ಹುಬ್ಬಳ್ಳಿ ಸಿಲಿಂಡರ್ ಸ್ಫೋಟ: ಗಾಯಗೊಂಡಿದ್ದ 8 ಅಯ್ಯಪ್ಪ ಮಾಲಾಧಾರಿಗಳು ಸಾವು
ಚಿಕಿತ್ಸೆಗೆ ಸ್ಪಂದಿಸದೇ ಪ್ರಕಾಶ ಬಾರಕೇರ (42) ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ತಂದೆ ಮಗ ಇಬ್ಬರು ಮಾಲೆ ಧರಿಸಿದ್ದರು. ತಂದೆ ಮೃತಪಟ್ಟಿದ್ದು, ಮಗನಿಗೆ ಚಿಕಿತ್ಸೆ ಮುಂದುವರಿದಿದೆ. ಈ ಘಟನೆಯಲ್ಲಿ ಹಂತ ಹಂತವಾಗಿ 8 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಮೃತಪಟ್ಟಿದ್ದಾರೆ.
ಹುಬ್ಬಳ್ಳಿ(ಜ.01): ಸಿಲಿಂಡರ್ ಸೋರಿಯಿಂದಾಗಿ ಉಂಟಾದ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಪೈಕಿ ಮತ್ತೊಬ್ಬ ಗಾಯಾಳು ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 8 ಏರಿಕೆಯಾಗಿದ್ದು, ಓರ್ವ ಮಾಲಾಧಾರಿ ಚಿಕಿತ್ಸೆ ಮುಂದುವರಿದಿದೆ.
ಚಿಕಿತ್ಸೆಗೆ ಸ್ಪಂದಿಸದೇ ಪ್ರಕಾಶ ಬಾರಕೇರ (42) ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ತಂದೆ ಮಗ ಇಬ್ಬರು ಮಾಲೆ ಧರಿಸಿದ್ದರು. ತಂದೆ ಮೃತಪಟ್ಟಿದ್ದು, ಮಗನಿಗೆ ಚಿಕಿತ್ಸೆ ಮುಂದುವರಿದಿದೆ. ಈ ಘಟನೆಯಲ್ಲಿ ಹಂತ ಹಂತವಾಗಿ 8 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಇದರಿಂದ ಇಡೀ ಧಾರವಾಡ ಜಿಲ್ಲೆ ತಲ್ಲಣಗೊಂಡಿದ್ದು, ಹೊಸ ವರ್ಷಾಚರಣೆಗೆ ಕಾರ್ಮೋಡ ಕವಿಯುವಂತೆ ಮಾಡಿತು. ವಿಷಯ ತಿಳಿದು ಕೆಎಂಸಿಆರ್‌ಐ ಶವಾಗಾರಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಧಾವಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಂಗಾರದ ಮೇಲೆ ಸಾಲ ನೀಡುವ ಮುತ್ತೂಟ್ ಫೈನಾನ್ಸ್‌ಗೆ ಮೋಸ ಮಾಡಿದ ಮ್ಯಾನೇಜರ್!
ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ ತೇಜಸ್ ಸತಾರೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ನಂತರ ಪ್ರಕಾಶ ಬಾರಕೇರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬೆಳಗ್ಗೆ 11.30ರ ಸುಮಾರಿಗೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಈ ದುರ್ಘಟನೆಯಲ್ಲಿ ಶೇ. 25ರಷ್ಟು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ವಿನಾಯಕ ಬಾರಕೇರ ಗುಣಮುಖರಾಗಿದ್ದು, ಬುಧವಾರ ಇಲ್ಲವೇ ಗುರುವಾರ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗುವುದು ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್. ಎಫ್. ಕಮ್ಮಾರ ಕನ್ನಡಪ್ರಭಕ್ಕೆ ತಿಳಿಸಿದರು.
ಅವಘಡದಿಂದ ಅರ್ಧದಲ್ಲೇ ಮುಗಿದ ಅಯ್ಯಪ್ಪ ವ್ರತ
ಹುಬ್ಬಳ್ಳಿ: ಅಂದುಕೊಂಡಂತೆ ಎಲ್ಲವೂ ಸರಿಯಾಗಿ ನಡೆದಿದ್ದರೆ ನಿನ್ನೆ ನಗರದಲ್ಲಿ 101 ಕುಂಭಗಳ ಮೆರವಣಿಗೆ, ಅಯ್ಯಪ್ಪಸ್ವಾಮಿ ಭಾವಚಿತ್ರ ಹೊತ್ತ ಜೋಡೆತ್ತುಗಳ ಅದ್ದೂರಿ ಮೆರವಣಿಗೆ, ಡಿ. 29ರಂದು ಬೆಳಗ್ಗೆ ಮಹಾಪೂಜೆ, ಎರಡು ದಿನ ನಿರಂತರ ಅನ್ನಪ್ರಸಾದ, ಜ. 8ರಂದು ಇರುಮುಡಿ ಕಟ್ಟುವ ಕಾರ್ಯ ನಡೆಯಬೇಕಿತ್ತು. ಆದರೆ, ಆ ಬೆಂಕಿ ಅವಗಢ ಅರ್ಧದಲ್ಲೆ ಅಯ್ಯಪ್ಪನ ವೃತ ಮುಕ್ತಾಯಗೊಳ್ಳುವಂತೆ ಮಾಡಿದೆ! ಅದುವೇ, ಕಳೆದ ಭಾನುವಾರ ರಾತ್ರಿ ಅಯ್ಯಪ್ಪಸ್ವಾಮಿ ಪೂಜೆ ಮಾಡಿ ಸನ್ನಿಧಾನದಲ್ಲಿ ನಿದ್ರೆಗೆ ಜಾರಿದ ಅಯ್ಯಪ್ಪ ಮಾಲಾಧಾರಿಗಳು ಮಧ್ಯರಾತ್ರಿ ಸಿಲಿಂಡರ್ ಗ್ಯಾಸ್ ಸೋರಿಕೆಯಾದ ಪರಿಣಾಮ ಸನ್ನಿಧಾನದಲ್ಲಿದ್ದ 9 ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಸಕಲ ಸಿದ್ಧತೆಯಾಗಿತ್ತು:
ಉಣಕಲ್ಲಿನಲ್ಲಿ ಸಂಕಣ್ಣವರ ಓಣಿಯಲ್ಲಿ 12 ಜನರನ್ನು ಹೊಂದಿರುವ ಸನ್ನಿಧಾನವಿದ್ದರೆ, ಅಚ್ಚವ್ವನ ಕಾಲನಿಯಲ್ಲಿ 14 ಅಯ್ಯಪ್ಪ ಮಾಲಾಧಾರಿಗಳನ್ನು ಹೊಂದಿದ ಸನ್ನಿಧಾನವಿತ್ತು. ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಮಾಡಬೇಕಾಗಿದ್ದ ಅಯ್ಯಪ್ಪ ಮಾಲಾಧಾರಿಗಳು ಈ ದುರ್ಘಟನೆಯಿಂದ ಮಸಣದ ಯಾತ್ರೆ ಮಾಡುತ್ತಿದ್ದಾರೆ. ಇನ್ನು ಇವರೊಂದಿಗೆ ಮಾಲೆ ಹಾಕಿದ್ದ ಐವರು ಮಾಲಾಧಾರಿಗಳು ಈ ಘಟನೆಯಿಂದಾಗಿ ಮನನೊಂದು ತಮ್ಮ ಮಾಲೆಗಳನ್ನು ತ್ಯಜಿಸಿದ್ದರು.
ಕಳೆದ 20 ವರ್ಷಗಳಿಂದ ಇಲ್ಲಿ ಅಯ್ಯಪ್ಪನ ಸನ್ನಿಧಾನ ನಿರ್ಮಿಸಲಾಗಿದೆ. ನೂರಾರು ಜನರು ಮಾಲೆ ಹಾಕಿದ್ದಾರೆ. ಈ ರೀತಿ ಒಮ್ಮೆಯೂ ನಡೆದಿರಲಿಲ್ಲ ಎಂದು ಉಣಕಲ್ಲನ ಗಜಾನನ ಗುರುಸ್ವಾಮಿ ತಿಳಿಸಿದ್ದರು.
ಧಾರವಾಡ ಪೇಢಾ ಎಂದರೆ ಮನಮೋಹನ ಸಿಂಗ್‌ಗೆ ಬಲು ಪ್ರೀತಿ!
ನಾನು ಎಲ್ಲಿಯೇ ಹೋಗಲಿ ಎಲ್ಲ ಅಯ್ಯಪ್ಪ ಮಾಲಾಧಾರಿಗಳಿಗೆ ಅಗತ್ಯ ಜಾಗೃತಿ ವಹಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ. ಈ ಘಟನೆ ಭಕ್ತರಲ್ಲಿ ತುಂಬಾ ನೋವು ತಂದಿದೆ ಎಂದು ಆನಂದ ಗುರುಸ್ವಾಮಿ ಹೇಳಿದ್ದರು.
ಉಣಕಲ್ಲ ಗ್ರಾಮದ ಸಾಯಿನಗರದ ಅಚ್ಚವ್ವನ ಕಾಲನಿಯಲ್ಲಿ ಕಳೆದ 20 ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಗಳು ತಿಂಗಳುಗಳ ಕಾಲ ವ್ರತ ಆಚರಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. 21ನೇ ವರ್ಷದ ಶಬರಿಮಲೆ ಯಾತ್ರೆಗೆ ಬೇಕಾದ ಎಲ್ಲ ಸಿದ್ದತೆಗಳನ್ನೂ ಮಾಡಿಕೊಂಡಿದ್ದರು.