ಬೆಂಗಳೂರು: ಕೊನೆಗೂ ಬಿಬಿಎಂಪಿ ಗುತ್ತಿಗೆದಾರರಿಗೆ 74 ಕೋಟಿ ಬಿಡುಗಡೆ
ಒಟ್ಟು ₹73.07 ಕೋಟಿ ಬಿಡುಗಡೆ ಮಾಡಿದ್ದು, ವಲಯವಾರು ಬಾಕಿ ಮೊತ್ತ ಹಂಚಿಕೆ ಮಾಡಿ ಪಾಲಿಕೆ ಅನುಮೋದಿಸಿದೆ. ಹಂತಗಳಲ್ಲಿ ಗುತ್ತಿಗೆದಾರರ ಬಿಲ್ ಪಾವತಿಸಲಾಗುತ್ತಿದೆ. ಪ್ರಮುಖವಾಗಿ ಯಲಹಂಕ ವಲಯಕ್ಕೆ ₹32.71 ಕೋಟಿ ಬಿಲ್ ಪಾವತಿ ಮಾಡಲಾಗುತ್ತಿದೆ.

ಬೆಂಗಳೂರು(ಅ.08): ಬಿಬಿಎಂಪಿಯ ರಾಜರಾಜೇಶ್ವರಿನಗರ ವಲಯದ 9 ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಿಧಾನಸಭಾ ಕ್ಷೇತ್ರಗಳ ಪಾಲಿಕೆ ಗುತ್ತಿಗೆದಾರರಿಗೆ 2021ರ ಅಕ್ಟೋಬರ್ ತಿಂಗಳ ಕಾಮಗಾರಿ ಬಿಲ್ ಮೊತ್ತ ₹74.07 ಕೋಟಿ ಬಿಡುಗಡೆ ಮಾಡಲಾಗಿದೆ.
ಕಾಮಗಾರಿ ಸಂಬಂಧ ಆರೋಪ, ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸಿದ ತನಿಖೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ 9 ವಾರ್ಡ್‌ಗಳಲ್ಲಿ ಹಲವು ಲೋಪಗಳು ಕಂಡು ಬಂದಿದೆ. ಸಾರ್ವಜನಿಕರಿಂದಲೂ ಹಲವು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ 9 ವಾರ್ಡ್‌ಗಳಲ್ಲಿ ನಡೆದ ಕಾಮಗಾರಿಗೆ ಹಣ ಬಿಡುಗಡೆ ಮಾಡದಂತೆ ಸರ್ಕಾರ ಸೂಚಿಸಿದೆ.
ಬೆಂಗಳೂರು ಬಿಎಂಟಿಸಿ ಬಸ್ ನಿಲ್ದಾಣವನ್ನೇ ಕದ್ದೊಯ್ದ ಕಳ್ಳರು: ಬೆಚ್ಚಿಬಿದ್ದ ಬಿಬಿಎಂಪಿ ಅಧಿಕಾರಿಗಳು
ಒಟ್ಟು ₹73.07 ಕೋಟಿ ಬಿಡುಗಡೆ ಮಾಡಿದ್ದು, ವಲಯವಾರು ಬಾಕಿ ಮೊತ್ತ ಹಂಚಿಕೆ ಮಾಡಿ ಪಾಲಿಕೆ ಅನುಮೋದಿಸಿದೆ. ಹಂತಗಳಲ್ಲಿ ಗುತ್ತಿಗೆದಾರರ ಬಿಲ್ ಪಾವತಿಸಲಾಗುತ್ತಿದೆ. ಪ್ರಮುಖವಾಗಿ ಯಲಹಂಕ ವಲಯಕ್ಕೆ ₹32.71 ಕೋಟಿ ಬಿಲ್ ಪಾವತಿ ಮಾಡಲಾಗುತ್ತಿದೆ.
ಜೇಷ್ಠತೆ ಆಧಾರದಲ್ಲಿ ಒಟ್ಟು ಬಿಲ್‌ನ ಶೇ.75ರಷ್ಟು ಬಿಲ್ ಬಿಡುಗಡೆ ಮಾಡಲಾಗಿದೆ. ದೂರುಗಳು ಮತ್ತು ಎಸ್‌ಐಟಿ ತನಿಖೆ ಕಾರಣ ಆರ್.ಆರ್. ನಗರ ವಲಯದ ವಾರ್ಡ್‌ಗಳಾದ 160, 129, 16, 17, 38, 42 ಹಾಗೂ 69ರ ಬಿಲ್‌ಗಳ ಮೊತ್ತ ₹4.58 ಕೋಟಿ ನೀಡಲು ಬಿಡುಗಡೆ ಮಾಡಲಾಗಿದ್ದರೂ ಮುಂದಿನ ಆದೇಶದವರೆಗೆ ಬಿಲ್ ಪಾವತಿ ಮಾಡದಂತೆ ತಡೆ ಹಿಡಿಯಲಾಗಿದೆ.
ಬೆಂಗಳೂರಿನಲ್ಲಿ 31 ಸಾವಿರ ಬೀದಿ ನಾಯಿಗಳು ಇಳಿಕೆ: ಬಿಬಿಎಂಪಿ ಸಮೀಕ್ಷೆ
9 ಷರತ್ತಿನೊಂದಿಗೆ ಬಿಲ್ ಭಾಗ್ಯ
ಆರ್‌ಆರ್ ನಗರ ವಿಭಾಗದ 9 ವಾರ್ಡ್ ಬಿಲ್ ಪಾವತಿ ಮಾಡುವಂತಿಲ್ಲ. 2021ರ ಅಕ್ಟೋಬರ್ ತಿಂಗಳಿನಲ್ಲಿ ಸಲ್ಲಿಕೆಯಾದ ಕಾಮಗಾರಿ ಬಿಲ್‌ಗಳಿಗೆ ಮಾತ್ರ ಹಣ ಬಿಡುಗಡೆ ಮಾಡಬೇಕು. ಕಾಮಗಾರಿ ಬಿಲ್ ಪಾವತಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೆಆರ್‌ಐಡಿಎಲ್ ಕಾಮಗಾರಿಯ ಬಿಲ್ ಪಾವತಿ ಮಾಡುವಂತಿಲ್ಲ. ಜೇಷ್ಠತೆ ಅನುಸಾರ ನಿರ್ಧಿಷ್ಟ ಐಎಫ್‌ಎಂಎಸ್ ತಂತ್ರಾಂಶದಲ್ಲಿಯೇ ಪಾವತಿ ಮಾಡಬೇಕು. ತನಿಖಾ ಹಂತದ ಕಾಮಗಾರಿಗೆ ಸಂಬಂಧಪಟ್ಟ ವಲಯ ಮಟ್ಟದ ಅಧಿಕಾರಿ ಪರಿಶೀಲನೆ ಮಾಡುವುದು ಸೇರಿದಂತೆ ಒಟ್ಟು 9 ಷರತ್ತು ವಿಧಿಸಲಾಗಿದೆ.
ಯಾವ ವಲಯಕ್ಕೆ ಎಷ್ಟು ಬಿಡುಗಡೆ?: ವಲಯ ಬಿಡುಗಡೆ ಮೊತ್ತ (ಕೋಟಿ ₹)
ಕೇಂದ್ರ 1.15
ಪೂರ್ವ 6.57
ಪಶ್ಚಿಮ 6.32
ದಕ್ಷಿಣ 9.23
ಆರ್‌ಆರ್ ನಗರ 4.58
ಬೊಮ್ಮನಹಳ್ಳಿ 6.57
ದಾಸರಹಳ್ಳಿ 3.49
ಯಲಹಂಕ 32.71
ಮಹದೇವಪುರ 4.59
ಒಟ್ಟು 73.07