Asianet Suvarna News Asianet Suvarna News

ಒಂದೇ ದಿನ 66 ಜನರ ಸ್ಯಾಂಪಲ್‌ ಲ್ಯಾಬ್‌ಗೆ: ಆತಂಕದಲ್ಲಿ ಕೊಪ್ಪಳ ಜನತೆ!

66 ಜನರಲ್ಲಿ ಕೇವಲ ಒಂದು ಮಾತ್ರ ನೆಗಟಿವ್‌,ಉಳಿದ 65 ವರದಿಗಳು ಬರಬೇಕಾಗಿದೆ| ಒಂದೇ ದಿನ ಇಷ್ಟೊಂದು ದೊಡ್ಡ ಪ್ರಮಾಣದ ಸ್ಯಾಂಪಲ್‌ ಮೊದಲು| ಹೈ ರಿಸ್ಕ್‌ ಪ್ರಕರಣಗಳೇ ಇವಾಗಿರುವುದು ಆತಂಕ|
66 people sample send to lab of Koppal District
Author
Bengaluru, First Published Apr 13, 2020, 7:25 AM IST
ಕೊಪ್ಪಳ(ಏ.13): ವಿದೇಶದಿಂದ ಬಂದವರು, ತಬ್ಲಿಘಿ ಪ್ರಕರಣಗಳಲ್ಲಿ ಇದುವರೆಗೂ ಒಂದೇ ಒಂದೇ ಒಂದು ಪಾಸಿಟಿವ್‌ ಬಂದಿಲ್ಲ ಎನ್ನುವ ನೀರಾಳತೆ ಜಿಲ್ಲೆಯಲ್ಲಿ ಮನೆ ಮಾಡಿರುವಾಗಲೇ ಭಾನುವಾರ ಒಂದೇ ದಿನ 66 ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ ಕೇವಲ ಒಂದೇ ಒಂದು ವರದಿ ನೆಗಟಿವ್‌ ಎಂದು ಬಂದಿವೆ. ಉಳಿದ 65 ವರದಿಗಳು ಬರಬೇಕಾಗಿದೆ.

ಕಳೆದೊಂದು ತಿಂಗಳಲ್ಲಿಯೇ ಅತ್ಯಧಿಕ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿರುವ ದಿನ ಇದಾಗಿದೆ. ತಬ್ಲಿಘಿ ಪ್ರಕರಣದಲ್ಲಿ ಇದುವರೆಗೂ ಅಬ್ಬಬ್ಬಾ ಎಂದರೇ ಒಂದೇ ದಿನ 22 ಜನರ ಗಂಟಲು ದ್ರವವನ್ನು ಕಳುಹಿಸಿಕೊಟ್ಟಿದ್ದೇ ಅಧಿಕವಾಗಿತ್ತು. ಆದರೆ, ಭಾನುವಾರ ಆತಂಕ ಮೂಡುವಷ್ಟು ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರಿಂದ ಇಡೀ ಜಿಲ್ಲೆಯೇ ತುದಿಗಾಲಿ ಮೇಲೆ ನಿಂತು ಕಾಯುತ್ತಿದೆ.

ಲಾಕ್‌ಡೌನ್‌: ಬಡವರ ಮನೆ ಮನೆಗೆ ಗವಿಮಠ ಶ್ರೀಗಳಿಂದ ದವಸ- ಧಾನ್ಯ

ಯಾರಿವರು:

ತಬ್ಲಿಘಿ ಪ್ರಕರಣವೂ ಮುಗಿದಿದ್ದು, ಯಾರಿವರು ಎನ್ನುವ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ವಿವಿಧ ಜಿಲ್ಲೆಯಲ್ಲಿ ಕೆಲಸ ಮಾಡಿ ಈಗ ಜಿಲ್ಲೆಗೆ ಸದ್ದಿಲ್ಲದ ಬಂದಿರುವವರು. ಈಗಾಗಲೇ ಕೊರೋನಾ ಪೀಡಿತ ಜಿಲ್ಲೆಯಿಂದ ಸೇರಿದಂತೆ ಕೊರೋನಾ ಹಬ್ಬಿದ ಪ್ರದೇಶದಿಂದ ಬಂದಿದ್ದು, ಇವರನ್ನು ಈಗ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಕೆಲವರು ಮುಂದೆ ಬಂದಿದ್ದರೇ ಇನ್ನು ಕೆಲವರು ತಾವಾಗಿಯೇ ಮುಂದೆ ಬಂದಿಲ್ಲ. ಆದರೆ, ಅಕ್ಕಪಕ್ಕದವರು ನೀಡಿದ ಮಾಹಿತಿ ಆಧಾರದ ಮೇಲೆ ಇವರನ್ನು ಪತ್ತೆ ಮಾಡಿ, ಇವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇದರಲ್ಲಿ ಕೆಲವರು ಕೊರೋನಾ ರೋಗದಿಂದ ಬಳಲುತ್ತಿರುವವರ ಸಂಪರ್ಕವೂ ಇದ್ದರೂ ಇರಬಹುದು ಎಂದು ಅಂದಾಜಿಸಲಾಗುತ್ತದೆ.

9 ಸನ್ನದುಗಳ ಲೈಸನ್ಸ್‌ ರದ್ಧು:

ಲಾಕ್‌ಡೌನ್‌ ಆಗಿದ್ದರಿಂದ ಬಾರ್‌ಗಳನ್ನು ಬಂದ್‌ ಮಾಡಲಾಗಿದೆ. ಆದರೂ ಸಹ ಮಾ. 23ರಿಂದ ಏ. 11ರವರೆಗೂ 18 ಘೋರ ಮೊಕದ್ದಮೆಗಳನ್ನು ದಾಖಲು ಮಾಡಲಾಗಿದೆ. ದೇಶಿಯ 60600 ಲೀಟರ್‌, ಕಳ್ಳಭಟ್ಟಿಯ 4250 ಲೀಟರ್‌, ಬೆಲ್ಲದಕೊಳೆ 20 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 4 ವಾಹನ ಸೀಜ್‌ ಹಾಗೂ ನಾಲ್ವರನ್ನು ಬಂಧಿಸಿ, ಜೈಲಿಗೆ ಅಟ್ಟಲಾಗಿದೆ. ಇದರಲ್ಲಿ ತೊಡಗಿದ್ದ 9 ಮದ್ಯದ ಸನ್ನದುಗಳನ್ನು ರದ್ದು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
Follow Us:
Download App:
  • android
  • ios