ಬೆಂಗ್ಳೂರಿಗರೇ ಎಚ್ಚರ: ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟಬುತ್ತಿ..!

ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆ 7584 ಕೇಸ್‌| ಕಳೆದ ವರ್ಷ 5800ಕ್ಕೂ ಹೆಚ್ಚು ಕೇಸ್‌ ಈವರೆಗಿನ ಗರಿಷ್ಠ ಕೇಸ್‌| ಎಲ್ಲ ದಾಖಲೆ ಮುರಿದು ಮುನ್ನುಗ್ಗಿದ ಸೋಂಕಿತರ ಸಂಖ್ಯೆ| ಭಾನುವಾರ 27 ಮಂದಿ ಬಲಿ| ಅರ್ಧ ಶತಕ ತಲುಪಿದ ಸಕ್ರಿಯ ಪ್ರಕರಣಗಳು| 
 

7584 New Corona Cases in Bengaluru on April 12 grg

ಬೆಂಗಳೂರು(ಏ.12): ಯುಗಾದಿ ಹಬ್ಬದ ಸಮೀಪಿಸುತ್ತಿರುವಂತೆ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ 7584 ಪ್ರಕರಣಗಳು ಪತ್ತೆಯಾಗಿದೆ. ಇದು ಕೊರೋನಾ ಸೋಂಕು ಆರಂಭವಾದ ನಂತರ ಪತ್ತೆಯಾದ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಕಳೆದ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ 5800ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು ಈವರೆಗಿನ ದಾಖಲೆಯಾಗಿತ್ತು.

ಶನಿವಾರ 4384 ಪ್ರಕರಣಗಳು ದೃಢಪಟ್ಟಿದ್ದರೆ, ಭಾನುವಾರ 7584 ದಾಖಲಾಗುವ ಮೂಲಕ ಒಂದೇ ದಿನ 3200ಕ್ಕೂ ಹೆಚ್ಚಿನ ಪ್ರಕರಣಗಳು ಹೆಚ್ಚಳವಾಗಿವೆ. ಇದೇ ದಿನ 27 ಜನರು ಮೃತ ಪಟ್ಟಿದ್ದಾರೆ. ಭಾನುವಾರದ ಪ್ರಕರಣಗಳು ಸೇರಿ ನಗರದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 4,81,982 ತಲುಪಿದೆ. 27 ಸಾವಿನೊಂದಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 4,815ಕ್ಕೇರಿದೆ. 177 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ 1184 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟಾರೆ 4,25,930 ಮಂದಿ ಗುಣಮುಖರಾಗಿದ್ದಾರೆ.

ಶಾಕಿಂಗ್: ಲಾಕ್ ಡೌನ್ ಸುಳಿವು ನೀಡಿದ ಸಚಿವ ಸುಧಾಕರ್!

ಅರ್ಧ ಶತಕ ತಲುಪಿದ ಸಕ್ರಿಯ ಪ್ರಕರಣಗಳು

ಶನಿವಾರ 44,863 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 51,236ಕ್ಕೆ ಹೆಚ್ಚಳವಾಗಿದೆ. ಇದು ಯುಗಾದಿ ಹಬ್ಬದ ವಿಶೇಷವಾಗಿ ಶಾಪಿಂಗ್‌ ಮಾಡುವವರು, ಬಟ್ಟೆ ಬರೆ ಕೊಳ್ಳುವವರು, ಸೊಪ್ಪು, ತರಕಾರಿ, ದಿನಸಿ ಪದಾರ್ಥಗಳ ಖರೀದಿಗಾಗಿ ಮಾರುಕಟ್ಟೆಗೆ ತೆರಳುವವರಿಗೆ ಎಚ್ಚರಿಕೆಯ ಸಂದೇಶವಾಗಿದೆ.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪಾಲಿಸದೇ ಮಾರ್ಕೆಟ್‌ ಮುಂತಾದ ಕಡೆ ಎಗ್ಗಿಲ್ಲದೇ ಸಂಚರಿಸುತ್ತಿರುವುದು, ಹೆಚ್ಚಿನ ಓಡಾಟದ ಜೊತೆಗೆ ಪರೀಕ್ಷೆ ಪ್ರಮಾಣ ಜಾಸ್ತಿ ಮಾಡುತ್ತಿರುವುದರಿಂದ ಸೋಂಕಿನ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ.
 

Latest Videos
Follow Us:
Download App:
  • android
  • ios