ಶಿರಸಿ(ಮೇ10): ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ತಾಲೂಕಿಗೆ ಬಂದಿರುವ ವ್ಯಕ್ತಿಯ ಇಡೀ ಕುಟುಂಬವನ್ನು ಕ್ವಾರಂಟೈನ್‌ ಮಾಡಲಾಗುತ್ತದೆ. ಅಲ್ಲದೇ, ಆ ಮನೆಗೆ ಕೆಂಪು ಸ್ಟಿಕರ್‌ ಅಂಟಿಸಲಾಗುತ್ತಿದೆ. ಈ ಸ್ಟಿಕರ್‌ಗಳ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ, ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಡಿವೈಎಸ್ಪಿ ಜಿ.ಟಿ. ನಾಯಕ ಎಚ್ಚರಿಸಿದ್ದಾರೆ.

ಒಂದು ವಾರದ ಅವಧಿಯಲ್ಲಿ ತಾಲೂಕಿಗೆ ವಿವಿಧೆಡೆಗಳಲ್ಲಿ ಸುಮಾರು 800 ಜನರು ಬಂದಿದ್ದಾರೆ. ಹೊರ ರಾಜ್ಯ, ಹೊರ ಜಿಲ್ಲೆ, ರೆಡ್‌ಝೋನ್‌, ಗ್ರೀನ್‌ ಝೋನ್‌ ಹೀಗೆ ಬೇರೆ ಬೇರೆ ಕಡೆಗಳಿಂದ ಬಂದವರಿಗೆ ಪ್ರತ್ಯೇಕ ನಿಯಮಾವಳಿ ರೂಪಿಸಲಾಗಿದೆ. ಹೊರಗಿನಿಂದ ಬರುವ ವ್ಯಕ್ತಿಯ ಕುಟುಂಬದವರು ಕ್ವಾರಂಟೈನ್‌ ಆಗಬೇಕು. ರೋಗ ತಡೆಗೆ ಈ ಕ್ರಮ ಅನಿವಾರ್ಯ.ಹೀಗಾಗಿಯೇ ಅವರು ಮನೆಯಿಂದ ಹೊರ ಹೋಗಬಾರದೆಂದು ಸ್ಟಿಕರ್‌ ಅಂಟಿಸಲಾಗುತ್ತಿದೆ. ಜನರು ಅವರನ್ನು ತಪ್ಪಿತಸ್ಥರನ್ನಾಗಿ ಕಾಣಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಕ್ಲಾಸ್‌ನಲ್ಲಿರ್ಬೇಕಿದ್ದ ಉಪನ್ಯಾಸಕರು ತೋಟದಲ್ಲಿ ಬ್ಯುಸಿ..!

ಹೊರಗಿನಿಂದ ಬಂದ ಎಲ್ಲರ ಮನೆಗಳಿಗೂ ಸ್ಟಿಕರ್‌ ಅಂಟಿಸಲಾಗಿದೆ. ಇಂತಹ ಸ್ಟಿಕರ್‌ಗಳ ಚಿತ್ರ ತೆಗೆದು, ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಹಾಕಿ, ಆ ಮನೆಯವರಿಗೆ ಮುಜುಗರ ಉಂಟಾಗುವಂತೆ ಮಾಡಿದರೆ, ಅವರ ಮೇಲೆ ಪ್ರಕರಣದ ದಾಖಲಿಸುತ್ತೇವೆ ಮತ್ತು ಅವರನ್ನೂ ಕ್ವಾರಂಟೈನ್‌ ಮಾಡುತ್ತೇವೆ.

ಕ್ವಾರಂಟೈನ್‌ನಲ್ಲಿರುವವರ ಮನೆಯವರಿಗೆ ಕೋವಿಡ್‌ -19 ಬಂದಿದೆ ಎಂದು ಸುಳ್ಳು ಸುದ್ದಿ ಹರಡಿರುವ ಇಬ್ಬರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.