ಮೈಸೂರು(ಮಾ.06): ಯಸ್ ಬ್ಯಾಂಕ್ ಸೂಪರ್ ಸೀಡ್ ಹಿನ್ನೆಲೆ ಜನ ಹಣ ಡ್ರಾ ಮಾಡಲು ಮುಗಿಬಿದ್ದಿದ್ದಾರೆ. ತಿಂಗಳಿಗೆ 50 ಸಾವಿರ ರೂಪಾಯಿ ಮೊತ್ತ ನಿಗದಿಪಡಿಸಿದ್ದು, ಗ್ರಾಹಕರು ಸಿಬ್ಬಂದಿಯಲ್ಲಿಯೂ ಆತಂಕ ಸೃಷ್ಟಿಯಾಗಿದೆ.

ಗ್ರಾಹಕರು ಮತ್ತು ಸಿಬ್ಬಂದಿಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಹಣ ಪಡೆಯಲು ಜನ ಮುಗಿಬಿದ್ದಿದ್ದಾರೆ. ಗ್ರಾಹಕರು ಬ್ಯಾಂಕ್‌ನಲ್ಲಿ ಚಲನ್ ತುಂಬಿ ಹಣ ಪಡೆಯುತ್ತಿದ್ದಾರೆ.

ಯೆಸ್ ಬ್ಯಾಂಕ್ ಆಡಳಿತ ಮಂಡಳಿ ವಜಾಗೊಳಿಸಿದ ಆರ್‌ಬಿಐ; ವಿತ್‌ ಡ್ರಾಗೆ ನಿರ್ಬಂಧ

ಎಷ್ಟೇ ಹಣ ಇದ್ದರೂ ತಿಂಗಳಿಗೆ ಕೇವಲ‌ 50 ಸಾವಿರ ಮಾತ್ರ ಹಣ ಪಡೆಯಲು ಅವಕಾಶ ನೀಡಲಾಗಿದ್ದು, ಗ್ರಾಹಕರು ಐಡಿ ಪ್ರೂಫ್ ಕೊಟ್ಟು ಹಣ ಪಡೆಯುತ್ತಿದ್ದಾರೆ. ಎಟಿಎಂನಲ್ಲೂ ಹಣ ಬರುತ್ತಿಲ್ಲ. ನೆಟ್‌ಬ್ಯಾಂಕ್, ಬ್ಯಾಂಕ್ ಆ್ಯಪ್, ಆನ್‌ಲೈನ್‌ ಸೇವೆಯೂ ಸ್ಥಗಿತವಾಗಿದೆ. ಮಾಧ್ಯಮಗಳಿಗೆ ಬ್ಯಾಂಕ್ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಗ್ರಾಹಕರು ನಿರಂತರವಾಗಿ ಬ್ಯಾಂಕ್‌ನತ್ತ ಬಂದು ಹೋಗುತ್ತಿದ್ದಾರೆ.