ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚುತ್ತಲೇ ಇದ್ದರೂ, ಸಮೂಹ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಏನ್ ಹೇಳಿದ್ದಾರೆ ಇಲ್ಲಿ ಓದಿ.

ಬೆಂಗಳೂರು(ಮೇ 15): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚುತ್ತಲೇ ಇದ್ದರೂ, ಸಮೂಹ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಶೇಕಡ 25ರಷ್ಟು ಕೊರೋನಾ ಪ್ರಕರಣಗಳು ಹೊರರಾಜ್ಯಗಳ ಮತ್ತು ವಿದೇಶಿ ಪ್ರಯಾಣಿಕರಿಂದ ಉಂಟಾಗಿವೆ. ಶೇಕಡ 7ರಷ್ಟು ಪ್ರಕರಣಗಳಲ್ಲಿ SARI, ILI ಯಂತಹ ಇತರೆ ಪೂರ್ವ ಕಾರಣಗಳಿವೆ ಎಂದಿದ್ದಾರೆ.

ಯಾವುದೇ ವೈರಸ್ ಮನುಷ್ಯನ ಸೋಲಿಸಿಲ್ಲ: ಜನರಿಗೆ ಧೈರ್ಯ ತುಂಬಿದ ಸಚಿವ ಸುಧಾಕರ್..!

ರಾಜ್ಯದ ಸಕಾರಾತ್ಮಕ ದರ ಶೇ 1%ರಷ್ಟಿದ್ದು, ಪ್ರತಿ 100 ಟೆಸ್ಟ್ ಗಳಿಗೆ 1 ಪ್ರಕರಣ ಪತ್ತೆಯಾಗುತ್ತಿದೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ 987 ಪ್ರಕರಣಗಳು ಪತ್ತೆಯಾಗಿದ್ದು, ಇಂದು 1000ದ ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.

"

ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಕೊರೋನಾ ಸ್ಯಾಂಪಲ್ ಚೆಕ್ ಆಗಿದೆ: ಸಚಿವ ಡಾ. ಸುಧಾಕರ್

ಈಗಾಗಲೇ ವಿದೇಶಿಯರನ್ನು ಕರೆತಂದಿರುವ ವಿಮಾನ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಇಳಿದಿದ್ದು, ಇನ್ನಷ್ಟು ಆತಂಕ ಸೃಷ್ಟಿಯಾಗಿದೆ. ಗ್ರೀನ್‌ ಝೋನ್ ಆಗಿರುವ ಉಡುಪಿಯಲ್ಲಿ ದುಬೈನಿಂದ ಮರಳಿದವರಿಂದಾಗಿ ಕೊರೋನಾ ಭೀತಿ ಉಂಟಾಗಿದೆ.

ರಾಜ್ಯದಲ್ಲಿ ಕೊರೋನಾ ಹರಡಲು ಕಾರಣ ಏನ್ ಗೊತ್ತಾ?

ILI ಕೊರೋನ ಆಪ್ರಕರಣಗಳ ಲಕ್ಷಣಗಳೇನು..?

  • ಉಸಿರಾಟದ ತೊಂದರೆ
  • 38 ಡಿಗ್ರಿ ಸೆಲ್ಶಿಯಸ್‌ನಷ್ಟು ಉಷ್ನಾಂಶದಲ್ಲಿ ಜ್ವರ
  • ಕೆಮ್ಮು
  • ಈ ಲಕ್ಷಣಗಳು 10 ದಿನಗಳೊಳಗಾಗಿ ಕಾಣಿಸಿಕೊಳ್ಳುತ್ತದೆ.

SARI ಕೊರೋನಾ ಪ್ರಕರಣಗಳ ಲಕ್ಷಣ

  • ಉಸಿರಾಟದ ತೊಂದರೆ
  • ಜ್ವರ ಕಾಣಿಸಿಕೊಳ್ಳುವುದು, 38 ಡಿಗ್ರಿ ಸೆಲ್ಶಿಯಸ್‌ನಷ್ಟು ದೇಹದ ಉಷ್ಣತೆ ಹೆಚ್ಚಾಗುವುದು
  • ಕೆಮ್ಮು
  • 10 ದಿನಗಳೊಳಗೆ ಸೋಂಕಿನ ಇರುವಿಕೆ ಪತ್ತೆಯಾಗಿತ್ತದೆ
  • ಈ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಸೇರಿಸುವ ಅಗತ್ಯವಿರುತ್ತದೆ.