*   ಕುರುಗೋಡಿನಲ್ಲಿ ಒಣಗಲು ಹಾಕಿದ್ದ ಫಸಲು ನಷ್ಟ*   ಸಿಡಿಲಿಗೆ 2 ಕುರಿ, 3 ಮೇಕೆಗಳ ಸಾವು*   ಅಕಾಲಿಕ ಮಳೆಯಿಂದ 12 ಕೋಟಿಯಷ್ಟು ಫಸಲು ನಷ್ಟ 

ಕುರುಗೋಡು(ನ.15): ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಶನಿವಾರ ಸಂಜೆ ಮಳೆ(Rain) ಸುರಿದಿದ್ದು, ಅಕಾಲಿಕ ಮಳೆಯಿಂದಾಗಿ ಕುರುಗೋಡು(Kurugodu) ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ(APMC) ಮೆಣಸಿನಕಾಯಿ ಕಟಾವು ಮಾಡಿ ಒಣಗಿಸಲು ಹಾಕಿದ್ದ 760 ಕ್ವಿಂಟಲ್‌ ಫಸಲು ಹಾನಿಯಾಗಿದೆ.

ತಾಲೂಕಿನ ವಿವಿಧೆಡೆ 70 ಎಕರೆಯಲ್ಲಿ ಬೆಳೆಯಲಾಗಿದ್ದ ಮೆಣಸಿನಕಾಯಿ(Chilli) ಫಸಲನ್ನು ತಂದು ರೈತರು(Farmers) ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಒಣಗಿಸಲು ಹಾಕಿದ್ದರು. ಆದರೆ ಅಕಾಲಿಕ ಮಳೆಯಿಂದ(Premature Rain) 12 ಕೋಟಿಯಷ್ಟು ಫಸಲು ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಫಸಲು ಸಂಗ್ರಹಿಸಿಡಲು ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ಪ್ರತಿವರ್ಷ ಮಳೆ ಬಂದರೆ ಅಪಾರ ಪ್ರಮಾಣದಷ್ಟು ನಷ್ಟ ಸಂಭವಿಸುತ್ತದೆ. ಅಲ್ಲದೆ ಮಾರುಕಟ್ಟೆಗೆ ತಡೆಗೋಡೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಮುಖ್ಯರಸ್ತೆ ಮತ್ತು ರಸ್ತೆ ಪಕ್ಕದ ಚರಂಡಿ ನೀರು ಹರಿದು ಬಂದು ಬೆಳೆಹಾನಿಯಾಗುತ್ತದೆ.

ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ : 2 ದಿನ 13 ಜಿಲ್ಲೆಗಳಿಗೆ ಎಚ್ಚರಿಕೆ

ಮಾರುಕಟ್ಟೆಗೆ(Market) ತಡೆಗೋಡೆ, ಗೋದಾಮು ವ್ಯವಸ್ಥೆ, ಶೌಚಾಲಯ, ಮಳಿಗೆ ಸೇರಿದಂತೆ ಇತರೆ ಸೌಲಭ್ಯ ಮರೀಚಿಕೆಯಾಗಿದ್ದು, ರೈತರು ಮಳೆ ಬಂದರೆ ಪ್ರತಿವರ್ಷ ಕಷ್ಟಪಟ್ಟು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ.
ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ ಮೆಣಸಿನಕಾಯಿ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಹಾಗೂ ಉತ್ತಮ ಇಳುವರಿ ಇಲ್ಲದೆ ನಷ್ಟದ ಹಾದಿ ಹಿಡಿದಿರುವ ರೈತರಿಗೆ ಮಳೆಯ ಪರಿಣಾಮದಿಂದ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತಾಗಿದೆ.

ಕುರುಗೋಡು ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಹಲವಾರು ರೈತರು ನೂರು ಎಕರೆಯಲ್ಲಿ ಬೆಳೆದ ಮೆಣಸಿನಕಾಯಿ ಬೆಳೆ ಬೆಳೆದು ಹಾಕಿದ್ದರು. ಮಾರುಕಟ್ಟೆಯಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲದೆ ಕಾರಣ ಮಳೆಗೆ ಅಪಾರ ಪ್ರಮಾಣದಷ್ಟು ನಷ್ಟ ಸಂಭವಿಸಿದೆ. ಮಾರುಕಟ್ಟೆ ಒಳಗೆ ಮುಖ್ಯರಸ್ತೆ ನೀರು ಹಾಗೂ ಚರಂಡಿ ನೀರು ಹರಿದು ಮೆಣಸಿಕಾಯಿ ಹಾಳಾಗಿವೆ. ಇದರಿಂದ ಬಹಳಷ್ಟು ನಷ್ಟ ಉಂಟಾಗಿದೆ ಎಂದು ಮೆಣಸಿನಕಾಯಿ ಬೆಳೆಗಾರರಾದ ಶ್ರೀಕಾಂತ್‌, ನರಸಪ್ಪ ತಿಳಿಸಿದ್ದಾರೆ. 
ಮಾರುಕಟ್ಟೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ 15 ಲಕ್ಷ ವೆಚ್ಚ ಮಂಜೂರಾಗಿ ಕಾಮಗಾರಿ ಕೂಡ ಟೆಂಡರ್‌ ಅಗಿದೆ. ಸ್ವಲ್ಪ ದಿನದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅದರಂತೆ ಮಾರುಕಟ್ಟೆ ಅವರಣದಲ್ಲಿ ಸೋಲಾರ್‌ ಲೈಟ್‌ಗಳು ಹಾಳಾಗಿವೆ. ಕೂಡಲೇ ಹಾಕುವ ವ್ಯವಸ್ಥೆ ಮಾಡುತ್ತೇವೆನ ಅಂತ ಕುರುಗೋಡು ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಸೂಪರ್‌ವೈಜರ್‌ ಶುಕ್ರುಸ್ವಾಮಿ ಹೇಳಿದ್ದಾರೆ. 

ಸಿಡಿಲಿಗೆ 2 ಕುರಿ, 3 ಮೇಕೆಗಳ ಸಾವು

ಹಗರಿಬೊಮ್ಮನಹಳ್ಳಿ(Hagaribommanahalli): ತಾಲೂಕಿನ ಮುಟುಗನಹಳ್ಳಿ ಗ್ರಾಮದಲ್ಲಿ ಸಂಜೆ ಸಿಡಿಲು(Lightning Strike) ಬಡಿದು ಸ್ಥಳದಲ್ಲಿಯೇ 2 ಕುರಿ(Sheep) ಮತ್ತು 3 ಮೇಕೆಗಳು(Goat) ಸಾವಿಗೀಡಾದ(Death) ಘಟನೆ ಭಾನುವಾರ ಸಂಜೆ ಜರುಗಿದೆ.

ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಜಿಟಿಜಿಟಿ ಮಳೆಯಾಗುತಿದ್ದು, ಭಾನುವಾರ ಸಹ ಬಿಟ್ಟುಬಿಟ್ಟು ಮಳೆಯಾಗುತ್ತಲೇ ಇತ್ತು. ಸಂಜೆ 4 ಗಂಟೆಯ ಸಮಯದಲ್ಲಿ ಸಾಧಾರಣ ಮಳೆಯೊಂದಿಗೆ ಆರಂಭವಾಗಿ ದಿಢೀರನೇ ಗುಡುಗು ಸಿಡಿಲಿನಿಂದ ಮಳೆ ಸುರಿಯಿತು. ಆ ಸಂದರ್ಭದಲ್ಲಿ ಮುಟುಗನಹಳ್ಳಿಯಲ್ಲಿ ಹೊಲದಲ್ಲಿ ಮೇಯುತ್ತಿದ್ದ ಕುರಿಗಳಿಗೆ ಸಿಡಿಲು ಬಡಿದು 2 ಕುರಿಗಳು ಮೂರು ಮೇಕೆಗಳು ಸಾವಿಗೀಡಾಗಿವೆ ಎಂದು ತಹಸೀಲ್ದಾರ್‌ ಶರಣಮ್ಮ ತಿಳಿಸಿದರು.

Uttara Kannada| ನಿರಂತರ ಮಳೆಗೆ ಬತ್ತದ ಬೆಳೆ ಹಾನಿ, ಕಂಗಾಲಾದ ಅನ್ನದಾತ

ಮಳೆಗೆ ಕುಸಿದ ಮನೆ

ಕೂಡ್ಲಿಗಿKudligi): ಶನಿವಾರ ಸಂಜೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಜನಜೀವನ ಅಸ್ತವ್ಯಸ್ತವಾಗಿದ್ದು, ಕೂಡ್ಲಿಗಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 20ನೇ ವಾರ್ಡ್‌ನ ಗೋವಿಂದಗಿರಿ ತಾಂಡಾದ ಲೋಕ್ಯನಾಯ್ಕ ಎಂಬವರ ಮನೆಯ ಛಾವಣಿ ಭಾನುವಾರ ಮಧ್ಯಾಹ್ನ ಕುಸಿದಿದೆ.

40 ವರ್ಷಗಳ ಹಳೆಯದಾದ ಮನೆಯು ಶನಿವಾರ ರಾತ್ರಿ ಸುರಿದ ಮಳೆಗೆ ಸ್ವಲ್ಪ ಬಿದ್ದಿದ್ದು, ಭಾನುವಾರ ಮಧ್ಯಾಹ್ನ ಮತ್ತೊಮ್ಮೆ ಸುರಿದ ಮಳೆಗೆ ಸಂಪೂರ್ಣ ಚಾವಣಿ ಕುಸಿದಿದೆ ಎಂದು ಮನೆ ಮಾಲೀಕ ಲೋಕ್ಯನಾಯ್ಕ ತನ್ನ ಅಳಲನ್ನು ತೋಡಿಕೊಂಡರು.

ಹಳೇ ಮನೆ ಇರುವುದರಿಂದ ಯಾವ ಸಂದರ್ಭದಲ್ಲಿ ಅಪಾಯವಾಗಬಹುದೆಂದು ಅರಿತು ಆ ಮನೆಯ ಮುಂದೆ ಶೀಟ್‌ ಹಾಕಿಕೊಂಡು ಕುಟುಂಬದ 10 ಜನರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಮನೆಯವರು ಭಾನುವಾರ ಮಧ್ಯಾಹ್ನ ಹೊಲಕ್ಕೆ ಹೋಗಿದ್ದಾಗ ಸುರಿಯುವ ಮಳೆಗೆ ಛಾವಣಿ ಕುಸಿದಿದ್ದರಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ. ನನಗೆ ಜೀವನ ನಡೆಸಲು ಮನೆಯ ಅವಶ್ಯಕತೆ ಇರುವುದರಿಂದ ಸರ್ಕಾರವು(Government of Karnataka) ಆಶ್ರಯ ಮನೆ ಮಂಜೂರು ಮಾಡಿಕೊಡುವಂತೆ ಅಧಿಕಾರಿಗಳಲ್ಲಿ ಲೋಕ್ಯನಾಯ್ಕ ಮನವಿ ಮಾಡಿಕೊಂಡಿದ್ದಾರೆ.