ಮಂಗಳೂರು(ಜು.08): ದ.ಕ. ಜಿಲ್ಲೆಯಲ್ಲಿ ಒಂದು ವಾರದಿಂದೀಚೆಗೆ ಕೊರೋನಾ ಪೀಡಿತರ ಸಂಖ್ಯೆ ನೂರರ ಆಸು​ಪಾ​ಸಿನ ಸಂಖ್ಯೆ​ಯಲ್ಲಿ ಮುಂದುವರಿಯುತ್ತಿದೆ. ಮಂಗಳವಾರ ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ 83 ಪಾಸಿಟಿವ್‌ ಕೇಸ್‌ ಪತ್ತೆಯಾಗಿದೆ.

ಇದೇ ರೀತಿ ಕೊರೋನಾದಿಂದ ಮಂಗಳವಾರವೂ ಒಬ್ಬರು ಮೃತಪಟ್ಟಿದ್ದಾರೆ. ಈ ಎರಡು ಬೆಳವಣಿಗೆಗಳು ಜಿಲ್ಲೆಯ ಜನತೆಯಲ್ಲಿ ಆತಂಕ ಮನೆಮಾಡುವಂತೆ ಮಾಡಿದೆ. ಒಂದೇ ದಿನ 99 ಮಂದಿ ಡಿಸ್ಚಾಜ್‌ರ್‍ ಆಗಿರುವುದು ಸಮಾಧಾನ ಸಂಗತಿ.

ಮಂಗಳೂರಲ್ಲಿ ಹೆಚ್ಚಿದ ಕೊರೋನಾ: ಕೇರಳಿಗರ ಡೈಲಿ ಪಾಸ್ ರದ್ದು, ಇಲ್ಲಿವೆ ಫೋಟೋಸ್

ಮಂಗಳವಾರವೂ 83 ಪಾಸಿಟಿವ್‌ ಕೇಸ್‌ ದೃಢಪಟ್ಟಿದ್ದು, ಇದುವರೆಗೆ 1,359 ಪಾಸಿಟಿವ್‌ ಕೇಸ್‌ ಪತ್ತೆಯಾದಂತಾಗಿದೆ. ಜಿಲ್ಲೆಯ 20,89,649 ಜನಸಂಖ್ಯೆಗೆ ಹೋಲಿಸಿದರೆ, ಪಾಸಿಟಿವ್‌ ಕೇಸಿನ ಪ್ರಮಾಣ ಶೇ. 0.065 ಆಗಿದೆ. ಖಾಸಗಿ ಆಸ್ಪತ್ರೆ ಸೇರಿದಂತೆ ಕೋವಿಡ್‌ ಚಿಕಿತ್ಸೆ ಪಡೆಯುತ್ತಿರುವ 99 ಮಂದಿ ಮಂಗಳವಾರ ಡಿಸ್ಚಾಜ್‌ರ್‍ ಆಗಿದ್ದಾರೆ. 650 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 26 ಮಂದಿ ಸಾವಿಗೀಡಾಗಿದ್ದಾರೆ. ಮೂರು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಮತ್ತು ನ್ಯೂಮೋನಿಯಾದಿಂದ ಬಳಲುತ್ತಿದ್ದ 65 ವರ್ಷದ ಮೂಡುಬಿದಿರೆ ನಿವಾಸಿಯನ್ನು ಜು.3ರಂದು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮಂಗಳವಾರ ಮೃತಪಟ್ಟಿದ್ದಾರೆ.

ಮಣ್ಣಿ​ನಡಿ ಸಿಲುಕಿ ಸ್ಥಳ​ದಲ್ಲೇ ಕೊನೆ​ಯು​ಸಿ​ರು

ಮಂಗಳವಾರ ದೃಢಪಟ್ಟ83 ಕೊರೋನಾ ಪ್ರಕರಣ ಪೈಕಿ 48 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, ಇಬ್ಬರಿಗೆ ದ್ವಿತೀಯ ಸಂಪರ್ಕದಿಂದ ಸೋಂಕು ತಟ್ಟಿದೆ. ಜ್ವರ, ಕೆಮ್ಮು ಬಾಧೆಯಿಂದ 20 ಮಂದಿ, ಶ್ವಾಸಕೋಶ ತೊಂದರೆಯಿಂದ ಒಬ್ಬರು, ಚಿಕ್ಕಮಗಳೂರಿನಿಂದ ಅಂತರ್‌ ಜಿಲ್ಲಾ ಸಂಪರ್ಕದಿಂದ ಇಬ್ಬರಿಗೆ, ರಾರ‍ಯಡಮ್‌ ಸ್ಯಾಂಪಲ್‌ನಿಂದ ಮೂವರಿಗೆ, ಸರ್ಜರಿ ಪೂರ್ವ ಸ್ಯಾಂಪಲ್‌ನಿಂದ ಮೂವರಿಗೆ, ಪ್ರಸವಪೂರ್ವ ಸ್ಯಾಂಪಲ್‌ನಿಂದ ಒಬ್ಬರಿಗೆ ಕೊರೋನಾ ಸೋಂಕು ಕಾಣಿಸಿದೆ. ಮೂರು ಮಂದಿಯ ಸಂಪರ್ಕವನ್ನು ಕಲೆಹಾಕಲಾಗುತ್ತಿದೆ ಎಂದು ಜಿಲ್ಲಾಡಳಿತದ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.