ಬಿರು ಬೇಸಿಗೆಯಲ್ಲೇ ಕೆರೆಗೆ ನೀರು ತುಂಬಿಸಿ ಭಗೀರಥನಾದ ಶಾಸಕ ನಡಹಳ್ಳಿ..!
ವಿಜಯಪುರ(ಮೇ.10): ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ವಿಶೇಷ ಕಾಳಜಿ ವಹಿಸಿ ತಾಲೂಕಿನ ಮಲಗಲದಿನ್ನಿ ಕೆರೆಗೆ ನೀರು ತುಂಬಿಸಿದ್ದಾರೆ. ಈ ಮೂಲಕ ಮಲಗಲದಿನ್ನಿ ಕೆರೆಗೆ ನೀರು ತುಂಬಿಸುವ ಬಹುವರ್ಷಗಳ ಬೇಡಿಕೆಯಾಗಿದ್ದ ಕನಸನ್ನು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ನನಸಾಗಿಸಿದ್ದಾರೆ.
ಪ್ರಸಕ್ತ ವರ್ಷದ ಬಿರು ಬೇಸಿಗೆಯಲ್ಲಿಯೇ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಕೆರೆಗೆ ನೀರು ತುಂಬಿಸಿದ ಶಾಸಕ ನಡಹಳ್ಳಿ
ತಾಲೂಕಿನ ಸೋಮನಾಳ, ನಾಗರಬೆಟ್ಟ ಹಾಗೂ ಹಿರೆಮೂರಾಳ 3 ಪಂಚಾಯತಿಗಳ ವ್ಯಾಪ್ತಿಗೆ ಬರುವ ಬೂದಿಹಾಳ, ಮಾನಬಾವಿ, ಮಲಗಲದಿನ್ನಿ, ನಾಗರಬೆಟ್ಟ, ಚವನಬಾವಿ, ಹಿರೆಮೂರಾಳ ಸೇರಿದಂತೆ ಜಂಗಮುರಾಳ ಒಟ್ಟು 7 ಗ್ರಾಮಗಳು ಕೆರೆ ಅವಲಂಬಿಸಿವೆ
ಸುಮಾರು 56 ಎಕರೆ ವಿಸ್ತಿರ್ಣವಾದ ಕೆರೆಗೆ ನೀರು ಬಂದಿದ್ದು, ರೈತರ ಬಾಳನ್ನು ಮತ್ತಷ್ಟು ಹಸಿರಾಗಿಸಿದೆ
ಕಳೆದ 25 ವರ್ಷಗಳಿಂದ ಈ ಭಾಗದಲ್ಲಿ ಮಾಡದ ಅಭಿವೃದ್ಧಿಯನ್ನು ಕೇವಲ ಮೂರೇ ವರ್ಷದಲ್ಲಿ ಮಾಡಿ ತೊರಿಸಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ
ಸುಮಾರು 70 ಲಕ್ಷ ವಿಶೇಷ ಅನುದಾನದಲ್ಲಿ ಕೆರೆ ಮರು ನಿರ್ಮಾಣಗೊಳಿಸಿದ ಮಲಗಲದಿನ್ನಿ ದೊಡ್ಡ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ