ಈ ಹಿಂದೆ ಆಗಸ್ಟ್ 14ರಂದು 9.17 ಲಕ್ಷ ಜನ ಸಂಚರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಅಂದು ಸ್ವಾತಂತ್ರ್ಯ ದಿನಾಚರಣೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಹಾಗೂ ಸಾಲು ಸಾಲು ರಜೆಯಿದ್ದ ಕಾರಣ ಊರಿಗೆ ತೆರಳುವವರು ಹೆಚ್ಚಿನ ಜನ ಸಂಚಾರ ಮಾಡಿದ್ದರು. ಆದರೆ, ಶುಕ್ರವಾರ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಬಿಟ್ಟು ಹೆಚ್ಚಿನ ಕಾರ್ಯಕ್ರಮ ಇಲ್ಲದಿದ್ದರೂ ಹೆಚ್ಚಿನ ಪ್ರಯಾಣಿಕರು ಮೆಟ್ರೋವನ್ನು ಬಳಸಿದ್ದಾರೆ. 

ಬೆಂಗಳೂರು(ಡಿ.08): ನಮ್ಮ ಮೆಟ್ರೋದಲ್ಲಿ ಶುಕ್ರವಾರ (ಡಿ.6) ಬರೋಬ್ಬರಿ 9.20 ಲಕ್ಷ ಜನ ಸಂಚಾರ ಮಾಡಿದ್ದು, ಇದು 1 ದಿನದ ಪ್ರಯಾಣಿಕರ ಸಂಖ್ಯೆಯಲ್ಲಿ ನೂತನ ದಾಖಲೆಯಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿದೆ. 

ಈ ಹಿಂದೆ ಆಗಸ್ಟ್ 14ರಂದು 9.17 ಲಕ್ಷ ಜನ ಸಂಚರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಅಂದು ಸ್ವಾತಂತ್ರ್ಯ ದಿನಾಚರಣೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಹಾಗೂ ಸಾಲು ಸಾಲು ರಜೆಯಿದ್ದ ಕಾರಣ ಊರಿಗೆ ತೆರಳುವವರು ಹೆಚ್ಚಿನ ಜನ ಸಂಚಾರ ಮಾಡಿದ್ದರು. ಆದರೆ, ಶುಕ್ರವಾರ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಬಿಟ್ಟು ಹೆಚ್ಚಿನ ಕಾರ್ಯಕ್ರಮ ಇಲ್ಲದಿದ್ದರೂ ಹೆಚ್ಚಿನ ಪ್ರಯಾಣಿಕರು ಮೆಟ್ರೋವನ್ನು ಬಳಸಿದ್ದಾರೆ. 

ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಡಬಲ್‌ ಡೆಕ್ಕರ್‌ ರೈಲುಗಳು: ಟೆಂಡರ್‌ ಆಹ್ವಾನ

ಶುಕ್ರವಾರ ನೇರಳೆ ಮಾರ್ಗದಲ್ಲಿ 4.39,616 ಹಾಗೂ ಹಸಿರು ಮಾರ್ಗದಲ್ಲಿ 3,12,248 ಸೇರಿ ದಂತೆ 9,20,562 ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಇಂಟರ್‌ಚೇಂಜ್ ಕೆಂಪೇಗೌಡ ನಿಲ್ದಾಣದಲ್ಲಿ 1,67,617 ಪ್ರಯಾಣಿಕರು ಸಂಚಾರ ಮಾಡಿದ್ದಾರೆ. 1081 ಪ್ರಯಾಣಿಕರು ಪೇಪರ್ ಟಿಕೆಟ್ ಬಳಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. 

ಆದಾಗ್ಯೂ, ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರವರೆಗಿನ ಮಾರ್ಗ ವಿಸ್ತರಣೆಯಿಂದಾಗಿ ಇನ್ನೂ ಹೆಚ್ಚಿನ ಪ್ರಯಾಣಿಕರು ಮೆಟ್ರೋವನ್ನು ಬಳಸುವ ನಿರೀಕ್ಷೆಯಿತ್ತು. ಹಸಿರು ಹಾಗೂ ನೇರಳೆ ಮಾರ್ಗಗಳೆರಡೂ ಪೂರ್ಣಗೊಂಡಿದ್ದರೂ ಇನ್ನೂವರೆಗೆ ಬಿಎಂಆರ್ ಸಿಎಲ್ ನಿರೀಕ್ಷಿತ ಗುರಿಯಷ್ಟು ಪ್ರಯಾಣಿಕರು ಮೆಟ್ರೋವನ್ನು ಬಳಸುತ್ತಿಲ್ಲ. ಇದಕ್ಕೆ ಕೊನೆ ಮೈಲಿ ಸಂಪರ್ಕ ಸಮಸ್ಯೆ ಸೇರಿ ಇತರೆ ಕಾರಣಗಳಿವೆ ಎಂದು ಮೆಟ್ರೋ ಸಾರಿಗೆ ತಜ್ಞರು ಹೇಳಿದ್ದಾರೆ.

ಬೆಂಗಳೂರು: ಮೆಟ್ರೋ ನೀಲಿ ಮಾರ್ಗ 2 ಹಂತದಲ್ಲಿ ಶುರು?

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗವನ್ನು 2 ಹಂತದಲ್ಲಿ ಸೇವೆಗೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಯೋಜಿಸಿದೆ. 
ಪ್ರಸ್ತುತ ಚಾಲ್ತಿಯಲ್ಲಿರುವ ನೇರಳೆ, ಹಸಿರು ಮಾರ್ಗಗಳು ಕೂಡ ಎರಡು, ಮೂರು ಹಂತಗಳಲ್ಲಿ ಲೋಕಾರ್ಪಣೆ ಆಗಿವೆ. ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಹಾಗೂ ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗವನ್ನು ಕೂಡ ಎರಡು ಹಂತದಲ್ಲಿ ಜನಸಂಚಾರಕ್ಕೆ ತೆರೆಯಲು ಬಿಎಂಆರ್‌ಸಿಎಲ್ ಯೋಜಿಸಿದೆ. ಈಗ ನೀಲಿ ಮಾರ್ಗವನ್ನು ಕೂಡ ಇದೇ ಮಾದರಿಯಲ್ಲಿ ತೆರೆಯಲಾಗುವದೆಂದು ಬಿಎಂಆರ್‌ಸಿಎಲ್ ಮೂಲ ತಿಳಿಸಿವೆ. 

7 ವರ್ಷಗಳ ನಂತರ ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ; 15 ರೂ. ಕನಿಷ್ಠ ದರ

ಒಟ್ಟು 38 ಕಿ.ಮೀ. ಇರುವ ನೀಲಿ ಮಾರ್ಗದಲ್ಲಿ ವಿಮಾನ ನಿಲ್ದಾಣದಿಂದ ಹೆಬ್ಬಾಳದವರೆಗಿನ ಕಾಮಗಾರಿಗಳು ಚುರುಕಿನಿಂದ ನಡೆಯುತ್ತಿವೆ. ಹೀಗಾಗಿ ಮೊದಲು ಈ ಹಂತವನ್ನು ಪೂರ್ಣಗೊಳಿಸಿ 2026ರ ಸೆಪ್ಟೆಂಬರ್‌ನಲ್ಲಿ ಸಂಚಾರಕ್ಕೆ ತೆರೆಯುವ ಹಾಗೂ ಬಳಿಕ ಹೆಬ್ಬಾಳದಿಂದ ಕೆ.ಆ‌ರ್.ಪುರದವರೆಗಿನ ಹಂತವನ್ನು 2026ರ ಅಂತ್ಯ ಅಥವಾ 2027ರಲ್ಲಿ ತೆರೆಯಲು ಯೋಜಿಸಲಾಗಿದೆ. 

ಒಟ್ಟಾರೆ ಮಾರ್ಗದ ಕಾಮಗಾರಿ ಮುಗಿಸಿ ವಾಣಿಜ್ಯ ಸಂಚಾರ ಆರಂಭಿಸುವುದು ವಿಳಂಬವಾಗುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ನೀಲಿ ಹಾಗೂ ಗುಲಾಬಿ ಮಾರ್ಗಕ್ಕೆ ಭಾರತ್ ಅರ್ಥ್ ಮೂವರ್ಸ್ ಲಿ. ಈ ಮಾರ್ಗಕ್ಕಾಗಿ ರೈಲುಗಳನ್ನು (318 ಬೋಗಿ) ಪೂರೈಸಲಿದೆ.ಆರುಬೋಗಿಗಳ 16 ರೈಲುಗಳು ಗುಲಾಬಿ ಮಾರ್ಗಕ್ಕೆ, ಆರು ಬೋಗಿಗಳ 16 ರೈಲು ಕೇಂದ್ರ ರೇಷ್ಮೆ ಮಂಡಳಿಯಿಂದ ಕೆ.ಆರ್.ಪುರ ಹಾಗೂ ಆರು ಬೋಗಿಗಳ 21 ರೈಲುಗ ಳನ್ನು ಕೆ.ಆರ್.ಪುರ-ವಿಮಾನ ನಿಲ್ದಾಣ ಮಾರ್ಗಕ್ಕೆ ನಿಯೋಜನೆ ಆಗಲಿವೆ. 2025ರ ಡಿಸೆಂಬರ್‌ನಿಂದ ಈ ಮಾರ್ಗಗಳಿಗೆ ರೈಲು ಪೂರೈಸುವ ಸಂಬಂಧ ಒಪ್ಪಂದವಾಗಿದೆ.