ಕೊಪ್ಪಳ: ಇಂಗ್ಲಿಷ್ ವ್ಯಾಮೋಹದ ಮಧ್ಯೆ 5 ವರ್ಷದ ಬಾಲಕಿಯ ಕನ್ನಡ ಪ್ರೇಮ..!
ಸ್ವರ ಹುಟ್ಟಿದ್ದು 2017 ನವಂಬರ್ 1 ರಂದು. ಆಕೆ ಇನ್ನೂ ಶಾಲೆಯ ಮೆಟ್ಟಿಲು ಹತ್ತಿಲ್ಲ. ಆದರೆ ಈಗಾಗಲೇ ಕನ್ನಡ ಭಾಷೆಯನ್ನು ಶುದ್ದವಾಗಿ ಮಾತನಾಡುತ್ತಾಳೆ
ವರದಿ- ದೊಡ್ಡೇಶ್ ಯಲಿಗಾರ್, ಏಶಿಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
ಕೊಪ್ಪಳ(ನ.01): ಈಗಿನ ಸಂದರ್ಭದಲ್ಲಿ ಕನ್ನಡ ಕಲಿಯುವವರು ಕಡಿಮೆ. ಶುದ್ದವಾದ ಕನ್ನಡ ಮಾತನಾಡುವವರು, ಮಾತನಾಡಿದರೂ ಬರೆಯುವವರು ಕಡಿಮೆ. ಇಂತಹ ಸಂದರ್ಭದಲ್ಲಿ ಕೇವಲ 5 ವರ್ಷದ ಬಾಲಕಿಯೊಬ್ಬಳು ಶುದ್ದ ಕನ್ನಡ ಮಾತನಾಡುತ್ತಾಳೆ. ಇದನ್ನು ಕೇಳಿ ಆಶ್ಚರ್ಯ ಪಡಬೇಡಿ, ಅಷ್ಟಕ್ಕೂ ಯಾರು ಆ ಬಾಲಕಿ ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.
ಕನ್ನಡ ಬರೆಯುವ, ಓದುವ ಬಾಲಕಿ ಯಾರು?
ಕೇವಲ ಐದು ವರ್ಷದ ಈ ಬಾಲಕಿಯ ಹೆಸರು ಸ್ವರ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಸುಭಾಸ ಬೆಟಗೇರಿ ಹಾಗು ವಿಜಯಲಕ್ಷ್ಮಿ ಎಂಬುವವರು ಎರಡನೆಯ ಮಗಳು. ಸ್ವರ ಹುಟ್ಟಿದ್ದು 2017 ನವಂಬರ್ 1 ರಂದು. ಆಕೆ ಇನ್ನೂ ಶಾಲೆಯ ಮೆಟ್ಟಿಲು ಹತ್ತಿಲ್ಲ. ಆದರೆ ಈಗಾಗಲೇ ಕನ್ನಡ ಭಾಷೆಯನ್ನು ಶುದ್ದವಾಗಿ ಮಾತನಾಡುತ್ತಾಳೆ. ಎಷ್ಟೇ ಕಠಿಣವಾಗಿರುವ ಶಬ್ದವನ್ನು ಸಹ ಕಾಗುಣಿತ ತಪ್ಪು ಇಲ್ಲದಂತೆ ಬರೆಯುತ್ತಿದ್ದಾಳೆ.
ಚಿಕ್ಕೋಡಿ: ಕರ್ನಾಟಕ ರಾಜ್ಯೋತ್ಸವದಂದು ಡಾ. ರಾಜ್ ವೇಷ ಧರಿಸುವ ಬಸ್ ಕಂಡಕ್ಟರ್..!
ಇಂಗ್ಲಿಷ್ ವ್ಯಾಮೋಹದ ಮಧ್ಯೆ ಕನ್ನಡ ಪ್ರೇಮ
ಇಂದಿನ ದಿನಗಳಲ್ಲಿ ಹಲವರು ಕನ್ನಡ ಮಾತನಾಡುವ ಮಧ್ಯದಲ್ಲಿ ಇಂಗ್ಲಿಷ್ ಭಾಷೆ ಸೇರಿಸಿಕೊಳ್ಳುತ್ತಿದ್ದಾರೆ. ಕೆಲವರು ಉನ್ನತ ಶಿಕ್ಷಣ ಹೊಂದಿದ್ದರೂ ಕನ್ನಡದ ಅಕ್ಷರವನ್ನು ಶುದ್ದವಾಗಿ ಬರೆಯುವುದಿಲ್ಲ. ಅಕ್ಷರ ದೋಷ ಇರುತ್ತದೆ. ಆದರೆ ಸ್ವರ ಎಂಥ ಕಠಿಣವಾದ ಶಬ್ದಗಳನ್ನು ಹೇಳಿದರೂ ತಕ್ಷಣ ಬರೆಯುತ್ತಿದ್ದಾಳೆ. ಈ ಮೂಲಕ ಸ್ವರ ಕನ್ನಡ ಪ್ರೇಮ ಮೆರೆದಿದ್ದಾಳೆ.
ಪಾಲಕರ ಮಾರ್ಗದರ್ಶನದಲ್ಲಿ 11 ತಿಂಗಳಲ್ಲಿ ಕನ್ನಡ ಕಲಿತಿರುವ ಸ್ವರ
ಸ್ವರಳ ತಂದೆ ಸುಭಾಷ ಶಿಕ್ಷಕರಾಗಿದ್ದರು. ಸ್ವಯಂನಿವೃತ್ತಿ ಹೊಂದಿದ್ದಾರೆ. ಆಕೆ ತಾಯಿ ರೋಣ ತಾಲೂಕಿನ ನೆಲ್ಲೂರಿನಲ್ಲಿ ಶಿಕ್ಷಕಿಯಾಗಿದ್ದಾರೆ. ಇಬ್ಬರ ಮಾರ್ಗದರ್ಶನದಿಂದ ಕನ್ನಡ ಬರೆಯುವದನ್ನು ಸರಳವಾಗಿ ಕಲಿತಿದ್ದಾಳೆ. ಕಳೆದ 11 ತಿಂಗಳಿನಿಂದ ತಂದೆ ಆಕೆ ಕನ್ನಡ ಭಾಷೆಯ ಅಕ್ಷರಗಳು ಶಬ್ದಗಳನ್ನು ಕಲಿಸಿದ್ದು ಈಗ ಆಕೆಯ ಬರವಣಿಗೆಯನ್ನು ನೋಡಿದವರು ವಾವ್ಹ್ ಎನ್ನುವಂತಾಗಿದೆ.
ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಯಲ್ಲಿ ಕನ್ನಡ ನಿತ್ಯೋತ್ಸವ..!
ಎಲ್ಲ ಮಕ್ಕಳಿಗೂ ಕನ್ನಡ ಕಲೆಯಲು ಸಾಧ್ಯವಿದೆ
ಎಲ್ಲಾ ಮಕ್ಕಳಲ್ಲಿಯೂ ಕಲಿಯುವ ಶಕ್ತಿ ಇದೆ. ಅವರಿಗೆ ಮಾತೃ ಭಾಷೆಯನ್ನು ಮೊದಲು ಕಲಿಸಿದರೆ ಅವರು ಉಳಿದ ಭಾಷೆಯನ್ನು ಸಹ ಸರಳವಾಗಿ ಕಲಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಶುದ್ಧ ಕನ್ನಡ ಬರೆಸುವದನ್ನು ಮಾಡಬೇಕೆಂದು ಸುಭಾಷ ಹೇಳುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಮಗು ಕನ್ನಡ ಭಾಷೆಯನ್ನು ಬರೆಯುತ್ತಿರುವುದು ವಿಶೇಷವಾಗಿದೆ. ಈ ಮಗುವಿನ ಕಲಿಕಾ ಸಾಮಾರ್ಥ್ಯ ಹಾಗೂ ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನ,ಜ್ಞಾನ ನೋಡಿ ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಇಂತಹ ಜಾಣೆ ನಮ್ಮ ಊರಿನಲ್ಲಿ ಇರುವುದು ಹೆಮ್ಮೆಯ ಸಂಗತಿ ಎನ್ನುವುದು ಗ್ರಾಮಸ್ಥರ ಮಾತು.ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಕನ್ನಡ ಭಾಷೆಯ ಬಗ್ಗೆ ಇಷ್ಟೊಂದು ಜ್ಞಾನ ಇರುವ ಸ್ವರ ಎಲ್ಲರಿಗೂ ಮಾದರಿಯೇ ಸರಿ.