ಲಾಕ್‌ಡೌನ್: 21 ದಿನದಿಂದ ಪುಟ್ಟ ಕಾರಿನಲ್ಲೇ ವಾಸ..!
ಲಾಕ್‌ಡೌನ್‌ನಿಂದ ಗುಜರಾತ್- ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿದ ಪುತ್ತೂರು ಮೂಲದ ವ್ಯಕ್ತಿಗಳಿಬ್ಬರು 21 ದಿನಗಳಿಂದ ಕಾರಿನಲ್ಲಿಯೇ ವಾಸಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರು(ಏ.15): ಲಾಕ್‌ಡೌನ್‌ನಿಂದ ಗುಜರಾತ್- ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿದ ಪುತ್ತೂರು ಮೂಲದ ವ್ಯಕ್ತಿಗಳಿಬ್ಬರು 21 ದಿನಗಳಿಂದ ಕಾರಿನಲ್ಲಿಯೇ ವಾಸಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪುತ್ತೂರು ನಿವಾಸಿಗಳಾದ ಆಶಿಕ್ ಹುಸೈನ್, ಮೊಹಮ್ಮದ್ ತಕೀನ್ ತಿಂಗಳ ಹಿಂದೆ ಗುಜರಾತ್‌ನತ್ತ ಪ್ರಯಾಣ ಬೆಳೆಸಿದ್ದರು. ಲಾಕ್‌ಡೌನ್ ಜಾರಿಯಾದ ಬಳಿಕ ಗುಜರಾತ್ ಬಿಲಾದ್ ತಾಲೂಕಿನಲ್ಲಿ ಸಿಲುಕಿದ್ದು, ಕಾರಿನಲ್ಲೇ 21 ದಿನಗಳನ್ನು ಕಳೆದಿದ್ದಾರೆ.
ಲಾಕ್‌ಡೌನ್ ಎಫೆಕ್ಟ್: ಊಟ ಸಿಗಲ್ಲ, ಕುಡಿಯಾಕ್ ನೀರಿಲ್ಲ, ಶೌಚಕ್ಕ ಜಾಗ ಇಲ್ಲ..!
ಕೊನೆಗೆ ಪರಿಚಿತರಿಗೆ ಮಾಹಿತಿ ನೀಡಿದ್ದರಿಂದ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು. ಇವರಿಗೆ ಸೂಕ್ತ ವಸತಿ, ಆಹಾರ ವ್ಯವಸ್ಥೆ ಒದಗಿಸುವಂತೆ ಗುಜರಾತ್‌ನ ವಲ್ಸಾಡ್ ಜಿಲ್ಲಾಧಿಕಾರಿಗೆ ದ.ಕ. ಜಿಲ್ಲಾಧಿಕಾರಿ ಪತ್ರ ಬರೆದು ಮನವಿ ಮಾಡಿದ್ದಾರೆ.