ನಾಡಿನ ಶಕ್ತಿ ಕೇಂದ್ರ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್ 4ರಿಂದ 15ರವರೆಗೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು (ಆ.02): ನಾಡಿನ ಶಕ್ತಿ ಕೇಂದ್ರ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್ 4ರಿಂದ 15ರವರೆಗೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು, ರಾಜ್ಯ ರಾಜಕಾರಣಕ್ಕೆ ನೀಡಿರುವ ಕೊಡುಗೆ ಅಪಾರ. ಕರ್ನಾಟಕ ಏಕೀಕರಣಗೊಂಡು 50 ವಸಂತಗಳು ಪೂರೈಸುತ್ತಿರುವ ಹೊತ್ತಿನಲ್ಲಿ ಕೆಂಗಲ್ ಹನುಮಂತಯ್ಯ ಅವರ ಹೆಸರಿನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.
ಆಗಸ್ಟ್ 4ರಂದು ಸಂಜೆ 6ಕ್ಕೆ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಪುಷ್ಪ ಪ್ರದರ್ಶನ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕ ಉದಯ್ ಬಿ.ಗುರುಡಾಚಾರ್, ಸಂಸದ ತೇಜಸ್ವಿ ಸೂರ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ತೋಟಗಾರಿಕೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಕೆ.ಪಿ.ಮೋಹನ್‌ರಾಜ್ ಉಪಸ್ಥಿತರಿರುವರು.
ರಾಜ್ಯದಲ್ಲಿ ಆನ್‌ಲೈನ್ ಗೇಮ್, ಬೆಟ್ಟಿಂಗ್ ನಿಷೇಧ ಚಿಂತನೆ: ಸಿಎಂ ಸಿದ್ದರಾಮಯ್ಯ
ಆಗಸ್ಟ್ 5ರಂದು ಮಧ್ಯಾಹ್ನ 1ಕ್ಕೆ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪ ಭಾರತಿ, ಬೋನ್ಸಾಯ್, ಡಚ್ ಹುವಿನ ಜೋಡಣೆ, ಥಾಯ್‌ಆರ್ಟ್, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಗಳ ಪ್ರದರ್ಶನ ಇರಲಿದ್ದು, ಹೈಕೋರ್ಟ್ ನ್ಯಾ.ಎಚ್.ಪಿ.ಸಂದೇಶ್ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಸಚಿವೆ ಉಮಾಶ್ರೀ ಉಪಸ್ಥಿತರಿರುವರು. ಆಗಸ್ಟ್ 14ರಂದು ಮಧ್ಯಾಹ್ನ 2.30ಕ್ಕೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಇರಲಿದೆ ಎಂದು ತಿಳಿಸಿದರು.
ವಿಧಾನಸೌಧ ಕಲಾಕೃತಿಗೆ 7.5 ಲಕ್ಷ ಹೂಗಳ ಬಳಕೆ: ಗಾಜಿನಮನೆಯ ಪ್ರವೇಶದಲ್ಲಿ ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್‌್ಸ ಕಂಪನಿಯ ಹೂ ಜೋಡಣೆ ಮತ್ತು ಕೆಂಗಲ್ ಹನುಮಂತಯ್ಯ ಅವರ ಪುತ್ಥಳಿ, ಗಾಜಿನಮನೆಯ ಕೇಂದ್ರ ಭಾಗದಲ್ಲಿ 18 ಅಡಿ ಅಗಲ, 36 ಅಡಿ ಉದ್ದ ಮತ್ತು 18 ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿ ನಿರ್ಮಿಸಲಾಗಿದೆ. ವಿಧಾನಸೌಧದ ಪುಷ್ಪ ಪ್ರತಿರೂಪಕ್ಕೆ ಪ್ರದರ್ಶನದ ಮೊದಲ ಆರು ದಿನಗಳ ಅವಧಿಗೆ 2 ಲಕ್ಷ ಕೆಂಪು, ಪೀಚ್ ಮತ್ತು ಶ್ವೇತ ವರ್ಣದ ಡಚ್ ಗುಲಾಬಿ ಹೂಗಳು, 60 ಸಾವಿರ ಪಿಂಚ್ಡ್ ಕೆಂಪು ಗುಲಾಬಿ ಹಾಗೂ 1 ಲಕ್ಷ ಶ್ವೇತವರ್ಣದ ಸೇವಂತಿಗೆ ಹೂಗಳನ್ನು ಬಳಸಲಾಗುತ್ತದೆ. ಇನ್ನುಳಿದ ಆರು ದಿನಗಳಿಗೆ ಹಳದಿ, ರಸ್‌್ಪ ಮತ್ತು ಕೇಸರಿ ಬಣ್ಣದ ಡಚ್ ಗುಲಾಬಿ ಸೇರಿದಂತೆ 3.6 ಲಕ್ಷ ಗುಲಾಬಿ ಮತ್ತು ಸೇವಂತಿಗೆ ಹೂವುಗಳನ್ನು ಬಳಸಲಾಗುತ್ತದೆ. ಒಟ್ಟಾರೆಯಾಗಿ ವಿಧಾನಸೌಧದ ಪುಷ್ಪ ಮಾದರಿಗೆ 5.2 ಲಕ್ಷ ಗುಲಾಬಿ ಮತ್ತು 2 ಲಕ್ಷ ಸೇವಂತಿಗೆ ಸೇರಿ ಒಟ್ಟು 7.2 ಲಕ್ಷ ಹೂಗಳನ್ನು ಬಳಕೆ ಮಾಡಲಾಗುತ್ತಿದೆ.
14 ಅಡಿ ಎತ್ತರದ ಕೆಂಗಲ್ ಪ್ರತಿಮೆ: ವಿಧಾನಸೌಧದ ಪುಷ್ಪ ಮಾದರಿಯ ಮುಂಬದಿಯಲ್ಲಿ 14 ಅಡಿ ಎತ್ತರದ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಯು ಅನಾವರಣಗೊಳ್ಳಲಿದೆ. ಬೆಂಗಳೂರಿನ ಆಕಾರ ಸಂಸ್ಥೆಯ ಶಿಲ್ಪಿ ಬಿ.ಸಿ.ಶಿವಕುಮಾರ್ ಅವರು ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು, ಆಕರ್ಷಣೀಯವಾಗಿದೆ.
ಶಿವಪುರ ಧ್ವಜ ಸತ್ಯಾಗ್ರಹ ಸೌಧ: ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಯ ಅಂಕಣದಲ್ಲಿ ಶಿವಪುರ ಧ್ವಜ ಸತ್ಯಾಗ್ರಹಸೌಧದ ಪುಷ್ಪ ಮಾದರಿ ನಿರ್ಮಿಸಲಾಗಿದ್ದು, 17 ಅಡಿ ಸುತ್ತಳತೆ ಮತ್ತು 24 ಅಡಿ ಎತ್ತರದ ಧ್ಜಜ ಸತ್ಯಾಗ್ರಹದ ಪುಷ್ಪ ಮಾದರಿಗೆ ಬಿಳಿ, ಪಿಂಕ್, ಹಳದಿ ಮತ್ತು ರಸ್ಟ್ ವರ್ಣದ ಸೇವಂತಿಗೆ ಹೂವುಗಳನ್ನು ಒಂದು ಬಾರಿಗೆ 1.74 ಲಕ್ಷದಂತೆ 2 ಬಾರಿಗೆ ಒಟ್ಟಾರೆ 3.48 ಲಕ್ಷ ಸೇವಂತಿಗೆ ಹೂವುಗಳನ್ನು ಬಳಸಲಾಗುತ್ತಿದೆ.
ಮೊದಲ ಬಾರಿಗೆ ಫ್ಲೇರಲ್ ಕಾರ್ಪೆಟ್ ನಿರ್ಮಾಣ: ವಿಧಾನಸೌಧದ ಪ್ರತಿರೂಪದ ಹಿಂಬದಿಯ 2200 ಚದುರ ಅಡಿ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಯೂರೋಪ್ ದೇಶದ ಅರಮನೆಗಳು ಮತ್ತು ಬೃಹತ್ ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸುವಂತೆ 75ಕ್ಕೂ ಹೆಚ್ಚು ವಾರ್ಷಿಕ ಹೂಗಳು ಮತ್ತು ಫೋಲಿಯೆಜ್ ಗಿಡಗಳಿಂದ ಕೂಡಿದ ವರ್ಣಮಯ ಫ್ಲೇರಲ್ ಕಾರ್ಪೆಟ್ ನಿರ್ಮಿಸಲಾಗಿದೆ.
ಗಾಜಿನ ಮನೆಯ ಕೇಂದ್ರ ಭಾಗದ ಹಿಂಬದಿಯ ಅಂಕಣದಲ್ಲಿ ಕೆಂಗಲ್ ಹನುಮಂತಯ್ಯ ಅವರ ಜೀವನ ಚಿತ್ರಗಳ ಪ್ರದರ್ಶನ, ಹತ್ತು ಆಕರ್ಷಕ ಹೂವಿನ ಪಿರಮಿಡ್, ವರ್ಟಿಕಲ್ ಗಾರ್ಡನ್ ರೂಪದಲ್ಲಿ ರೈಲು ಮಾದರಿ ಪ್ರದರ್ಶನ, ಕೆಂಗಲ್ ಹನುಮಂತಯ್ಯ ಅವರ ವಿಶೇಷ ಛಾಯಾಚಿತ್ರ, ಕಂಬಗಳಲ್ಲಿ ಅರಳುವ ಪುಷ್ಪ ಡೂಮ್ಸ್, ಶೀತವಲಯದ ಹೂಗಳ ಪ್ರದರ್ಶನ, ಪ್ರದರ್ಶನದ ಉದ್ಘಾಟನೆಗೆ ಬ್ಯಾಂಡ್ ಹಿಮ್ಮೇಳನ, ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಹೂ ಗಿಡಗಳು, ತರಕಾರಿ ಮತ್ತು ಔಷಧಿಗಳ ಪ್ರದರ್ಶನ, ತೋಟಗಾರಿಕೆ ಇಲಾಖೆ ಕುಟೀರ ಇತ್ಯಾದಿಗಳು ಗಮನ ಸೆಳೆಯಲಿವೆ. ಮುನ್ನೇಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್‌್ತ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ: ರಜಾ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ವಯಸ್ಕರಿಗೆ 70 ಮತ್ತು ಮಕ್ಕಳಿಗೆ 30 ಟಿಕೆಟ್ ಶುಲ್ಕ ಇರಲಿದೆ. ರಜಾ ದಿನಗಳಲ್ಲಿ ವಯಸ್ಕರಿಗೆ ತಲಾ 80, ಮಕ್ಕಳಿಗೆ 30 ಟಿಕೆಟ್ ಶುಲ್ಕ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ಆಗಮಿಸಿದರೆ ಅವರಿಗೆ ಉಚಿತವಾಗಿ ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ದೊರೆಯಲಿದೆ.
ಅ.15ಕ್ಕೆ ಮೈಸೂರು ದಸರಾ; ಏರ್ ಶೋ ನಡೆಸಲು ಚಿಂತನೆ: ಸಿಎಂ ಸಿದ್ದು
6 ಎಕರೆಯಲ್ಲಿ ಪಶ್ಚಿಮ ಘಟ್ಟದ ಸಸ್ಯ ಪ್ರಬೇಧ: ಅವಸಾನದ ಅಂಚಿನಲ್ಲಿರುವ ಪಶ್ಚಿಮ ಘಟ್ಟದ 132 ಸಸ್ಯ ಪ್ರಬೇಧಗಳನ್ನು ಲಾಲ್‌ಬಾಗ್‌ನಲ್ಲಿ 6 ಎಕರೆ ಪ್ರದೇಶದಲ್ಲಿ ಸುಮಾರು 450ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಸಹ್ಯಾದ್ರಿ ಸಸಿ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಮೋಹನ್‌ರಾಜ್, ಜಂಟಿ ನಿರ್ದೇಶಕ ಎಂ.ಜಗದೀಶ್ ಉಪಸ್ಥಿತರಿದ್ದರು.
