* ಕಾರಣ ಕೇಳಿ ಪಾಲಿಕೆಯಿಂದ ಪತ್ರ* ಸ್ಪಂದಿಸದಿದ್ದರೆ ಜಪ್ತಿ ವಾರಂಟ್* ತೆರಿಗೆ ವಸೂಲಿಗೆ ಕ್ರಮ: ಜಂಟಿ ಆಯುಕ್ತ
ಬೆಂಗಳೂರು(ಮಾ.24): ಬಿಬಿಎಂಪಿ(BBMP) ವ್ಯಾಪ್ತಿಯದಲ್ಲಿ ಇರುವ ಒಟ್ಟು 43 ಮಾಲ್‌ಗಳ(Mall) ಪೈಕಿ 8 ಮಾಲ್‌ಗಳು ಬರೋಬ್ಬರಿ 69 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಜಂಟಿ ಆಯುಕ್ತರು ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಸೇರಿದಂತೆ ಈ ಹಿಂದಿನ ವರ್ಷ ಬೇ-ಬಾಕಿ ಸೇರಿದಂತೆ ಒಟ್ಟು 69,96,79,281 ಬಾಕಿ ಉಳಿಸಿಕೊಂಡಿದ್ದು, ಬಿಬಿಎಂಪಿ ಕಾಯ್ದೆ 148ರ ಅನ್ವಯ ಕಾರಣ ಕೇಳಿ ಪತ್ರ ಬರೆಯಲಾಗುತ್ತಿದೆ. ತೆರಿಗೆದಾರರು ಆಸ್ತಿ ತೆರಿಗೆ ಪಾವತಿಸದಿದ್ದಲಿ ಜಪ್ತಿ ವಾರೆಂಟ್ ಜಾರಿಗೊಳಿಸಿ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
Property Tax ಕಟ್ಟದಕ್ಕೆ ಮಂತ್ರಿ ಮಾಲ್‌ಗೆ ಬೀಗ..!
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ರಾಯಲ್ ಮೀನಾಕ್ಷಿ ಮಾಲ್ .14,96,61,028, ದಾಸರಹಳ್ಳಿವಲಯ ವ್ಯಾಪ್ತಿಯ ಮೇ.ರಾಕ್‌ಲೈನ್ ಮಾಲ್ .6,64,90,228, ಮಹದೇವಪುರ ವಲಯ ವ್ಯಾಪ್ತಿಯ ವರ್ಜಿನಿಯಾ ಮಾಲ್ .64,95,459, ಸೋಲ್‌ಸ್ಪೇಸ್ ಅರೇನಾ ಮಾಲ್ (ಟೋಟಲ್ ಮಾಲ್) .85,18,189, ವಿಆರ್ ಮಾಲ್ .3,90,56,952, ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಮೈಸೂರು ರಸ್ತೆಯ ಗೋಪಾಲನ್ ಆರ್ಕೇಡ್ ಮಾಲ್ .9,86,587, ದಕ್ಷಿಣ ವಲಯ ವ್ಯಾಪ್ತಿಯ ಜಿಟಿ ವಲ್ಡ್‌ರ್ ಮಾಲ್ .3,85,06,085, ಪಶ್ಚಿಮ ವಲಯ ವ್ಯಾಪ್ತಿಯ ಮಂತ್ರಿ ಮಾಲ್ .20,33,34,828 ಹಾಗೂ ಲೂಲು ಹೈಪರ್ ಮಾರ್ಕೆಟ್ .18,66,29,925 ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಇನ್ನು ನಗರದ 43 ಮಾಲ್‌ಗಳಿಂದ ಕಳೆದ ಮೂರು ವರ್ಷದಲ್ಲಿ .160 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ ಮಂತ್ರಿ ಮಾಲ್‌ಗೆ ಬೀಗ
ಬೆಂಗಳೂರು: ಎರಡು ಬಾರಿ ಅವಕಾಶ ನೀಡಿದ್ದರೂ ಆಸ್ತಿ ತೆರಿಗೆ (PropertyTax) ಪಾವತಿಸಲು ವಿಫಲವಾದ ಮಲ್ಲೇಶ್ವರದ (Malleshwaram) ಮಂತ್ರಿ ಮಾಲ್‌ಗೆ(Mantri Mall) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತೆ ಬೀಗ ಜಡಿದು ಬಿಸಿ ಮುಟ್ಟಿಸಿದ್ದಾರೆ.
32 ಕೋಟಿ ಆಸ್ತಿ ತೆರಿಗೆ ಪಾವತಿ ಮಾಡದ ಮಂತ್ರಿ ಮಾಲ್‌ಗೆ ಬೀಗ
ಕಳೆದ ವರ್ಷದ ಡಿ.06 ರಂದು ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಬಿ.ಶಿವಸ್ವಾಮಿ ಅವರ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಮಂತ್ರಿಮಾಲ್‌ಗೆ ಬೀಗ ಹಾಕಿದ್ದರು. ಬಾಕಿ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಂತ್ರಿಮಾಲ್‌ಗೆ ನ.15ರಂದು ಬೀಗ ಹಾಕಿದ ಸಂದರ್ಭದಲ್ಲಿ ನವೆಂಬರ್ ಅಂತ್ಯದೊಳಗೆ 2018ರಿಂದ ಈವರೆಗೂ ಬಾಕಿ ಇದ್ದ ಅಸಲು ಮತ್ತು ಬಡ್ಡಿ ಸೇರಿದಂತೆ ಬರೋಬ್ಬರಿ 33.82 ಕೋಟಿ ರು. ತೆರಿಗೆಯನ್ನು ಪಾವತಿಸುವುದಾಗಿ ಮಂತ್ರಿಮಾಲ್ ಆಡಳಿತ ಮಂಡಳಿ ಬಿಬಿಎಂಪಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿತ್ತು. ಆದ್ದರಿಂದ ಮಾಲ್ ತೆರೆಯಲು ಪಾಲಿಕೆ ಅನುಮತಿ ನೀಡಿತ್ತು. ಆದರೆ ನವೆಂಬರ್ ಅಂತ್ಯದೊಳಗೆ ಮಂತ್ರಿಮಾಲ್ ಆಸ್ತಿ ತೆರಿಗೆಯನ್ನು ಕಟ್ಟಲು ವಿಫಲವಾದ ಕಾರಣ ಮತ್ತೆ ಮಾಲ್‌ಗೆ ಬೀಗ ಹಾಕಲಾಗಿತ್ತು.
ಆಸ್ತಿ ತೆರಿಗೆ (Tax) ಪಾವತಿ ಬಾಕಿ ಇದ್ದ ಕಾರಣ ಕಳೆದ ಅಕ್ಟೋಬರ್‌ನಲ್ಲಿ ಪಾಲಿಕೆ ಮಂತ್ರಿಮಾಲ್‌ಗೆ ಬೀಗ ಹಾಕಿತ್ತು. ಈ ವೇಳೆ ಮಂತ್ರಿಮಾಲ್ ಆಡಳಿತ ಮಂಡಳಿ ಡಿಡಿ (DD) ಮೂಲಕ 5 ಕೋಟಿ ರು. ಪಾವತಿಸಿತ್ತು. ಬಾಕಿ ಉಳಿದ ಆಸ್ತಿ ತೆರಿಗೆಯನ್ನು ಅ.31ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿತ್ತು. ಆದರೆ, ತೆರಿಗೆಯನ್ನು ನಿಗದಿತ ವೇಳೆಯಲ್ಲಿ ಪಾವತಿಸದ ಕಾರಣ ನವೆಂಬರ್ ಎರಡನೇ ವಾರದಲ್ಲಿ ಮಾಲ್‌ಗೆ ಮತ್ತೆ ಬೀಗ ಹಾಕಲಾಯಿತು. ಆಗ ಮಂತ್ರಿ ಮಾಲ್ ನವೆಂಬರ್ ಅಂತ್ಯದೊಳಗೆ ತೆರಿಗೆ ಪಾವತಿಸುವುದಾಗಿ ಮಾಡಿಕೊಂಡ ಮನವಿಗೆ ಪಾಲಿಕೆ ಒಪ್ಪಿಕೊಂಡಿತ್ತು. ಈಗ ನವೆಂಬರ್ ಅಂತ್ಯಗೊಂಡರೂ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಾಲ್‌ಗೆ ಬೀಗ ಹಾಕಲಾಗಿದೆ ಎಂದು ಬಿಬಿಎಂಪಿ (BBMP) ಪಶ್ಚಿಮ ವಲಯ ಜಂಟಿ ಆಯುಕ್ತ ಬಿ.ಶಿವಸ್ವಾಮಿ ಮಾಹಿತಿ ನೀಡಿದ್ದರು.
