ಹುಬ್ಬಳ್ಳಿ(ಜೂ.17): ಧಾರವಾಡ ಜಿಲ್ಲೆಯಲ್ಲಿ ಮತ್ತೆ 8 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 163ಕ್ಕೇರಿದಂತಾಗಿದೆ. ದಿನೇ ದಿನೇ ಹೆಚ್ಚುತ್ತಲೇ ಸಾಗಿರುವ ಪ್ರಕರಣಗಳ ಸಂಖ್ಯೆ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ.

ಓರ್ವ ಸೋಂಕಿತ ಶಿಕ್ಷಕಿಯಿಂದ ನಾಲ್ವರಿಗೆ ಸೇರಿದಂತೆ ಆರು ಜನರಿಗೆ ಸಂಪರ್ಕದಿಂದ ಸೋಂಕು ತಗುಲಿದ್ದರೆ, ಇಬ್ಬರಿಗೆ ಅಂತಾರಾಜ್ಯ ಪ್ರವಾಸದ ಹಿನ್ನೆಲೆಯಿಂದ ಸೋಂಕು ಬಂದಿದೆ. ಮಂಗಳವಾರ ಇಬ್ಬರು ಮಕ್ಕಳು, ಇಬ್ಬರು ವೃದ್ಧರು ಸೋಂಕಿತರ ಪಟ್ಟಿಯಲ್ಲಿ ಸೇರಿದ್ದಾರೆ.

ಪರೀಕ್ಷೆ ಕೆಲವೇ ದಿನಗಳಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ

ಯಾರಾರ‍ಯರಿಗೆ ಸೋಂಕು?

ಪಿ-7378 (ಡಿಡಬ್ಲುಡಿ 156) 12 ವರ್ಷದ ಬಾಲಕ, ಪಿ- 7379 (ಡಿಡಬ್ಲುಡಿ - 157) 75 ವರ್ಷದ ವೃದ್ಧೆ, ಪಿ-7380 (ಡಿಡಬ್ಲುಡಿ 158) 83 ವರ್ಷದ ವೃದ್ಧ, ಪಿ -7381(ಡಿಡಬ್ಲುಡಿ 159) 12 ವರ್ಷದ ಗಂಡು ಮಗು ಈ ನಾಲ್ಕು ಜನರು ಸಾಧನಕೇರಿಯ ಒಂದನೆಯ ಕ್ರಾಸ್‌ ನಿವಾಸಿಗಳಿಗೆ. ಪಿ-6835 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಪಿ-7382 (ಡಿಡಬ್ಲುಡಿ-160) 57 ವರ್ಷದ ಪುರುಷ ಇವರು ಧಾರವಾಡ ನಾರಾಯಣಪುರದ ನಿವಾಸಿ. ಇವರಿಗೆ ಪಿ-6836 ಸಂಪರ್ಕದಿಂದ ಸೋಂಕು ತಗುಲಿದೆ. ಪಿ-7383 (ಡಿಡಬ್ಲುಡಿ-161) 57 ವರ್ಷದ ಪುರುಷ. ಇವರು ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರು. ಪಿ-7384 (ಡಿಡಬ್ಲುಡಿ-162) 45 ವರ್ಷದ ಪುರುಷ. ಇವರು ಹುಬ್ಬಳ್ಳಿ ತಾರಿಹಾಳದ ರಾಮನಗರದ ನಿವಾಸಿಯಾಗಿದ್ದಾರೆ. ಪಿ- 6255 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-7385 (ಡಿಡಬ್ಲುಡಿ-163) 49 ವರ್ಷದ ಪುರುಷ. ಇವರು ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದವರು. ಗುಜರಾತ್‌ ರಾಜ್ಯದಿಂದ ಹಿಂದಿರುಗಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 163ಕ್ಕೆ ಏರಿದಂತಾಗಿದೆ. ಈಗಾಗಲೇ 50 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.