ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟದಲ್ಲಿ ಮದ್ಯಪಾನ ಮಾಡಬೇಡ ಎಂದು ಬುದ್ಧಿ ಹೇಳಿದ 75 ವರ್ಷದ ತಾಯಿ ಬುಳ್ಳಮ್ಮರನ್ನು ಮಗ ಹನುಮಂತ ಮರದ ಪಟ್ಟಿಯಿಂದ ಹೊಡೆದು ಜೀವ ತೆಗೆದಿದ್ದಾನೆ.. ಆರೋಪಿಗೆ ಗ್ರಾಮಸ್ಥರು ಥಳಿಸಿದ್ದು, ಬಸವಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾವಣಗೆರೆ (ನ.14): ಕುಡಿದ ಮತ್ತಿನಲ್ಲಿದ್ದ ಮಗನಿಗೆ ಕುಡಿಬೇಡಪ್ಪ ಆರೋಗ್ಯ ಕೆಡುತ್ತೆ ಅಂತಾ ಬುದ್ಧಿ ಹೇಳಿದ್ದ ಹೆತ್ತ ತಾಯಿಗೆ ಮರದ ಪಟ್ಟಿಯೊಂದರಿಂದ ತಲೆಗೆ ಹೊಡೆದು ಜೀವ ತೆಗೆದ ಆಘಾತಕಾರಿ ಘಟನೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.

ಒಬ್ಬನೇ ಮಗ ಅಂತಾ ಬುದ್ಧಿ ಹೇಳಿದ್ದಕ್ಕೆ ಜೀವ ಹೋಯ್ತು!

ಹರಪನಹಳ್ಳಿ ತಾಲೂಕಿನ ಹಾರಕನಾಳ್ ಗ್ರಾಮದ ಬುಳ್ಳಮ್ಮ (75) ಜೀವ ಕಳೆದುಕೊಂಡ ತಾಯಿ. ಬುಳ್ಳಮ್ಮನಿಗೆ ಒಟ್ಟು 10 ಮಕ್ಕಳಿದ್ದು, 9 ಜನ ಹೆಣ್ಣು ಮಕ್ಕಳು, ಕೊಲೆ ಮಾಡಿದ ಹನುಮಂತ 9ನೇ ಮಗನಾಗಿದ್ದು, ಏಕೈಕ ಪುತ್ರ ಎಂದು ತಿಳಿದು ಬಂದಿದೆ. ಬುಳ್ಳಮ್ಮನ ಸಾವಿಗೆ ಕಾರಣನಾದ ಮಗ ಹನುಮಂತನಿಗೆ ಸಂಬಂಧಿಗಳು, ಗ್ರಾಮಸ್ಥರು ಧರ್ಮದೇಟು ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತನ್ನ ಮಗಳ ಮನೆಯಾದ ದೊಡ್ಡಘಟ್ಟ ಗ್ರಾಮದಲ್ಲೇ ಬುಳ್ಳಮ್ಮ ಇದ್ದರು. ಆರೋಪಿ ಹನುಮಂತ ಕುಡಿದು ತನ್ನ ಸಹೋದರಿ ಮನೆಗೆ ಬಂದಿದ್ದಾನೆ. ಆಗ ಬುಳ್ಳಮ್ಮ ಕುಡಿಯದಂತೆ ಬುದ್ಧಿ ಹೇಳಿದ್ದಾಳೆ. ಆಕ್ರೋಶಗೊಂಡ ಹನುಮಂತ ಅಲ್ಲಿಯೇ ಇದ್ದ ಮರದ ಪಟ್ಟಿಯಿಂದ ಬುಳ್ಳಮ್ಮನ ತಲೆಗೆ ಹೊಡೆದಿದ್ದರಿಂದ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತ ಬುಳ್ಳಮ್ಮನಿಗೆ ಒಟ್ಟು 10 ಮಕ್ಕಳಿದ್ದು, 9 ಜನ ಹೆಣ್ಣು ಮಕ್ಕಳು, ಕೊ ಲೆ ಮಾಡಿದ ಹನುಮಂತ 9ನೇ ಮಗನಾಗಿದ್ದು, ಏಕೈಕ ಪುತ್ರ ಎಂದು ತಿಳಿದು ಬಂದಿದೆ.

ಆರೋಪಿ ಮಗನಿಗೆ ಸಂಬಂಧಿಗಳು ಊರವರಿಂದ ಧರ್ಮದೇಟು

ಬುಳ್ಳಮ್ಮನನ್ನು ಕೊಂ ದ ಹನುಮಂತನಿಗೆ ಸಂಬಂಧಿಗಳು, ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಆರೋಪಿ ಹನುಮಂತನಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತ ಬುಳ್ಳಮ್ಮನ ಪಾರ್ಥೀವ ಶರೀರವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರ ವಶಕ್ಕೆ ಒಪ್ಪಿಸಲಾಗಿದೆ. ಬಸವಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.