ವಿಜಯಪುರದ ಸ್ಮಶಾನದಲ್ಲಿ 50 ಅಸ್ಥಿಗಳು ಅನಾಥ

* ಯಾರೊಬ್ಬರು ತಮ್ಮ ಮೃತರ ಅಸ್ಥಿ ತೆಗೆದುಕೊಂಡು ಹೋಗಲು ಬಂದಿಲ್ಲ
* ಕಳೆದ ಒಂದೂವರೆ ತಿಂಗಳಿನಿಂದ ಸ್ಮಶಾನದಲ್ಲಿ ಅನಾಥವಾಗಿ ಬಿದ್ದ ಅಸ್ಥಿ
* ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ದೇವಗಿರಿ ರುದ್ರಭೂಮಿ 
 

50 Ashes Orphan in Cemetry in Vijayapura grg

ವಿಜಯಪುರ(ಜೂ.12): ನಗರದಲ್ಲಿ ಕಳೆದ ಒಂದೂವರೆ ತಿಂಗಳಿಂದ ಕೋವಿಡ್‌ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ ಸುಮಾರು 50 ವ್ಯಕ್ತಿಗಳ ಚಿತಾಭಸ್ಮ (ಅಸ್ಥಿ)ವನ್ನು ಸಂಬಂಧಿಕರು ತೆಗೆದುಕೊಂಡು ಹೋಗದೆ ಕಾರಣ ಅದು ಸ್ಮಶಾನದಲ್ಲಿಯೇ ಉಳಿದುಕೊಂಡಿದೆ.

ನಗರದ ಸೊಲ್ಲಾಪುರ ರಸ್ತೆಯಲ್ಲಿನ ದೇವಗಿರಿ ರುದ್ರಭೂಮಿ (ಹಿಂದು ರುದ್ರಭೂಮಿ)ಯಲ್ಲಿ 50 ಜನರ ಚಿತಾಭಸ್ಮ ಹಾಗೆ ಇದೆ. ಕಳೆದ ಎರಡು ತಿಂಗಳ ಹಿಂದೆ ಸ್ಮಶಾನದಲ್ಲಿ ದಿನಕ್ಕೆ 10-15 ಮೃತ ವ್ಯಕ್ತಿಗಳ ಶವ ಸಂಸ್ಕಾರ ನಡೆಯುತ್ತಿತ್ತು. ಹಗಲಿರುಳು ತಿಂಗಳುಗಟ್ಟಲೆ ಬೆಂಕಿ ಹಾಗೆ ಉಳಿದುಕೊಂಡಿತ್ತು. ಆ ಕಾರಣಕ್ಕಾಗಿಯೇ ಮೃತರ ಸಂಬಂಧಿಕರು ತಮ್ಮ ಮೃತ ವ್ಯಕ್ತಿಗಳ ಅಸ್ಥಿ ತೆಗೆದುಕೊಂಡು ಹೋಗದೆ ಹಾಗೆ ಇದೆ.

ಕವಾಸಕಿ, HLH ಬಳಿಕ ಮಕ್ಕಳಿಗೆ 'ಮಿಸ್ಸಿ' ಕಾಟ; ವಿಜಯಪುರದಲ್ಲಿ ಪತ್ತೆ

ಈ ಅಸ್ಥಿಯನ್ನು ಹಾಗೆ ಇಡಲಾಗಿದೆ. ಆದರೆ, ಇಲ್ಲಿಯವರೆಗೆ ಯಾರೊಬ್ಬರು ತಮ್ಮ ಮೃತರ ಅಸ್ಥಿ ತೆಗೆದುಕೊಂಡು ಹೋಗಲು ಬಂದಿಲ್ಲ. ಹೀಗಾಗಿ ಕಳೆದ ಒಂದೂವರೆ ತಿಂಗಳುಗಳಿಂದ ಅಸ್ಥಿ ಸ್ಮಶಾನದಲ್ಲಿ ಅನಾಥವಾಗಿಯೇ ಬಿದ್ದಿದೆ. ಈ ಹಿಂದೆ ಕಂದಾಯ ಸಚಿವ ಆರ್‌.ಅಶೋಕ ಅವರು ಇಂಥ ಅಸ್ಥಿಗಳನ್ನು ಪಡೆದು ಸಾಮೂಹಿಕವಾಗಿ ವಿಧಿ ವಿಧಾನಗಳ ಮೂಲಕ ಅಂತಿಮವಾಗಿ ಅವರ ಚಿತಾಭಸ್ಮವನ್ನು ನದಿಗೆ ಹಾಕಿದ್ದರು. ಅದೇ ರೀತಿ ಜಿಲ್ಲೆಯಲ್ಲಿ 50 ಜನರ ಅಸ್ಥಿಯನ್ನು ಜಿಲ್ಲಾಡಳಿತ, ಮಹಾನಗರಪಾಲಿಕೆಯಿಂದ ಸಾಮೂಹಿಕ ವಿಧಿ ವಿಧಾನ ಮೂಲಕ ನದಿಗೆ ವಿಸರ್ಜನೆ ಮಾಡುವರೋ, ಇಲ್ಲವೆ ಜನಪ್ರತಿನಿಧಿಗಳು ಅಥವಾ ಸಂಘ ಸಂಸ್ಥೆಗಳು ಈ ಅಸ್ಥಿಯನ್ನು ಪಡೆದುಕೊಂಡು ವಿಧಿ ವಿಧಾನಗಳ ಪ್ರಕಾರ ನದಿಗೆ ಬಿಡುವರೋ? ಎಂಬುವುದನ್ನು ಕಾದು ನೋಡಬೇಕಿದೆ.
 

Latest Videos
Follow Us:
Download App:
  • android
  • ios