Asianet Suvarna News Asianet Suvarna News

ಶಿಶಿಲೇಶ್ವರ ಮತ್ಸ್ಯ ತೀರ್ಥ ಕ್ಷೇತ್ರಕ್ಕೇ ಮೀನು ಹಿಡಯಲು ಬಂದ್ರು..!

ಬ್ರಿಟಿ​ಷರ ಕಾಲ​ದಿಂದ​ಲೇ ಮೀನುಗಾರಿಕೆಗೆ ನಿಷೇಧ ವಿಧಿಸಲಾಗಿರುವ ಶಿಶಿಲದ ಶ್ರೀ ಶಿಶಿಲೇಶ್ವರ ದೇವಾಲಯದ ಮತ್ಸ್ಯ ತೀರ್ಥ ಕ್ಷೇತ್ರದಲ್ಲಿನ ಮೀನುಗಳನ್ನು ಹಿಡಿಯಲು ಯತ್ನಿಸಿದ ಏಳು ಮಂದಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

7 People tries to catch fish in Shishileshwara Temple
Author
Bangalore, First Published Jun 24, 2020, 7:13 AM IST

ಉಪ್ಪಿನಂಗಡಿ(ಜೂ.24): ಬ್ರಿಟಿ​ಷರ ಕಾಲ​ದಿಂದ​ಲೇ ಮೀನುಗಾರಿಕೆಗೆ ನಿಷೇಧ ವಿಧಿಸಲಾಗಿರುವ ಶಿಶಿಲದ ಶ್ರೀ ಶಿಶಿಲೇಶ್ವರ ದೇವಾಲಯದ ಮತ್ಸ್ಯ ತೀರ್ಥ ಕ್ಷೇತ್ರದಲ್ಲಿನ ಮೀನುಗಳನ್ನು ಹಿಡಿಯಲು ಯತ್ನಿಸಿದ ಏಳು ಮಂದಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಪಶ್ಚಿಮ ಘಟ್ಟದಿಂದ ಹರಿದು ಬರುವ ಕಪಿಲಾ ನದಿಯಲ್ಲಿನ ಈ ಮತ್ಸ್ಯತೀರ್ಥ ಬಹು ಬಗೆಯ ಹಾಗೂ ಬೃಹ​ತ್‌ ಗಾತ್ರದ ಮೀನುಗಳಿಂದ ಜನಾಕರ್ಷಣೆಗೆ ಒಳಗಾಗಿದೆ. ಇಲ್ಲಿನ ಮೀನುಗಳಿಗೆ ಭಕ್ತರು ಆಹಾರ ನೀಡುವ ಪರಿಪಾಠ ಬೆಳೆದುಬಂದಿದೆ. ಹಾಗೆಯೇ ಇಲ್ಲಿನ ಮೀನುಗಳ ರಕ್ಷಣೆಗಾಗಿ ಈ ಪ್ರದೇಶದ 2 ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.

'ಮಗಳು ಜಾನಕಿ' ಈಗೇನು ಮಾಡ್ತಿದ್ದಾರೆ? ಅವರ ಹೊಸ ಪ್ರಯೋಗ ಏನು?

ಧಾರ್ಮಿಕ ಹಾಗೂ ಕಾನೂನಿನ ಹಿನ್ನೆಲೆಯಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದ್ದರೂ ರಾತ್ರಿ ವೇಳೆ ಈ ಪರಿಸರಕ್ಕೆ ಆಗಮಿಸಿದ ಅರಸಿನಮಕ್ಕಿ ನಿವಾಸಿಗರೆನ್ನಲಾದ 7 ಮಂದಿ ಮೀನು ಹಿಡಿಯುವ ಪರಿಕರಕಗಳೊಂದಿಗೆ ಮೀನು ಹಿಡಿಯುವ ಕಾರ್ಯಕ್ಕೆ ಮುಂದಾಗಿದ್ದರು.

ರೋಗಿಗಳ ನರಳಾಟ: ಸಚಿವ ಸುಧಾಕರ್ ಕೊಟ್ಟ ವಾರ್ನಿಂಗ್​ಗೆ ಆಸ್ಪತ್ರೆ ಮುಖ್ಯಸ್ಥರು ಥಂಡಾ

ಈ ಸಂದ​ರ್ಭ ಕಾವಲು ಕಾಯುತ್ತಿದ್ದ ದೇವಳದ ಭಕ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪಿಗಳನ್ನು ಹಿಡಿದು ಧರ್ಮಸ್ಥಳ ಪೊಲೀಸರಿಗೊಪ್ಪಿಸಿದ್ದಾರೆ. ದೂರು ಸ್ವೀಕರಿಸಿದ ಧರ್ಮಸ್ಥಳ ಠಾಣಾಧಿಕಾರಿ ಪವನ್‌ ಕುಮಾರ್‌ ಆರೋಪಿಗಳಿಂದ ಮುಚ್ಚಳಿಕೆ ಬರೆಯಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

Follow Us:
Download App:
  • android
  • ios