಾವುದೇ ಕೆಲಸ ಆಗಲ್ಲ!

ಇದರಿಂದ ಸಾಗಾಣಿಕೆ ವೆಚ್ಚ ಹಾಗೂ ಮಧ್ಯವರ್ತಿಗಳಿಗೆ ನೀಡುವ ಕಮಿಷನ್ ಸಹ ರೈತ ಈರಪ್ಪರೆಡ್ಡಿಗೆ ಉಳಿಯುತ್ತದೆ. ಜುಕಿನಿ ಸಸ್ಯ ಎಲ್ಲಾ ಕಡೆಗಳಲ್ಲೂ ಲಭ್ಯವಿಲ್ಲ. ಹಾಗಾಗಿ ರೈತರು ಇದರ ಬೀಜವನ್ನು ತಂದು ಅದನ್ನು ಸಸಿ ಮಾಡಿ ತೋಟಗಳಲ್ಲಿ ನಾಟಿ ಮಾಡಿ ಬೆಳೆಸಿಕೊಳ್ಳಬೇಕು. ಇನ್ನು ರೈತ ಈರಪ್ಪರೆಡ್ಡಿ ಈ ಹಿಂದೆ ಟೊಮೆಟೊ ಹಾಗೂ ಮತ್ತಿತರ ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ಬೆಳೆಯುತ್ತಿದ್ರು. ಆದ್ರೀಗ ಹೊಸ ಬೆಳೆಗೆ ಕೈ ಹಾಕಿದ್ದು ಮೊದಲ ಬಾರಿಯೇ ಭರ್ಜರಿ ಲಾಭಗಳಿಸುತ್ತಿದರೋದು ವಿಶೇಷ. ನೀವು ಏನಾದ್ರು ಈ ಬೆಳೆ ಬೆಳೀಬೇಕು ಅಂತ ಅಂದುಕೊಂಡಿದ್ರೆ ಆನ್‌ಲೈನ್‌ನಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಸಹ ಇದೆ. ಇದರಿಂದ ನಿಮಗೆ ಜುಕಿನಿ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ.

Latest Videos
Follow Us:
Download App:
  • android
  • ios