Asianet Suvarna News Asianet Suvarna News

ಕಲಬುರಗಿ: ಕೋರಬಾ ಆತ್ಮಹತ್ಯೆ ಪ್ರಕರಣ, ಕೋಲಿ-ಕಬ್ಬಲಿಗ ಸಮಾಜದ 60 ಮಂದಿ ಸೆರೆ

ದೇವಾನಂದ ಆತ್ಮಹತ್ಯೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ನಿರಂತರ ಧರಣಿ ನಡೆಸಿದರೂ ಯಾರೂ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಜಿಲ್ಲಾ ಕೋಲಿ-ಕಬ್ಬಲಿಗ ಸಮನ್ವಯ ಸಮಿತಿಯಿಂದ ಹೋರಾಟಗಾರರು ರಸ್ತೆಗಿಳಿದಿದ್ದರು.
 

60 Arrested For While Protest For Devanand Koraba Suicide Case in Kalaburagi grg
Author
First Published Oct 1, 2023, 6:31 AM IST

ಕಲಬುರಗಿ(ಅ.01):  ಚಿತ್ತಾಪುರದ ಕಲಗುರತಿ ದೇವಾನಂದ ಕೋರಬಾ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಆಗ್ರಹ, ಕುಟುಂಬಕ್ಕೆ ಪರಿಹಾರ, ನೌಕರಿಗಾಗಿ ಬೇಡಿಕೆ ಇಟ್ಟು ಕಳೆದ 5 ದಿನದಿಂದ ಡಿಸಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಜಿಲ್ಲಾ ಕೋಲಿ-ಕಬ್ಬಲಿಗ ಸಮನ್ವಯ ಸಮಿತಿಯ ಹೋರಾಟಗಾರರು, ಪದಾಧಿಕಾರಿಗಳು ಶನಿವಾರ ತಮ್ಮ ಹೋರಾಟ ತೀವ್ರಗೊಳಿಸಿ ಡಿಸಿ ಕಚೇರಿ ಮುಂದೆಯೇ 3 ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶ ಮಾಡಿ ಹೋರಾಟಗಾರರಲ್ಲಿ 60ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ.

ಸಮಿತಿಯ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಸೇರಿದಂತೆ ಅನೇಕ ಪ್ರಮುಖರನ್ನು ಪೊಲೀಸರು ಬಂಧಿಸಿ ರಸ್ತೆತಡೆ ಚಳುವಳಿ ಕೈಬಿಡುವಂತೆ ಮಾಡಿದರು. ಹೋರಾಟಗಾರರು ರಸ್ತೆಗೆ ಬಂದಾಗ ಜಗತ್‌ನಿಂದ ಡಿಸಿ ಕಚೇರಿ ಮೂಲಕ ಸಾಗುತ್ತಿದ್ದ ಮುಖ್ಯರಸ್ತೆಯ ಸಂಚಾರಕ್ಕೆ 3 ಗಂಟೆಗಳ ಕಾಲ ಸಂಚಕಾರ ಉಂಟಾಗಿತ್ತು.

ಗೋವಾ-ತೆಲಂಗಾಣ ಖಾಸಗಿ ಬಸ್ಸೊಳಗೇ ಇತ್ತು ಮಿನಿ ಬಾರ್‌: ಖದೀಮರ ಖರ್ತನಾಕ್‌ ಐಡಿಯಾ..!

ದೇವಾನಂದ ಆತ್ಮಹತ್ಯೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ನಿರಂತರ ಧರಣಿ ನಡೆಸಿದರೂ ಯಾರೂ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಜಿಲ್ಲಾ ಕೋಲಿ-ಕಬ್ಬಲಿಗ ಸಮನ್ವಯ ಸಮಿತಿಯಿಂದ ಹೋರಾಟಗಾರರು ರಸ್ತೆಗಿಳಿದಿದ್ದರು.

ಡಿಸಿ ಫೌಜಿಯಾ ತರನ್ನುಮ್‌ ತಾವೇ ಬಂದು ಹೋರಾಟ ನಿರತರೊಂದಿಗೆ ಮಾತುಕತೆ ನಡೆಸಿ ಮನವಿ ಪತ್ರ ಸ್ವೀಕರಿಸಿ ಇದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರೂ ಸಹ ರಸ್ತೆತಡೆ ಮುಂದುವರಿದಾಗ ಪೊಲೀಸುರ ಮಧ್ಯಪ್ರವೇಶ ಮಾಡಿ ಹೋರಾಟಗಾರರನ್ನು ವಶಕ್ಕೆ ಪಡೆದರು.

ಏನಿದು ಕಲಗುರ್ತಿ ಪ್ರಕರಣ?

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕಲಗುರ್ತಿ ಗ್ರಾಮದ ಕಬ್ಬಲಿಗ ಸಮಾಜದ ದೇವಾನಂದ ರಾಮಚಂದ್ರ ಕೊರಬಾ ಪೋಲಿಸರ ಮಾನಸಿಕ ಕಿರುಕುಳ ತಾಳಲಾರದೆ ವಿಷ ಕುಡಿದು ಮೃತಪಟ್ಟಿದ್ದಾನೆ. ರಾಜಕೀಯ ಮುಖಂಡರ ದಬ್ಬಾಳಿಕೆ, ದೌರ್ಜನ್ಯ, ಬೆದರಿಕೆ, ಪೊಲೀಸರು ಹೊಡೆಯುವುದು, ಬೆದರಿಕೆ ಹಾಕಿರುವುದರಿಂದ ದೇವಾನಂದ ಮಾನಸಿಕವಾಗಿ ಹಿಂಸೆಗೊಳಗಾಗಿ ತುಂಬಾ ಭಯಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅಪಹರಣವಾಗಿರುವ ಬಾಲಕಿಯ ಕುಟುಂಬದವರಿಗೂ ನ್ಯಾಯ ಒದಗಿಸಬೇಕು ಎಂಬುದೇ ಈ ಪ್ರಕರಣದ ಮುಖ್ಯ ತಿರುಳು.

ಬೇಡಿಕೆಗಳು: ಸದರಿ ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತ ಆರೋಪಿಗಳನ್ನು ಬಂಧಿಸಿ, ಎರಡು ಕುಟುಂಬಗಳಿಗೆ ನ್ಯಾಯ ನೀಡುವ ಕೆಲಸ ಮಾಡಬೇಕು. ರಾಜ್ಯದ ಮುಖ್ಯ ಮಂತ್ರಿಗಳು, ಗೃಹ ಸಚಿವರು ಹಾಗೂ ಉಸ್ತುವಾರಿ ಸಚಿವರು ಕೋಲಿ-ಕಬ್ಬಲಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು.  ಕೋಲಿ-ಕಬ್ಬಲಿಗ ಸಮುದಾಯದ ಮತ ಪಡೆದು ರಾಜಕೀಯ ಮಾಡುತ್ತಿರುವ ರಾಜಕೀಯ ಮುಖಂಡರು ಕೋಲಿ-ಕಬ್ಬಲಿಗರನ್ನು ಕಡೆಗಣೆಸುತ್ತಿದ್ದಾರೆ. ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ದೇವಾನಂದ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಒಪ್ಪಿಸಬೇಕು ಎಂಬುದು ಹೋರಾಟಗಾರರ ಮುಖ್ಯ ಬೇಡಿಕೆಗಳಾಗಿದ್ದವು.

Follow Us:
Download App:
  • android
  • ios