ದೇಶದಲ್ಲೇ ಕೊರೋನಾಗೆ ಫಸ್ಟ್ ಬಲಿಯಾಗಿದ್ದ ಕಲಬುರಗಿಯಲ್ಲಿ ಮುಂದುವರಿದ ಮರಣ ಮೃದಂಗ
ದೇಶದಲ್ಲೇ ಮೊದಲ ಕೊರೋನಾಗೆ ಬಲಿಯಾಗಿದ್ದ ಕಲಬುರಗಿ ಜಿಲ್ಲೆಯಲ್ಲಿ ಮರಣ ಮೃದಂಗ ಮುಂದುವರಿದಿದ್ದು, ಮಂಗಳವಾರ ಒಂದೇ ದಿನ ಮತ್ತೆ 6 ಜನ ಸಾವನ್ನಪ್ಪಿದ್ದಾರೆ
ಕಲಬುರಗಿ, (ಜುಲೈ.28): ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯ 5 ಜನ ಮತ್ತು ವಿಜಯಪುರ ಜಿಲ್ಲೆಯ ಓರ್ವರು ಸೇರಿದಂತೆ ಒಟ್ಟು 6 ಜನ ನಿಧನ ಹೊಂದಿದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ
ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ಕಲಬುರಗಿ ನಗರದ ರಾಘವೇಂದ್ರ ಕಾಲೋನಿಯ 89 ವರ್ಷದ ವೃದ್ಧ (P-15458) ಜೂ.28 ರಂದು ಆಸ್ಪತ್ರೆಗೆ ದಾಖಲಾಗಿ ಜು.10 ರಂದು ನಿಧನ ಹೊಂದಿದ್ದಾರೆ.
ಆಗಸ್ಟ್‌ನಲ್ಲಿ ಏರಿಕೆಯಾಗಲಿದೆ ಕೋವಿಡ್ ಸೋಂಕಿತರ ಸಂಖ್ಯೆ: ಟಾಸ್ಕ್ ಫೋರ್ಸ್
ತೀವ್ರ ಉಸಿರಾಟ ತೊಂದರೆ, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿ ನಗರದ ಮೆಕ್ಕಾ ಕಾಲೋನಿಯ 56 ವರ್ಷದ ಪುರುಷ (P-42296) ಜು.12 ರಂದು ಆಸ್ಪತ್ರೆಗೆ ದಾಖಲಾಗಿ ಜು.26 ರಂದು ಮೃತಪಟ್ಟಿದ್ದಾರೆ.
ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿಯ ತಾಜ್ ನಗರದ 65 ವರ್ಷದ ವೃದ್ಧ (P-58391) ಜು.14 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಸಾವನ್ನಪ್ಪಿದ್ದಾರೆ.
ತೀವ್ರ ಉಸಿರಾಟ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡ ಹಾಗೂ ಬಳಲುತ್ತಿದ್ದ ಕಲಬುರಗಿ ನಗರದ ಹೀರಾಪುರ ಕ್ರಾಸ್ ನಿವಾಸಿ 68 ವರ್ಷದ ವೃದ್ಧ (P-64904) ಜು.18 ರಂದು ಆಸ್ಪತ್ರೆಗೆ ದಾಖಲಾಗಿ ಜು. 20 ರಂದು ನಿಧನ.
ನ್ಯೂಮೋನಿಯಾದಿಂದ ಬಳಲುತ್ತಿದ್ದ ಕಲಬುರಗಿಯ ವಿದ್ಯಾ ನಗರದ 43 ವರ್ಷದ ಪುರುಷ (P-69465) ಜು.20 ರಂದು ಆಸ್ಪತ್ರೆಗೆ ದಾಖಲಾಗಿ ಜು.26 ರಂದು ಸಾವು.
ಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಂಡಗಿಯ 60 ವರ್ಷದ ವೃದ್ಧೆ (P-77561) ಜು.19ರಂದು ಆಸ್ಪತ್ರೆಗೆ ದಾಖಲಾಗಿ ಜು.27 ರಂದು ನಿಧನ ಹೊಂದಿದ್ದಾರೆ.