ಸಾವಿನಲ್ಲೂ ಸಾರ್ಥಕತೆ ಮೆರೆದ 7 ವರ್ಷದ ಬಾಲಕ: ಪುನೀತ್‌ರಂತೆ ಅಂಧರ ಬಾಳಿಗೆ ಬೆಳಕಾದ ಆರ್ಯನ್‌

ಸಾವಿನಲ್ಲೂ ಸಾರ್ಥಕತೆ ಮೆರೆದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದ ಜಗನ್ನಾಥ ಮತ್ತು ಆಶಾ ದಂಪತಿಗಳ ಪುತ್ರ ಆರ್ಯನ್  

7 Year Old Boy Donated Eye Due to Brain Dead in Shivamogga grg

ಶಿವಮೊಗ್ಗ(ಅ.29):  2ನೇ ತರಗತಿ ಬಾಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದ್ದರಿಂದ ನೇತ್ರದಾನ ಮಾಡಿ ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದ್ದಾನೆ ಆರ್ಯನ್(7) . ಈ ಮೂಲಕ ಬಸವಾಪುರದ 2ನೇ ತರಗತಿ ವಿದ್ಯಾರ್ಥಿ ಆರ್ಯನ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.  

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದ ಜಗನ್ನಾಥ ಮತ್ತು ಆಶಾ ದಂಪತಿಗಳ ಪುತ್ರ ಆರ್ಯನ್ ಬಿ.ಜೆ (7) ಹಠಾತ್ತನೆ ಮೆದುಳು ರಕ್ತಸ್ರಾವದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದನು. 

ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ, 8 ಜನರ ಜೀವ ಉಳಿಸಿದ ಮಹಾತಾಯಿ

ಈತನ ತಾಯಿ ಆಶಾ ಆರ್ಯನ್‌ ಓದುತ್ತಿದ್ದ ಶಾಲೆಯಲ್ಲಿಯೇ ಅಡುಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೆದುಳು ರಕ್ತಸ್ರಾವದಿಂದ ಸಾವನ್ನಪ್ಪಿದ್ದರಿಂದ ಈತನ ಪೋಷಕರು ಆರ್ಯನ್‌ನ ಕಣ್ಣು ದಾನ ಮಾಡಲು ಮುಂದಾಗಿದ್ದರು. ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದ್ದರಿಂದ ಸಾಧ್ಯವಾಗದೆ ನೇತ್ರದಾನ ಮಾಡಿ ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದ್ದಾರೆ. ಈತನ ಸಾವಿಗೆ ಬಸವಾಪುರ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ, ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ. 
 

Latest Videos
Follow Us:
Download App:
  • android
  • ios