ಲಾಕ್‌ಡೌನ್‌ನಲ್ಲಿ ಜನರಿಗೆ ನೆರವಾಯ್ತು ನರೇಗ: 6000 ಜನಕ್ಕೆ ಉದ್ಯೋಗ
ಕೊರೋನಾ ಲಾಕ್‌ಡೌನ್ ಸಂಕಷ್ಟದಿಂದ ಜನರು ನಿವಾರಣೆಯಾಗಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಿ, ಕ್ಷೇತ್ರ ವ್ಯಾಪ್ತಿಯಲ್ಲಿ 6 ಸಾವಿರ ಮಂದಿ ಜನರಿಗೆ ಉದ್ಯೋಗ ಕಲ್ಪಿಸಲಾಗಿದ್ದು ಇದು ಆಶಾದಾಯಕ ಬೆಳವಣಿಗೆ ಎಂದು ಕ್ಷೇತ್ರದ ಶಾಸಕ ಎನ್.ಮಹೇಶ್ ಹೇಳಿದ್ದಾರೆ.
ಕೊಳ್ಳೇಗಾಲ(ಮೇ 10): ಕೊರೋನಾ ಲಾಕ್‌ಡೌನ್ ಸಂಕಷ್ಟದಿಂದ ಜನರು ನಿವಾರಣೆಯಾಗಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಿ, ಕ್ಷೇತ್ರ ವ್ಯಾಪ್ತಿಯಲ್ಲಿ 6 ಸಾವಿರ ಮಂದಿ ಜನರಿಗೆ ಉದ್ಯೋಗ ಕಲ್ಪಿಸಲಾಗಿದ್ದು ಇದು ಆಶಾದಾಯಕ ಬೆಳವಣಿಗೆ ಎಂದು ಕ್ಷೇತ್ರದ ಶಾಸಕ ಎನ್.ಮಹೇಶ್ ಹೇಳಿದರು.
ಅವರು ತಾಲೂಕಿನ ಟಗರಪುರ ಹಾಗೂ ಕುಂತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡನೇ ಲಾಕ್‌ಡೌನ್ ಮುಕ್ತಾಯಗೊಳಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆ ಆರಂಭಿಸುವ ಮೂಲಕ ಕೊರೋನೊದಿಂದ ಬಾಧಿತರಾಗಿದ ಜನರು ಈಗ ನಿರಾಳರಾಗಿದ್ದಾರೆ. ಇಡೀ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 17 ಸ್ಥಾನದಲ್ಲಿದ್ದ ಜಿಲ್ಲೆಯಲ್ಲಿಇಲ್ಲಿನ ಅಧಿಕಾರಿಗಳು ಕ್ರೀಯಾಶೀಲರಾಗುವ ಮೂಲಕ ಹತ್ತು ದಿನಗಳಲ್ಲಿ ನಮ್ಮ ಜಿಲ್ಲೆ 6 ನೇ ಸ್ಥಾನಕ್ಕೆ ಬಂದಿದೆ ಎಂದರು.
ಕ್ವಾರೆಂಟೈನ್ ಮನೆಯ ಸ್ಟಿಕರ್ ಹರಿದರೆ ಪ್ರಕರಣ ದಾಖಲು
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಡಾ. ಪ್ರಕಾಶ್, ಯಳಂದೂರು ಇಒ ರಾಜು, ಟಗರಪುರ ಗ್ರಾ.ಪಂ ಅಧ್ಯಕ್ಷ ನಿಂಗರಾಜು, ಪಿಡಿಒ ಮಹದೇವಪ್ರಭು, ಕುಂತೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ, ಪಿಡಿಇ ಶೋಭರಾಣಿ, ತಾಂತ್ರಿಕ ಸಹಾಯಕ ಅಭಿಯಂನತರರು ಮನೋಹರ್, ಲಿಂಗರಾಜು, ಮುಖಂಡ ಶಿವನಂಜಪ್ಪ ಸೇರಿದಂತೆ ಇತರರು ಇದ್ದರು.