ಬೆಂಗ್ಳೂರಲ್ಲಿ 6 ದಿನದಲ್ಲಿ 50 ಮಂದಿ ಪ್ಲಾಸ್ಮಾ ದಾನ

ಕೊರೋನಾ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪ್ಲಾಸ್ಮಾ ಥೆರಪಿ ಯಶಸ್ವಿಯಾದ ಬೆನ್ನಲ್ಲೇ ಪ್ಲಾಸ್ಮಾ ದಾನಕ್ಕೆ ಸರ್ಕಾರ ಮನವಿ ಮಾಡಿದ ಮನವಿಗೆ ರಾಜಧಾನಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

50 covid19 survivors donated plasma in last 6 days

ಬೆಂಗಳೂರು(ಜು.28): ಕೊರೋನಾ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪ್ಲಾಸ್ಮಾ ಥೆರಪಿ ಯಶಸ್ವಿಯಾದ ಬೆನ್ನಲ್ಲೇ ಪ್ಲಾಸ್ಮಾ ದಾನಕ್ಕೆ ಸರ್ಕಾರ ಮನವಿ ಮಾಡಿದ ಮನವಿಗೆ ರಾಜಧಾನಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ಆರು ದಿನಗಳಿಂದ 50 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಇನ್ನೂ 150 ಮಂದಿ ಪ್ಲಾಸ್ಮಾ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ನಗರದ ಎಚ್‌ಸಿಜಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಬ್ಯಾಂಕ್‌ ತೆರೆದು ಪ್ಲಾಸ್ಮಾ ಸಂಗ್ರಹಿಸಲಾಗುತ್ತಿದೆ.

ಐಜಿಪಿ ರೂಪಾ ಖಡಕ್‌ ವಾರ್ನಿಂಗ್‌ ಬೆಚ್ಚಿದ ಖಾಸಗಿ ಆಸ್ಪತ್ರೆ: 24 ಲಕ್ಷ ರೂ. ವಾಪಸ್!

ಪ್ಲಾಸ್ಮಾ ದಾನಿಗಳಿಗೆ ರಾಜ್ಯ ಸರ್ಕಾರ ಐದು ಸಾವಿರ ರು. ಪ್ರೋತ್ಸಾಹಧನ ಘೋಷಿಸಿದೆ. ಹೀಗಾಗಿ ಕೊರೋನಾ ಸೋಂಕಿನಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾ ದಾನಕ್ಕೆ ಮುಂದಾಗುತ್ತಿದ್ದಾರೆ.

ರಾಜಧಾನಿಯ ವಿಕ್ಟೋರಿಯಾ, ಕಿಮ್ಸ್‌ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಈ ಥೆರೆಪಿ ಹೆಚ್ಚುವ ಉದ್ದೇಶದಿಂದ ಪ್ಲಾಸ್ಮಾ ದಾನ ಮಾಡುವಂತೆ ಕರೆ ನೀಡಿತ್ತು.

Latest Videos
Follow Us:
Download App:
  • android
  • ios