ಲಾಕ್‌ಡೌನ್‌: ಬಡವರ ಮನೆ ಮನೆಗೆ ಗವಿಮಠ ಶ್ರೀಗಳಿಂದ ದವಸ- ಧಾನ್ಯ

ಅಲೆಮಾರಿಗಳು, ಕಾರ್ಮಿಕರು, ಹಮಾಲರು ಸೇರಿದಂತೆ ಕಡುಬಡವರಿಗೆ ವಿತರಣೆ|ಶ್ರೀಗಳ ಕಾರ್ಯಕ್ಕೆ ವ್ಯಾಪಕ ಪ್ರಸಂಶೆಗೆ| ಕೊಪ್ಪಳ ನಗರದಲ್ಲಿರುವ ಗವಿಮಠ|

Gavimutt Shri Distribution of Food Grain Kit  to Poor Family in Koppal

ಕೊಪ್ಪಳ(ಏ.06): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಹಾರಧಾನ್ಯದ ಕಿಟ್‌ನ್ನು ಅಲೆಮಾರಿಗಳು, ಕಾರ್ಮಿಕರು, ಹಮಾಲರು ಸೇರಿದಂತೆ ಬಡವರನ್ನು ಗುರುತಿಸಿ, ಅವರ ಮನೆ ಬಾಗಿಲಿಗೆ ಕಳುಹಿಸಿಕೊಟ್ಟಿದ್ದಾರೆ. 

ಅಕ್ಕಿ, ಬೆಲ್ಲ, ಬೇಳೆ ಸೇರಿದಂತೆ ಮೊದಲಾದ ಅಗತ್ಯ ವಸ್ತುಗಳ ಕಿಟ್‌ ಮಾಡಿ, ಸಾವಿರಾರು ಸಂಖ್ಯೆಯಲ್ಲಿ ಸದ್ದಿಲ್ಲದೆ ವಿತರಣೆ ಮಾಡಿದ್ದಾರೆ. 

ಲಾಕ್‌ಡೌನ್‌ ಮುಗಿಯುವವರೆಗೂ ಕಂಟ್ರೋಲ್‌ ಮಾಡಿಕೊಳ್ಳದ ಕುಡುಕರು: ಮದ್ಯದಂಗಡಿಗೆ ಕನ್ನ!

ಮಠದಲ್ಲಿಯೇ ಕಿಟ್‌ ಸಿದ್ಧ ಮಾಡಿಕೊಂಡು ಟ್ರ್ಯಾಕ್ಟರ್‌ನಲ್ಲಿಟ್ಟುಕೊಂಡು ಯಾರಿಗೂ ಹೇಳದೇ ನೇರವಾಗಿ ಅಲೆಮಾರಿಗಳು, ಕಾರ್ಮಿಕರು ಸೇರಿದಂತೆ ಮೊದಲಾದ ಬಡವರು ಇರುವ ಮನೆಗಳಿಗೆ ಹೋಗಿ ಕಿಟ್‌ಗಳನ್ನು ವಿತರಿಸಿದ್ದು, ವ್ಯಾಪಕ ಪ್ರಸಂಶೆಗೆ ಪಾತ್ರವಾಗಿದೆ.
 

Latest Videos
Follow Us:
Download App:
  • android
  • ios