ಭಟ್ಕಳದಲ್ಲಿ ಕೊರೋನಾ ಕರಿನೆರಳು: 8 ಜನರಿಗೆ ಸೋಂಕು
ಭಟ್ಕಳದಲ್ಲಿ ಶನಿವಾರ 8 ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಇಬ್ಬರು ಮಕ್ಕಳು, ವೃದ್ಧರೂ ಸೇರಿದ್ದಾರೆ. ಮೇ 6ರಂದು ಸೋಂಕು ಕಾಣಿಸಿಕೊಂಡ 18ರ ಯುವತಿ (ಪಿ.659)ಯ ಕುಟುಂಬದವರು 6 ಜನರು, ಯುವತಿಯ ಸ್ನೇಹಿತೆಯ ತಂದೆ ಹಾಗೂ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.
ಕಾರವಾರ(ಮೇ 10): ಭಟ್ಕಳದಲ್ಲಿ ಶನಿವಾರ 8 ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಇಬ್ಬರು ಮಕ್ಕಳು, ವೃದ್ಧರೂ ಸೇರಿದ್ದಾರೆ. ಮೇ 6ರಂದು ಸೋಂಕು ಕಾಣಿಸಿಕೊಂಡ 18ರ ಯುವತಿ (ಪಿ.659)ಯ ಕುಟುಂಬದವರು 6 ಜನರು, ಯುವತಿಯ ಸ್ನೇಹಿತೆಯ ತಂದೆ ಹಾಗೂ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.
ಸೋಂಕಿತರಲ್ಲಿ ಎರಡು ವರ್ಷ ಆರು ತಿಂಗಳಿನ ಹೆಣ್ಣು ಮಗು, ಒಂದೂವರೆ ವರ್ಷದ ಗಂಡು ಮಗು ಹಾಗೂ 65ರ ವೃದ್ಧ ಸಹ ಇದ್ದಾರೆ. ಒಟ್ಟೂ8 ಸೋಂಕಿತರಲ್ಲಿ ಐವರು ಸ್ತ್ರೀ ಹಾಗೂ ಮೂವರು ಪುರುಷರಾಗಿದ್ದಾರೆ.
ಬಿರು ಬೇಸಿಗೆಯಲ್ಲೇ ಕೆರೆಗೆ ನೀರು ತುಂಬಿಸಿ ಭಗೀರಥನಾದ ಶಾಸಕ ನಡಹಳ್ಳಿ..!
ಇವರ ನೇರ ಸಂಪರ್ಕಕ್ಕೆ ಬಂದ 30 ಜನರ ಗಂಟಲ ದ್ರವದ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜನತೆ ಭಯಪಡುವ ಅಗತ್ಯ ಇಲ್ಲ. ಪಾಸಿಟಿವ್ ಬಂದವರ ನೇರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರೆಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪರಿಂದ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ..?
ಶುಕ್ರವಾರ ಭಟ್ಕಳದ 12 ಜನರಲ್ಲಿ ಕೋವಿಡ್ -19 ಸೋಂಕು ಕಾಣಿಸಿಕೊಂಡು ತಲ್ಲಣ ಉಂಟಾಗಿತ್ತು. ಶನಿವಾರ ಬೆಳಗ್ಗೆಯ ಆರೋಗ್ಯ ಬುಲೆಟಿನ್‌ನಲ್ಲಿ 7 ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಖಚಿತವಾಗಿತ್ತು. ಸಂಜೆ ಬುಲೆಟಿನ್‌ನಲ್ಲಿ 32 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿದೆ. ಇದರಿಂದ ಶನಿವಾರ ಇನ್ನಷ್ಟುಕಳವಳ ಹುಟ್ಟಿಸಿದೆ. ಈಗ ಜಿಲ್ಲೆಯಲ್ಲಿ ಕೋವಿಡ್-19 ಸಕ್ರಿಯ ಸೋಂಕಿತರ ಸಂಖ್ಯೆ 20ಕ್ಕೇರಿದೆ. ಇದಕ್ಕೂ ಮುನ್ನ 11 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.