ಮೈಸೂರು(ಮಾ.04) : ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಸಂಗೀತ ಶಿಕ್ಷಕನಿಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯವು 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದೆ.

ಮೈಸೂರಿನ ಎನ್‌.ಆರ್‌. ಮೊಹಲ್ಲಾ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿದ್ದ ಸಿದ್ದರಾಜು ಶಿಕ್ಷೆಗೆ ಗುರಿಯಾದವ. ಈತ 2016ರಲ್ಲಿ ಶಾಲೆಯ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಮತ್ತು ಶಾಲಾ ಆವರಣದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಮಂಡಿ ಠಾಣೆಗೆ ದೂರು ನೀಡಿದ್ದರು.

ಹಳೆ ವಿದ್ಯಾರ್ಥಿನಿ ಜೊತೆ ರಾಸಲೀಲೆಯಾಡಿದ್ದ ಶಿಕ್ಷಕ ಅಮಾನತು

ಈ ಸಂಬಂಧ ಮಂಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮಹಿಳಾ ಠಾಣೆ ಸಿಬ್ಬಂದಿ ಮೂಲಕ ವಿದ್ಯಾರ್ಥಿನಿಯರನ್ನು ವಿಚಾರಣೆ ಮಾಡಿ, ಹೇಳಿಕೆಗಳನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು.

ಸ್ಟೂಡೆಂಟ್ ಜೊತೆ ಶಿಕ್ಷಕನ ಲವ್ವಿ ಡವ್ವಿ; ರಾಸಲೀಲೆ ಫೋಟೋಗಳು ವೈರಲ್!

ಈ ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್‌. ಜಯಶ್ರೀ ಅವರು ಆರೋಪಿ ಸಿದ್ದರಾಜು ತಪ್ಪಿತಸ್ಥನೆಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಸಿ. ಶಿವರುದ್ರಸ್ವಾಮಿ ವಾದಿಸಿದ್ದರು.