ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ: ನದಿಯಲ್ಲಿದ್ದ 8 ತೆಪ್ಪ ಜಪ್ತಿ
ವಿರೂಪಾಪುರ ಗಡ್ಡೆ, ಸಣ್ಣಾಪುರ ಮತ್ತು ಆನೆಗೊಂದಿ ನದಿ ಪ್ರವಾಹ ಬಂದ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತೆಪ್ಪ ಹಾಕದಂತೆ ಆದೇಶ ಡಿಸಿ ಹೊರಡಿಸಿದ್ದರು| ವಿದೇಶಿ ಪ್ರವಾಸಿಗರನ್ನು ಕರೆದು ಕೊಂಡು ಹೋಗುತ್ತಿದ್ದ ತೆಪ್ಪಗಳನ್ನು ಕಂದಾಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ|
ಗಂಗಾವತಿ[ಡಿ.07]: ತಾಲೂಕಿನ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರನ್ನು ತೆಪ್ಪದಲ್ಲಿ ಕರೆದುಕೊಂಡು ಹೋಗದಂತೆ ಜಿಲ್ಲಾಡಳಿತ ಸೂಚಿಸಿದ್ದರೂ ಆದೇಶ ಉಲ್ಲಂಘಿಸಿದ್ದರಿಂದ ನದಿಯಲ್ಲಿ ಹಾಕಿದ್ದ 8 ತೆಪ್ಪಗಳನ್ನು ಕಂದಾಯ ಇಲಾಖೆ ಜಪ್ತಿ ಮಾಡಿದೆ.
ನಾಲ್ಕು ತಿಂಗಳ ಹಿಂದೆ ವಿರೂಪಾಪುರ ಗಡ್ಡೆ, ಸಣ್ಣಾಪುರ ಮತ್ತು ಆನೆಗೊಂದಿ ನದಿ ಪ್ರವಾಹ ಬಂದ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತೆಪ್ಪ ಹಾಕದಂತೆ ಆದೇಶ ಹೊರಡಿಸಿದ್ದರು. ಆದರೆ ತೆಪ್ಪ ಮಾಲಿಕರು ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸಿ ಸಣ್ಣಾಪುರ ಸಮತೋಲನ ಜಲಾಶಯ ಮತ್ತು ಸಣ್ಣಾಪುರ ನದಿಯಲ್ಲಿ ವಿದೇಶಿ ಪ್ರವಾಸಿಗರನ್ನು ಕರೆದು ಕೊಂಡು ಹೋಗುತ್ತಿದ್ದ ತೆಪ್ಪಗಳನ್ನು ಕಂದಾಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ವೇಳೆ ಮಾಲಿಕರು ಪರಾರಿಯಾಗಿದ್ದು ತೆಪ್ಪಗಳನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ ತಿಳಿಸಿದ್ದಾರೆ.