ಹರಪನಹಳ್ಳಿ(ಜೂ.29): ಪಟ್ಟಣದ ಹೊರವಲಯದ ದೇವರತಿಮಲಾಪುರ ಗ್ರಾಮದ ಐತಿಹಾಸಿಕ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಣಿಕೆಹುಂಡಿ ಎಣಿಕೆ ಕಾರ್ಯ ಜರುಗಿತು.

ಕಾಣಿಕೆ ಹುಂಡಿಯಲ್ಲಿ 7,26,811 ಸಂಗ್ರಹವಾಗಿದೆ ಎಂದು ತಹಸಿಲ್ದಾರ್‌ ಡಾ. ನಾಗವೇಣಿ ತಿಳಿಸಿದರು. ಈ ದೇವಸ್ಥಾನಕ್ಕೆ ಹೊರರಾಜ್ಯ, ಜಿಲ್ಲೆಗಳಿಂದ ಅಪಾರ ಭಕ್ತರಿದ್ದು, ಡಿಸೆಂಬರ್‌ ತಿಂಗಳಲ್ಲಿ ರಥೋತ್ಸವ ಕಾರ್ಯಕ್ರಮ ಜರುಗುತ್ತದೆ. ಈ ವರ್ಷ ಕೋವಿಡ್‌-19ರ ಭೀತಿ ಹಿನ್ನೆಲೆಯಲ್ಲಿ ಕಾಣಿಕೆ ಹುಂಡಿಯನ್ನು ತಡವಾಗಿ ಎಣಿಕೆ ಮಾಡಲಾಗಿದೆ.

ಬಳ್ಳಾರಿಯಲ್ಲಿ ಮರಣ ಮೃದಂಗ: ಒಂದೇ ದಿನ 80 ಪ್ರಕರಣ ಪತ್ತೆ, ನಾಲ್ವರು ಬಲಿ

ಈ ವೇಳೆ ಮುಜುರಾಯಿ ಇಲಾಖೆಯ ರಮೇಶ, ಗಂಗಾಧರ ತಳವಾರ, ಚನ್ನಬಸವಯ್ಯ ಸೋಗಿ, ಆರಕ್ಷಕ ಸಿಬ್ಬಂದಿಗಳಾದ ಪ್ರಕಾಶ, ಕೆನರಾ ಬ್ಯಾಂಕ್‌ ವ್ಯವಸ್ಥಾಪಕರಾದ ರಾಜೇಶ ದೇಸಾಯಿ, ಕಂದಾಯ ಇಲಾಖೆಯ ಅರವಿಂದ, ಡಾ. ಹರ್ಷ ಕಟ್ಟಿ, ಶ್ಯಾನ ಭೋಗರ ಸುಶೀಲೇಂದ್ರ ರಾವ್‌, ದಂಡಿನ ಹರೀಶ, ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಪೂಜಾರ್‌, ಗ್ರಾಮಸ್ಥರಾದ ಆನೆಗುಂದಿ ನಾಗರಾಜ, ಪರಸಪ್ಪ, ನೀರಗಂಟಿ ನಾಗಪ್ಪ ಉಪಸ್ಥಿತರಿದ್ದರು.