ಕೊರೋನಾದಿಂದ 80 ವರ್ಷದ ವೃದ್ಧೆ ಗುಣಮುಖ| ಕೋವಿಡ್‌ ಅಸ್ಪತ್ರೆಯಿಂದ ಬಿಡುಗಡೆ| ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ 23 ವರ್ಷದ ಗರ್ಭಿಣಿಯಿಂದ 80 ವರ್ಷದ ವೃದ್ಧೆಗೆ ಸೋಂಕು ತಗುಲಿತ್ತು| 80 ವರ್ಷದ ವೃದ್ಧೆ ಜತೆ ಇನ್ನಿಬ್ಬರು ಗುಣಮುಖ, ಡಿಸ್ಚಾರ್ಜ್‌| 

ಬಾಗಲಕೋಟೆ(ಮೇ.31): ಕೊರೋನಾ ಸೋಂಕಿನಿಂದ ಬಳಲುತ್ತಿದ್ದ 80 ವರ್ಷದ ವೃದ್ಧೆ (ಪಿ.703) 18 ದಿನಗಳ ಚಿಕಿತ್ಸೆ ನಂತರ ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಚ್‌ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ 80 ವರ್ಷದ ವೃದ್ಧೆಗೆ, ಅದೇ ಗ್ರಾಮದ 23 ವರ್ಷದ ಗರ್ಭಿಣಿ (ಪಿ.607)ಯಿಂದ ಸೋಂಕು ತಗುಲಿತ್ತು. ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಆಸ್ಪತ್ರೆಯ ಅಧಿಕಾರಿಗಳು, ವೈದ್ಯರು ಹಾಗೂ ಎಲ್ಲ ಸಿಬ್ಬಂದಿಗೆ ವೃದ್ಧೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. 

ಬಾಗಲಕೋಟೆ: ಒಂದೇ ದಿನ 17 ಕೊರೋನಾ ಸೋಂಕಿತರು ಗುಣಮುಖ

23 ದಿನಗಳ ಕಾಲ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಯಾವುದೇ ಕೊರತೆ ಮಾಡಿಲ್ಲ. ತಾಯಿಯಂತೆ ನೋಡಿಕೊಂಡು ಉತ್ತಮ ಚಿಕಿತ್ಸೆ, ಊಟ ನೀಡಿರುವುದಾಗಿ ತಿಳಿಸಿದರು. ಶನಿವಾರ 80 ವರ್ಷದ ವೃದ್ಧೆ ಜತೆ ಇನ್ನಿಬ್ಬರು ಗುಣಮುಖರಾಗಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ.