ಅಂಧನ 'ಮನೆ' ಬೆಳಗಿದ ಯುವ ಬ್ರಿಗೇಡ್: ಮನೆ ಹಸ್ತಾಂತರಿಸಿದ ಸೂಲಿಬೆಲೆ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೇನ್ಯ ಗ್ರಾಮದ ಕಣ್ಕಲ್ ಎಂಬಲ್ಲಿ ಸ್ವಾವಲಂಬಿ ವ್ಯಕ್ತಿತ್ವದ ಲಿಂಗು ಎಂಬವರಿಗೆ ಕಡಬದ ಯುವ ಬ್ರಿಗೇಡ್ ಕಾರ್ಯಕರ್ತರು ದಾನಿಗಳ ಸಹಕಾರದಿಂದ ನಿರ್ಮಿಸಿದ 'ನಮ್ಮನೆ'ಯನ್ನು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಸ್ತಾಂತರಿಸಿದ್ದಾರೆ. ಇಲ್ಲಿವೆ ಫೋಟೋಸ್
ದ.ಕ ಜಿಲ್ಲೆಯ ಕಡಬ ತಾಲೂಕಿನ ಕೇನ್ಯ ಗ್ರಾಮದ ಕಣ್ಕಲ್ ಎಂಬಲ್ಲಿ ಸ್ವಾವಲಂಬಿ ವ್ಯಕ್ತಿತ್ವದ ಲಿಂಗು ಎಂಬವರಿಗೆ ಮನೆ ಇರಲಿಲ್ಲ. ಮುರುಕಲು ಗುಡಿಸಲಿನಲ್ಲಿ ವಾಸವಿದ್ದರು
ಕಡಬದ ಯುವ ಬ್ರಿಗೇಡ್ ಕಾರ್ಯಕರ್ತರು ಇದನ್ನು ಗಮನಿಸಿ ಮನೆ ನಿರ್ಮಿಸಿಕೊಟ್ಟಿದ್ದಾರೆ.
ನೂತನ ನಿವಾಸದಲ್ಲಿ ಪುರೋಹಿತರು ಗಣಹೋಮ ನೆರವೇರಿಸಿದರು.
ಗೋಪೂಜೆ ನಡೆಯಿತು. ನಂತರ ಚಕ್ರವರ್ತಿ ಸೂಲಿಬೆಲೆಯವರು ಮನೆ ಮುಂಭಾಗದ ತುಳಸಿ ಕಟ್ಟೆಯಲ್ಲಿ ತುಳಸಿ ಗಿಡ ನೆಟ್ಟರು.
ಕೇನ್ಯ ಗ್ರಾಮದ ಕಣ್ಕಲ್ ಎಂಬಲ್ಲಿ ಬಡ ವ್ಯಕ್ತಿಗೆ ಸೂರು ನಿರ್ಮಿಸಿ ಕೊಡುವ ಮೂಲಕ ಕಡಬದ ಯುವ ಬ್ರಿಗೇಡ್ ಆದರ್ಶತೆಯೊಂದಿಗೆ ಮಾನವೀಯತೆ ಮೆರೆದಿದೆ
ಕಳೆದ ನಾಲ್ಕು ವರ್ಷದ ಹಿಂದೆ ನಿರ್ಮಿಸಿದ ಟರ್ಪಲಿನ ಜೋಪಡಿಯು ಬೀಳುವ ಸ್ಥಿತಿಯಲ್ಲಿ ಇದನ್ನು ಮನಗಂಡ ಕಡಬ ಯುವ ಬ್ರಿಗೇಡ್‍ನ ಸದಸ್ಯರು ಲಿಂಗು ಅವರಿಗೆ ನೂತನ ಸೂರು ನಿರ್ಮಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನ ಯುವ ಬ್ರಿಗೇಡ್ ವಿಭಾಗ ಸಂಚಾಲಕ ತಿಲಕ್ ಶಿಶಿಲ ಅವರ ನೇತೃತ್ವದಲ್ಲಿ ಯುವ ಬ್ರಿಗೇಡ್ ಸದಸ್ಯರಾದ ಹರ್ಷ, ಹೃತ್ವಿಕ್, ಕಾರ್ತಿಕ್, ಮಿಥುನ್, ಸುನೀಲ್, ಸ್ಥಳಿಯರಾದ ಸದಾನಂದ, ವಿಶ್ವನಾಥರ ಸಹಕಾರದಲ್ಲಿ ದಾನಿಗಳ ನೆರವಿನಿಂದ ಲಿಂಗು ಅವರಿಗೆ ನೂತನ ನಿವಾಸ ನಮ್ಮನೆಯನ್ನು ನಿರ್ಮಾಣ ಮಾಡಲಾಗಿದೆ.
ಕಾರ್ಯಕರ್ತರಿಗೆ ಶಾಲು ಹಾಕಿ ಅಭಿನಂದಿಸುತ್ತಿರುವುದು
Chakravarti Sulibele
ಬಳ್ಪ ಗ್ರಾಮದ ಕಣ್ಕಲ್ ನಿವಾಸಿ ಲಿಂಗು ಅವರು ಹುಟ್ಟಿನಿಂದಲೇ ಅಂಧರಾಗಿದ್ದರು. ಸ್ವಾವಲಂಭಿಯಾಗಿ ಒಬ್ಬರೇ ಜೀವನ ಸಾಗಿಸುತ್ತಾ ಬಂದಿದ್ದಾರೆ.
Chakravarti Sulibele
ಸುಬ್ರಹ್ಮಣ್ಯ ಯುವ ಬ್ರಿಗೇಡ್‍ನ ಸೂರ್ಯನಾರಾಯಣ ಭಟ್, ರಮೇಶ್ ಭಟ್, ಕೃಷ್ಣರಾಜ್ ಮತ್ತು ಶ್ರೀಕುಮಾರ್ ಸಹಕಾರ ನೀಡಿದ್ದರು.ಉಪ್ಪಿನಂಗಡಿ ನಿವಾಸಿ ಪೋಲೀಸ್ ಕಾನ್‍ಸ್ಟೇಬಲ್ ಅವರು ತಮ್ಮ ವಿವಾಹ ನಿಮಿತ್ತವಾಗಿ ಮನೆ ನಿರ್ಮಾಣಕ್ಕಾಗಿ ರೂ.25 ಸಾವಿರ ಧನ ಸಹಕಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.ಉಳಿದಂತೆ ದಾನಿಗಳ ಸಹಕಾರದಿಂದ ನೂತನ ಸೂರು ನಿರ್ಮಿತವಾಗಿದೆ.
ಗಣಹೋಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರೂ ಭಾಗಿಯಾದರು
ಲಿಂಗು ಅವರ ಹೊಸ ಮನೆ
ಯುವ ಬ್ರಿಗೇಡ್ ವಿಭಾಗ ಸಂಚಾಲಕ ತಿಲಕ್ ಶಿಶಿಲ ಹಾಗೂ ಕಡಬ ಮತ್ತು ಸುಬ್ರಹ್ಮಣ್ಯದ ಯುವ ಬ್ರಿಗೇಡ್ ಕಾರ್ಯಕರ್ತರು