Asianet Suvarna News Asianet Suvarna News

ಬೆಂಗಳೂರಿನಲ್ಲಿದ್ದಾರೆ 66,000 ಪದವೀಧರ, 11,000 ಶಿಕ್ಷಕ ಮತದಾರರು: ತುಷಾರ್‌

ಒಟ್ಟು 66,213 ಪದವೀಧರ ಕ್ಷೇತ್ರದ ಮತದಾರರಿದ್ದು, ಈ ಪೈಕಿ 30,233 ಪುರುಷರು, 35,971 ಮಹಿಳಾ ಮತದಾರರು ಹಾಗೂ 9 ಮಂದಿ ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಅದೇ ರೀತಿ ಒಟ್ಟು 11,763 ಶಿಕ್ಷಕರ ಕ್ಷೇತ್ರದ ಮತದಾರರಿದ್ದು, ಈ ಪೈಕಿ 3,626 ಪುರುಷರು, 8,133 ಮಹಿಳೆಯರು ಹಾಗೂ 4 ಮಂದಿ ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. 

66000 Graduate 11000 Teacher Voters in Bengaluru grg
Author
First Published Dec 31, 2023, 6:44 AM IST

ಬೆಂಗಳೂರು(ಡಿ.31):  ಬೆಂಗಳೂರು ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಶನಿವಾರ ಪ್ರಕಟಿಸಲಾಗಿದ್ದು, ನಗರದಲ್ಲಿ 66 ಸಾವಿರ ಪದವೀಧರ ಮತದಾರರು ಹಾಗೂ 11 ಸಾವಿರ ಶಿಕ್ಷಕ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಂದು ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್‌ ಗಿರಿನಾಥ್, ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಸಲ್ಲಿಕೆಯಾಗಿರುವ ಅರ್ಜಿ ಪರಿಶೀಲಿಸಿ, ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗಿದೆ.

ಮತಪಟ್ಟಿಗೆ 55,650 ಯುವ ಮತದಾರರ ಸೇರ್ಪಡೆ

ಒಟ್ಟು 66,213 ಪದವೀಧರ ಕ್ಷೇತ್ರದ ಮತದಾರರಿದ್ದು, ಈ ಪೈಕಿ 30,233 ಪುರುಷರು, 35,971 ಮಹಿಳಾ ಮತದಾರರು ಹಾಗೂ 9 ಮಂದಿ ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಅದೇ ರೀತಿ ಒಟ್ಟು 11,763 ಶಿಕ್ಷಕರ ಕ್ಷೇತ್ರದ ಮತದಾರರಿದ್ದು, ಈ ಪೈಕಿ 3,626 ಪುರುಷರು, 8,133 ಮಹಿಳೆಯರು ಹಾಗೂ 4 ಮಂದಿ ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಹೆಸರು ಸೇರ್ಪಡೆಗೆ ಇನ್ನೂ ಅವಕಾಶ:

ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರ ಪಟ್ಟಿಗೆ ಅರ್ಜಿ ಸಲ್ಲಿಕೆಗೆ ಈಗಲೂ ಅವಕಾಶ ಇದೆ. ಸದ್ಯ ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗಿದೆ. ವಿಧಾನ ಪರಿಷತ್‌ನ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಆಗುವ ಕೊನೆಯ ದಿನವರೆಗೆ ಸಲ್ಲಿಕೆ ಆಗುವ ಅರ್ಜಿಗಳನ್ನು ಹೆಚ್ಚುವರಿ ಮತದಾರ ಪಟ್ಟಿಗೆ ಸೇರಿಸಲಾಗುವುದು. ಹಾಗಾಗಿ, ಮತದಾರ ಪಟ್ಟಿಗೆ ಅರ್ಜಿ ಸಲ್ಲಿಸುವುದಲ್ಲಿ ಯಾವುದೇ ಅಂತಿಮ ದಿನಾಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಾಮಚಂದ್ರನ್‌, ವಿಶೇಷ ಆಯುಕ್ತ ಡಾ। ಹರೀಶ್ ಕುಮಾರ್‌ ಉಪಸ್ಥಿತರಿದ್ದರು.

2,464 ಅರ್ಜಿ ತಿರಸ್ಕಾರ

ಮತದಾರ ಪಟ್ಟಿಗೆ ಸೇರ್ಪಡೆಗೆ ಸಲ್ಲಿಕೆ ಆಗಿರುವ ಅರ್ಜಿಗಳ ಪೈಕಿ ಸಹಿ ಇಲ್ಲದ, ಸೂಕ್ತ ದಾಖಲೆ, ವಿಳಾಸ ಇಲ್ಲದ ಒಟ್ಟು 2,464 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 815 ಅರ್ಜಿ ಹಾಗೂ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 1649 ಅರ್ಜಿ ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

38 ದಿನದಲ್ಲಿ 31 ಸಾವಿರ ಮಂದಿ ಪಟ್ಟಿಗೆ

ಕಳೆದ ನವೆಂಬರ್ 23ರಂದು ಕರಡು ಪಟ್ಟಿ ಪ್ರಕಟಿಸಿದ ಸಂದರ್ಭದಲ್ಲಿ 39,858 ಪದವೀಧರ ಕ್ಷೇತ್ರದ ಮತದಾರರಿದ್ದರು. 6,343 ಶಿಕ್ಷಕರ ಕ್ಷೇತ್ರದ ಮತದಾರರಿದ್ದರು. ಇದೀಗ ಈ ಸಂಖ್ಯೆ ಕ್ರಮವಾಗಿ 66,213 ಹಾಗೂ 11,763ಗೆ ಹೆಚ್ಚಾಗಿದೆ. ಕಳೆದ 38 ದಿನದಲ್ಲಿ ಪದವೀಧರ ಕ್ಷೇತ್ರಕ್ಕೆ 26,355 ಮಂದಿ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 5,424 ಮಂದಿಯನ್ನು ಸೇರಿಸಲಾಗಿದೆ. ಒಟ್ಟಾರೆ 31,779 ಮಂದಿ ಮತದಾರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

Lok Sabha Election: ರಾಜ್ಯದಲ್ಲಿ 5.3 ಕೋಟಿ ಮತದಾರರು, ಮಹಿಳೆಯರೇ ಹೆಚ್ಚು!

ಬೆಂಗಳೂರು ಪದವೀಧರ ಕ್ಷೇತ್ರದ ಮತದಾರ ಪಟ್ಟಿ ವಿವರ: ಲಿಂಗ ಕರಡು ಅಂತಿಮ

ಪುರುಷರು 17,717 30,233
ಮಹಿಳೆ 22,135 35,971
ಲೈಂಗಿಕ ಅಲ್ಪಸಂಖ್ಯಾತ 6 9
ಒಟ್ಟು 39,85 66,213

ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರ ಪಟ್ಟಿ ವಿವರ: ಲಿಂಗ ಕರಡು ಅಂತಿಮ

ಪುರುಷ 1,909 3,626
ಮಹಿಳೆ 4,433 8,133
ಲೈಂಗಿಕ ಅಲ್ಪಸಂಖ್ಯಾತ 1 4
ಒಟ್ಟು 6,343 11,763

ಪದವಿ, ಶಿಕ್ಷಕರ ಕ್ಷೇತ್ರದಲ್ಲಿ ಸ್ತ್ರೀ ಶಕ್ತಿ

ಬೆಂಗಳೂರು ಪದವೀಧರ ಮತ್ತು ಶಿಕ್ಷಕರ ವಿಧಾನ ಪರಿಷತ್‌ ಮತದಾರರ ಅಂತಿಮ ಪಟ್ಟಿಯಲ್ಲಿ ಮಹಿಳೆಯರೇ ಸಂಖ್ಯೆಯೇ ಹೆಚ್ಚಾಗಿದೆ. 66,213 ಪದವೀಧರ ಕ್ಷೇತ್ರದ ಮತದಾರರ ಪೈಕಿ 35 ಸಾವಿರ ಮಹಿಳಾ ಮತದಾರರಿದ್ದಾರೆ. 11 ಸಾವಿರ ಶಿಕ್ಷಕರ ಕ್ಷೇತ್ರದ ಮತದಾರರ ಪೈಕಿ 8 ಸಾವಿರಕ್ಕೂ ಅಧಿಕ ಮಂದಿ ಮಹಿಳೆಯರೇ ಇದ್ದಾರೆ. ಮುಂಬರುವ ಬೆಂಗಳೂರು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಲಿದ್ದಾರೆ.

Follow Us:
Download App:
  • android
  • ios