ದಾವಣಗೆರೆ: ರೈತ ಮಹಿಳೆ ಹೊತ್ತೊಯ್ದು ಕೊಂದ ಚಿರತೆ, ಸೆರೆ ಹಿಡಿಯಲು ಗ್ರಾಮಸ್ಥರ ಪ್ರತಿಭಟನೆ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾ. ಪಲವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸುಮಾರು 6 ಗಂಟೆ ವೇಳೆಯಲ್ಲಿ ಸಂಭವಿಸಿದ ಘಟನೆ 

55 Year Old Woman Dies Due to Leopard Attack in Davanagere grg

ದಾವಣಗೆರೆ/ನ್ಯಾಮತಿ(ಆ.24):  ಮೆಕ್ಕೆಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿದ ಚಿರತೆ ಆಕೆ ಕತ್ತಿಗೆ ಬಾಯಿ ಹಾಕಿ, ರಕ್ತ ಹೀರಿ ಬಲಿ ಪಡೆದ ಘಟನೆ ಜಿಲ್ಲೆಯ ನ್ಯಾಮತಿ ತಾ. ಪಲವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸುಮಾರು 6 ಗಂಟೆ ವೇಳೆಯಲ್ಲಿ ಸಂಭವಿಸಿದೆ. ನ್ಯಾಮತಿ ತಾ. ಪಲವನಹಳ್ಳಿ ಗ್ರಾಮದ ಕಮಲಿ ಬಾಯಿ(55 ವರ್ಷ) ಚಿರತೆಗೆ ಬಲಿಯಾದ ಮಹಿಳೆ. ಎಂದಿನಂತೆ ತನ್ನ ಮೆಕ್ಕೆಜೋಳದ ಹೊಲದಲ್ಲಿ ಕಮಲಿ ಬಾಯಿ ಕೆಲಸ ಮಾಡಿಕೊಂಡಿದ್ದ ವೇಳೆ ಹೊಂಚು ಹಾಕಿ ಬಂದ ಚಿರತೆ ಏಕಾಏಕಿ ದಾಳಿ ಮಾಡಿ, ಸುಮಾರು ಒಂದೂವರೆ ಕಿಮೀ ದೂರಕ್ಕೆ ಆಕೆಯನ್ನು ಎಳೆದೊಯ್ದಿದೆ.

ಕಮಲೀ ಬಾಯಿ ಕುತ್ತಿಗೆಗೆ ಬಾಯಿ ಹಾಕಿರುವ ಚಿರತೆ ರಕ್ತವನ್ನು ಹೀರಿ ಅಲ್ಲಿಂದ ತೆರಳಿದೆ. ಚಿರತೆ ದಾಳಿಗೆ ತುತ್ತಾಗ ಕಮಲಿ ಬಾಯಿ ಕೂಗಿಕೊಳ್ಳಲು ಆಸ್ಪದ ನೀಡದಂತೆ ಕ್ಷಣಮಾತ್ರದಲ್ಲಿ ಘಟನೆ ಸಂಭವಿಸಿದೆ. ಕಮಲಿ ಬಾಯಿ ಮನೆಗೆ ಬಾರದಿದ್ದಾಗ ವಿಷಯ ತಿಳಿದು ಹುಡುಕಿಕೊಂಡು ಹೋದಾಗ ಸುಮಾರು ಒಂದೂವರೆ ಕಿಮೀ ದೂರದಲ್ಲಿ ಕಮಲಿಬಾಯಿ ಮೃತ ದೇಹ ಪತ್ತೆಯಾಗಿದೆ.

ಬೆಳಗಾವಿ ಚಿರತೆ ಸೆರೆಗೆ 200 ಜನ!: ಕಾರ್ಯಾಚರಣೆಗೆ 2 ಆನೆ ಕೂಡ ಬಳಕೆ

ಕಳೆದ ಆರೇಳು ತಿಂಗಳಿನಿಂದಲೂ ಈ ಭಾಗದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳನ್ನು ಹಿಡಿಯಲು ಪಂಜರ ಇಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡೇ ಬಂದಿ ದ್ದರು. ಆದರೆ, ಅರಣ್ಯ ಇಲಾಖೆ ಸ್ಪಂದಿಸದ ಹಿನ್ನೆಲೆಯಲ್ಲಿ ಅಮಾಯಕ ಕಮಲಿ ಬಾಯಿ ಚಿರತೆಗೆ ಆಹಾರವಾಗಿದ್ದಾರೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಲಿ ಎಂಬುದಾಗಿ ಪಟ್ಟು ಹಿಡಿದು ಕುಳಿತರು.

ಪಲವನಹಳ್ಳಿ ಗ್ರಾಮಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸಿ ಹುಲ್ಮನಿ ತಿಮ್ಮಣ್ಣ, ಸಿಪಿಐ ಟಿ.ವಿ.ದೇವರಾಜ, ತಹಸೀಲ್ದಾರ್‌ ರೇಣುಕಾ ಸೇರಿದಂತೆ ಅರಣ್ಯಾಧಿಕಾರಿ, ಸಿಬ್ಬಂದಿ ಭೇಟಿ ನೀಡಿದ್ದರು. ತಕ್ಷಣವೇ ನರ ಹಂತಕ ಚಿರತೆ ಹಿಡಿಯಲು ಬೋನಇ್ಡಲು ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು. ಕಮಲಿ ಬಾಯಿ ಘಟನೆಯಿಂದ ಆತಂಕಗೊಂಡಿರುವ ಪಲವನಹಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರು ಈಗ ತಮ್ಮ ಹೊಲ, ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
 

Latest Videos
Follow Us:
Download App:
  • android
  • ios