Modern Commode in Bengaluru Home Balcony: ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಅಥವಾ ಮನೆಯೊಂದರ ಬಾಲ್ಕನಿಯಲ್ಲಿ ಮಾಡರ್ನ್‌ ಕಮೋಡ್‌ ಇಡಲಾಗಿದೆ. ಇದನ್ನು ಇಬ್ಬರು ಹುಡುಗಿಯರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡಿದ್ದಾರೆ.

ಬೆಂಗಳೂರು ಸಾಕಷ್ಟು ವಿಷಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಬಾಡಿಗೆ ಮನೆ ಸಿಗಲು ಕೂಡ, ಉತ್ತಮ ಜೀವನಶೈಲಿಯನ್ನು ಹೊಂದಲು ಹಣ ಬೇಕೇ ಬೇಕು. ಹೀಗಿರುವಾಗ ಬೆಂಗಳೂರಿನಲ್ಲಿ ಬಾಲ್ಕನಿಯೊಂದರಲ್ಲಿ ಮಾಡರ್ನ್‌ ಕಮೋಡ್‌ ( Modern Commode in Bengaluru Home Balcony ) ಇಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಶಿಯಲ್‌ ಮೀಡಿಯಾದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್‌ ಆಗಿದೆ. ಶೇರ್ ಆಗಿರುವ ಈ ವಿಡಿಯೋದಲ್ಲಿ, ಮನೆಯ ಹಿಂಭಾಗದ ರಸ್ತೆಗೆ ವಿರುದ್ಧವಾಗಿರುವ ಕಡೆ ಬಾಲ್ಕನಿ ಇಡಲಾಗಿದೆ. ಅಲ್ಲಿ ವೆಸ್ಟರ್ನ್‌ ಕಮೋಡ್‌ ಇಡಲಾಗಿದೆ. ಅಷ್ಟೇ ಅಲ್ಲದೆ ಆ ಬಾಲ್ಕನಿಗೆ ಕಬ್ಬಿಣದ ಮೆಸ್‌ ಹಾಕಲಾಗಿದೆ. ಆದರೆ ಇದೆಲ್ಲ ಪಾರದರ್ಶಕವಾಗಿದೆ.

ನೀವು ಅಂದುಕೊಂಡಿದ್ದು ತಪ್ಪು

ಇನ್ನೂ ಕೂಡ ಆ ಮನೆಯಲ್ಲಿ Renovation ಕೆಲಸ ಆಗುತ್ತಿರಬಹುದು. ಹಳೆಯ ಕಮೋಡ್ ಕಿತ್ತಿಟ್ಟಿದ್ದು, ಅದನ್ನು ಬಾಲ್ಕನಿಯಲ್ಲಿ ತಂದಿಟ್ಟಿರಬಹುದು. ಆಗ ಈ ವಿಡಿಯೋ ಮಾಡಿರಬಹುದು, ಮನೆಯ ಒಳಗಿನ ಪೈಪ್‌ಲೈನ್ ಲಿಂಕ್ ತಪ್ಪಿ ಹೋಗಿರಬಹುದು, ಬಾಲ್ಕನಿಯ ಡ್ರೈನೇಜ್ ಪೈಪ್‌ಗೆ ಇದನ್ನು ಕನೆಕ್ಟ್ ಮಾಡಿದ್ದರೂ ಮಾಡಿರಬಹುದು, ಯಾರಾದರೂ ಈ ಟಾಯ್ಲೆಟ್‌ನ್ನು ನಿಜವಾಗಿಯೂ ಬಳಸುತ್ತಾರಾ? ಸುತ್ತಲೂ ಯಾವುದೇ ಗೋಡೆ ಕೂಡ ಇಲ್ಲ. ಸದ್ಯಕ್ಕೆ ಇದನ್ನು ಅಲ್ಲಿಯೇ ಇಟ್ಟಿದ್ದು, ಆಮೇಲೆ ಬೇರೆ ಕಡೆ ಇಡುವ ಪ್ಲ್ಯಾನ್‌ ಕೂಡ ಇರಬಹುದು ಎಂದು ನೀವು ಅಂದುಕೊಂಡಿರಬಹುದು, ಆದರೆ ಇದು ಸತ್ಯ ಅಲ್ಲ.

ಜನರು ಏನಂದ್ರು?

ಈ ಟಾಯ್ಲೆಟ್‌ ವರ್ಕ್‌ ಆಗ್ತಿದೆ ಎಂದು ಕೂಡ ಹುಡುಗಿ ಚೆಕ್‌ ಮಾಡಿ ಹೇಳಿದ್ದಾರೆ. ಹೀಗಾಗಿ ಅನೇಕರು ಈ ವಿಡಿಯೋ ನೋಡಿ ಕಾಮೆಂಟ್‌ ಮಾಡಿದ್ದಾರೆ. ಇದು ಪ್ರಕೃತಿಯ ಮಧ್ಯೆ ಪ್ರಕೃತಿ ಕರೆಯನ್ನು ಆಲಿಸಲು ಅತ್ಯಾಧುನಿಕ ಐಡಿಯಾ, ಬೆಂಗಳೂರಿನಲ್ಲಿ ಜಾಗದ ಬೆಲೆ ಎಷ್ಟು ಹೆಚ್ಚಾಗಿದೆ ಅಂದರೆ ಬಾಲ್ಕನಿಯನ್ನೂ ಬಾತ್‌ರೂಮ್ ಆಗಿ ಬಳಸುತ್ತಿದ್ದಾರೆ ಎಂದೆಲ್ಲ ಕೆಲವರು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಮನೆ ಅಥವಾ ಪಿಜಿ ರೂಮ್‌ಗಳು ತುಂಬ ಚಿಕ್ಕದಾಗಿರುತ್ತವೆ. ಇದರ ಜೊತೆಗೆ ಅಟ್ಯಾಚ್‌ ಬಾತ್‌ರೂಮ್‌ ಅನೇಕರಿಗೆ ಬೇಕು. ಜಾಗದ ಸಮಸ್ಯೆಯಿಂದ ಇನ್ನೊಂದು ಟಾಯ್ಲೆಟ್‌ ಇರಲಿ ಎಂದು ಕೂಡ ಹೀಗೆ ಮಾಡಿರಬಹುದು ಎಂದು ಕೆಲವರು ಹೇಳಿದ್ದಾರೆ. 

ಅಸಲಿ ಕಾರಣ ಏನು?

ವಿದೇಶಗಳಲ್ಲಿ 'ಓಪನ್ ಏರ್ ಬಾತ್‌ರೂಮ್' ಇರುತ್ತದೆ. ಆದರೆ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಜನರು ಇದ್ದಾರೆ, ಹೀಗಿರುವಾಗ ಈ ರೀತಿ ಮಾಡಿರೋದು ಸರಿ ಅಲ್ಲ ಎಂದು ಕೂಡ ಕೆಲವರು ಹೇಳಿದ್ದಾರೆ. ನಿಜಕ್ಕೂ ಯಾಕೆ ಈ ರೀತಿ ಮಾಡಿದ್ದರು ಎಂದು ಆ ಮನೆಯವರೇ ಹೇಳಬೇಕಿದೆ.