ರಾಯಚೂರು, (ಜುಲೈ.28): ಹೊಟ್ಟೆ ನೋವಿನ  ಟಾನಿಕ್ ಎಂದು ಸ್ಯಾನಿಟೈಸರ್ ಸೇವಿಸಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ರಾಯಚೂರು  ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

 ನೆಲಹಾಳ ಗ್ರಾಮದ ಖಾಸಿಂಸಾಬ್(65) ಮೃತ ವ್ಯಕ್ತಿ. ಜು.26ರಂದು ಖಾಸಿಂಸಾಬ್​ಗೆ ವಿಪರಿತ ಹೊಟ್ಟೆನೋವು ಕಾಣಿಸಿಕೊಂಡಿದೆ. ಆಗ ಮನೆಯಲ್ಲಿದ್ದ ಸ್ಯಾನಿಟೈಸರ್​ ಅನ್ನು ಹೊಟ್ಟೆ ನೋವಿನ ಟಾನಿಕ್ ಎಂದು ಸೇವಿಸಿ ಅಸ್ವಸ್ಥಗೊಂಡಿದ್ದಾರೆ.

ಸ್ಯಾನಿಟೈಸರ್‌ ಬಳಕೆ ಹೇಗಿರಬೇಕು? ಬೇಕಾಬಿಟ್ಟಿ ಸ್ಯಾನಿಟೈಸರ್‌ ಬಳಸೋದು ಡೇಂಜರ್!

ಕೂಡಲೇ ಮನೆಯವರು ಖಾಸಿಂಸಾಬ್ ಅವರನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಖಾಸಿಂಸಾಬ್ ಸೋಮವಾರ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. 

ಈ ಘಟನೆಗೆ ಸಂಬಂಧಿಸಿದಂತೆ ಯರಗೇರಾ ಠಾಣೆಯಲ್ಲಿ ಕಲಂ 174 ಸಿಆರ್​ಪಿಸಿ ಅಡಿ ಪ್ರಕರಣ ದಾಖಲಾಗಿದೆ.