ಭತ್ತಕ್ಕಿಲ್ಲ ಕೊರೋನಾ ಭಯ: ಉಳುಮೆ ಮಾಡುವ 5 ವರ್ಷದ ಬಾಲಕ

ಯುವ ಜನತೆ ಕೃಷಿಯಿಂದ ವಿಮುಖರಾಗುತ್ತಿರುವ ದಿನಗಳಲ್ಲಿ 5 ವರ್ಷದ ಪುಟ್ಟಬಾಲಕನೊಬ್ಬ ನೇಗಿಲು ಹಿಡಿದು ಉಳುಮೆ ಮಾಡುವ ಭರಾಟೆ ಅಚ್ಚರಿಗೆ ಕಾರಣವಾಗಿದೆ.

5 year old boy Plowing in paddy field at karwar

ಕಾರವಾರ(ಜು.13): ಯುವ ಜನತೆ ಕೃಷಿಯಿಂದ ವಿಮುಖರಾಗುತ್ತಿರುವ ದಿನಗಳಲ್ಲಿ 5 ವರ್ಷದ ಪುಟ್ಟಬಾಲಕನೊಬ್ಬ ನೇಗಿಲು ಹಿಡಿದು ಉಳುಮೆ ಮಾಡುವ ಭರಾಟೆ ಅಚ್ಚರಿಗೆ ಕಾರಣವಾಗಿದೆ.

ತಾಲೂಕಿನ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ಶಿರ್ವೆಯ ತನ್ವಿತ್‌ ಮಹಾದೇವ ಗೌಡ ಪಕ್ಕಾ ಪಳಗಿದ ಕೃಷಿಕರಂತೆ ನೇಗಿಲು ಹಿಡಿದು ಉಳುಮೆ ಮಾಡುತ್ತಾನೆ. ಎತ್ತುಗಳಿಗೆ ಕಟ್ಟಿದ ನೇಗಿಲು ಹಿಡಿದು ಹಾಡು ಹೇಳುತ್ತ ಉಳುಮೆ ಮಾಡುತ್ತಾನೆ.

ತಪ್ಪಿಸಿಕೊಳ್ಳೋ ಟೈಮಲ್ಲಿ ಫೋನ್ ಆನ್ ಮಾಡಿದ ಮಗಳು: ಸಿಕ್ಕಿಬಿದ್ದ ಸ್ವಪ್ನಾ ಸುರೇಶ್

ತಮ್ಮ ಕುಟುಂಬದವರು ಉಳುಮೆ ಮಾಡುವುದು, ನಾಟಿ ಮಾಡುವುದು ಮತ್ತಿತರ ಕೃಷಿ ಕಾಯಕಗಳನ್ನು ಶೃದ್ಧೆಯಿಂದ ನೋಡುತ್ತ ನೋಡುತ್ತ ಕೃಷಿಯ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡ. ಈಚೆಗೆ ತಾನೆ ನೇಗಿಲು ಹಿಡಿದು ಕೆಸರುಗದ್ದೆಯಲ್ಲಿ ಪುಟ್ಟಪಾದಗಳನ್ನು ಹಾಕುತ್ತ ಉಳುಮೆಯಲ್ಲಿ ತೊಡಗಿಕೊಂಡಿದ್ದಾನೆ. ಪಾಲಕರ ಜತೆ ದಿನವೂ ಉಳುಮೆ ಮಾಡುತ್ತಿದ್ದಾನೆ.

ಕೋವಿಡ್‌ -19 ಸೋಂಕಿನಿಂದಾಗಿ ಲಾಕ್‌ಡೌನ್‌ ಘೋಷಣೆಯಾಗಿದ್ದು, ಬತ್ತಕ್ಕೆ ಸಂಬಂಧಿಸಿದ ಚಟುವಟಿಕೆ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಜಿಲ್ಲೆಯಲ್ಲಿ ಒಟ್ಟು 33,589 ಹೆಕ್ಟೇರ್‌ ಪ್ರದೇಶದಲ್ಲಿ ಬತ್ತ ಬಿತ್ತನೆಗೆ ಗುರಿ ನಿಗದಿಯಾಗಿದ್ದು, 19,219 ಹೆಕ್ಟೇರ್‌ ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದೆ.

ಕೋವಿಡ್‌ -19 ಸೋಂಕಿನಿಂದಾಗಿ ಕೃಷಿ ಚಟಿವಟಿಕೆಯ ಮೇಲೆ ಪರಿಣಾಮ ಬೀರಿಲ್ಲ. ಜತೆಗೆ ಬೇರೆ ಊರುಗಳಲ್ಲಿ ನೆಲೆಸಿದ್ದ ಮನೆಯ ಸದಸ್ಯರು ತಮ್ಮೂರಿಗೆ ವಾಪಸ್‌ ಆಗಿದ್ದು, ಕೃಷಿ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಹೊಲಗದ್ದೆಗಳ ಕೆಲಸ ಬೇಗನೆ ಪ್ರಾರಂಭವಾಗಿದೆ. ಗದ್ದೆ ಹದ ಮಾಡುವುದು, ರಸಗೊಬ್ಬರ ಹಾಕುವುದು, ಬಿತ್ತನೆಗೆ ಬೀಜ ತಯಾರಿ ಮಾಡಿಕೊಳ್ಳುವುದು ಈಗಾಗಲೆ ಬಹುತೇಕ ಕಡೆಗಳಲ್ಲಿ ನಡೆಯುತ್ತಿದೆ.

ಅಂಧನ 'ಮನೆ' ಬೆಳಗಿದ ಯುವ ಬ್ರಿಗೇಡ್: ಮನೆ ಹಸ್ತಾಂತರಿಸಿದ ಸೂಲಿಬೆಲೆ

ಜತೆಗೆ ಕಳೆದ ವರ್ಷ ಜೂನ್‌ ಕೊನೆಯ ವಾರದಲ್ಲಿ ಮಳೆ ಪ್ರಾರಂಭವಾಗಿತ್ತು. ಆದರೆ, ಈ ವರ್ಷ ಮೊದಲೇ ಮಳೆ ಬೀಳಲು ಆರಂಭವಾಗಿದ್ದು, ರೈತರಿಗೆ ಮತ್ತಷ್ಟುಅನುಕೂಲವಾಗಿದೆ. ಕೂರಿಗೆ ಪದ್ಧತಿಯಲ್ಲಿ 17050 ಹೆಕ್ಟೇರ್‌ನಲ್ಲಿ 15709 ಹೆಕ್ಟೇರ್‌ ಹಾಗೂ ನಾಟಿ ಬಿತ್ತನೆಯಲ್ಲಿ 33589 ಹೆಕ್ಟೇರ್‌ನಲ್ಲಿ 3510 ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿದೆ.

ಮುಂಡಗೋಡ ತಾಲೂಕಿನಲ್ಲಿ 6830 ಹೆಕ್ಟೇರ್‌ನಲ್ಲಿ 6000 ಹೆಕ್ಟೇರ್‌, ಶಿರಸಿ ತಾಲೂಕಿನಲ್ಲಿ 9182 ಹೆಕ್ಟೇರ್‌ನಲ್ಲಿ 2815 ಹೆಕ್ಟೇರ್‌, ಸಿದ್ದಾಪುರ 5952 ಹೆಕ್ಟೇರ್‌ನಲ್ಲಿ 286 ಹೆಕ್ಟೇರ್‌, ಹೊನ್ನಾವರ 2600 ಹೆಕ್ಟೇರ್‌ನಲ್ಲಿ 387 ಹೆಕ್ಟೇರ್‌, ಭಟ್ಕಳ 2500 ಹೆಕ್ಟೇರ್‌ನಲ್ಲಿ 2259 ಹೆಕ್ಟೇರ್‌, ಕುಮಟಾ 2835 ಹೆಕ್ಟೇರ್‌ನಲ್ಲಿ 675 ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿದೆ.

ದಕ್ಷಿಣ ಕನ್ನಡ ಮತ್ತೆ ಸಂಪೂರ್ಣ ಲಾಕ್ ಡೌನ್ ಆಗೋದು ಪಕ್ಕಾ: ಸಚಿವ ಕೋಟ

ಕಾರವಾರ 1550 ಹೆಕ್ಟೇರ್‌ನಲ್ಲಿ 90 ಹೆಕ್ಟೇರ್‌, ಅಂಕೋಲಾ 4700 ಹೆಕ್ಟೇರ್‌ನಲ್ಲಿ 90 ಹೆಕ್ಟೇರ್‌, ಯಲ್ಲಾಪುರ 4040ರಲ್ಲಿ 610 ಹೆಕ್ಟೇರ್‌, ಹಳಿಯಾಳ 6050ರಲ್ಲಿ 5965 ಹೆಕ್ಟೇರ್‌, ಜೊಯಿಡಾ 4400ರಲ್ಲಿ 38 ಹೆಕ್ಟೇರ್‌ ಪ್ರದೇಶ ಬಿತ್ತನೆ ಪೂರ್ಣಗೊಂಡಿದೆ.

Latest Videos
Follow Us:
Download App:
  • android
  • ios