ರೋಗಿಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸುವ ಸುಳ್ಳು ನೆಪದಲ್ಲಿ ಮುಂಬೈಯಿಂದ ಆ್ಯಂಬುಲೆಸ್ಸ್‌ನಲ್ಲಿ ಬಂದಿದ್ದ 6 ಮಂದಿಯನ್ನು ಉಡುಪಿ ಜಿಲ್ಲಾಡಳಿತ ವಶಕ್ಕೆ ಪಡೆದು ಕಡ್ಡಾಯ ಕ್ವಾರಂಟೈನ್‌ಗೊಳಪಡಿಸಿದೆ. ಆ್ಯಂಬ್ಯುಲೆಸ್ಸ್‌ ಅನ್ನು ಜಪ್ತಿ ಮಾಡಲಾಗಿದೆ.

ಉಡುಪಿ(ಏ.15): ರೋಗಿಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸುವ ಸುಳ್ಳು ನೆಪದಲ್ಲಿ ಮುಂಬೈಯಿಂದ ಆ್ಯಂಬುಲೆಸ್ಸ್‌ನಲ್ಲಿ ಬಂದಿದ್ದ 6 ಮಂದಿಯನ್ನು ಉಡುಪಿ ಜಿಲ್ಲಾಡಳಿತ ವಶಕ್ಕೆ ಪಡೆದು ಕಡ್ಡಾಯ ಕ್ವಾರಂಟೈನ್‌ಗೊಳಪಡಿಸಿದೆ. ಆ್ಯಂಬ್ಯುಲೆಸ್ಸ್‌ ಅನ್ನು ಜಪ್ತಿ ಮಾಡಲಾಗಿದೆ.

ಈ ಆ್ಯಂಬುಲೆಸ್ಸ್‌ ಮಂಗಳವಾರ ಮಧ್ಯಾಹ್ನ ಉಡುಪಿ ದ.ಕ. ಜಿಲ್ಲೆಯ ಗಡಿಯ ಹೆಜಮಾಡಿಯಲ್ಲಿ ಜಿಲ್ಲೆಯನ್ನು ಪ್ರವೇಶಿಸಿತ್ತು. ಆ್ಯಂಬುಲೆಸ್ಸ್‌ನಲ್ಲಿ ರೋಗಿ ಇದ್ದಾರೆ. ಅವರನ್ನು ತುರ್ತಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಹೇಳಿದ್ದರು. ವಾಹನದಲ್ಲಿ ರೋಗಿ ಎಂದು ಹೇಳಿದ ವ್ಯಕ್ತಿ, ಅವರ ಇಬ್ಬರು ಸಂಗಡಿಗರು, ಚಾಲಕ ಮತ್ತು ಅವರ ಇಬ್ಬರು ಸಹಾಯಕರಿದ್ದರು.

ಫೇಸ್‌ಬುಕ್‌ನಲ್ಲಿ ಮೋದಿ, ಶಾ ಅವಹೇಳನ: ಇಬ್ಬರ ಬಂಧನ

ಅವರನ್ನು ಕೆಎಂಸಿ ಆಸ್ಪತ್ರೆಗೆ ಕಳುಹಿಸಿದಾಗ, ಪರೀಕ್ಷಿಸಿದ ವೈದ್ಯರು ರೋಗಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ತಕ್ಷಣ ಅವರೆಲ್ಲರನ್ನೂ ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ ಅವರ ಬಳಿ ಮುಂಬೈಯ ಯಾವುದೇ ಆಸ್ಪತ್ರೆಯ ದಾಖಲೆಗಳಿರಲಿಲ್ಲ ಅಥವಾ ಮಹಾರಾಷ್ಟ್ರ ಅಥವಾ ಕರ್ನಾಟಕ ರಾಜ್ಯದ ಯಾವುದೇ ಅಧಿಕಾರಿಯ ಅನುಮತಿ ಪತ್ರವೂ ಇರಲಿಲ್ಲ.

ಲಾಕ್‌ಡೌನ್: 21 ದಿನದಿಂದ ಪುಟ್ಟ ಕಾರಿನಲ್ಲೇ ವಾಸ..!

ಅವರಲ್ಲಿ ರೋಗಿ ಎಂದು ಹೇಳಲಾದ ವ್ಯಕ್ತಿಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ನಿಗಾದಲ್ಲಿರಿಸಲಾಗಿದೆ. ಉಳಿದವರನ್ನು ಉದ್ಯಾವರದ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ 28 ದಿನಗಳ ಕಡ್ಡಾಯ ಕ್ವಾರಂಟೈನ್‌ಗೊಳಪಡಿಸಲಾಗಿದೆ ಮತ್ತು ಅವರು ಅಕ್ರಮವಾಗಿ ಸಂಚರಿಸಿ ಉಡುಪಿಗೆ ಬಂದಿರುವುದರಿಂದ ಅವರೆಲ್ಲರ ಚಿಕಿತ್ಸೆಯ ವೆಚ್ಚವನ್ನು ಅವರಿಂದಲೇ ಭರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.