Asianet Suvarna News Asianet Suvarna News

ದಾವಣಗೆರೆ ಪೊಲೀಸರ ಬಲೆಗೆ ಬಿದ್ದ KPSC ಚಾಲಾಕಿ ನಕಲು ಜಾಲ

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎಂದರೂ ಅದಕ್ಕೊಂದು ಹಗರಣ ಲಿಂಕ್ ಆಗುವಂತೆ ಆಗಿದೆ.  ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ಸಂಬಂಧದ ನಕಲು ಹಗರಣದಲ್ಲಿ ಶಾಮೀಲಾಗಿದ್ದವರನ್ನು ದಾವಣಗೆರೆಯಲ್ಲಿ ಬಂಧಿಸಲಾಗಿದೆ.

5 persons held for receiving answers over phone in KPSC exam Davanagere
Author
Bengaluru, First Published Jul 29, 2019, 11:05 PM IST

ದಾವಣಗೆರೆ[ಜು. 29]  ಕೆಪಿಎಸ್ಸಿ ಪರೀಕ್ಷೆ ಹಗರಣ ಸಂಬಂಧ ಐವರು ಆರೋಪಿಗಳ  ಬಂಧನವಾಗಿದೆ. ದಾವಣಗೆರೆ ಸಿಇಎನ್ ಠಾಣೆಯ ಪೊಲೀಸರ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ಜನ ಮಂಡಳಿ ಸಹಾಯಕ ಸಾಗರ ಕರ್ಕಿ, ಕಲಬುರ್ಗಿ ರೇಷ್ಮೆ ಪದವಿ ಕಾಲೇಜ್ ಪ್ರಾಚಾರ್ಯ ಶ್ರೀ ಶೈಲ ಹಳ್ಳಿ, ಸ್ಪರ್ಧಾತ್ಮಕ ಪರೀಕ್ಷೆ ಯ ತರಬೇತುದಾರ ಹಾವೇರಿ ಮೂಲದ ಮಾರುತಿ ಎಂಬುವರನ್ನು ಬಂಧಿಸಲಾಗಿದೆ.

ಮೈಕ್ರೋ ಪೋನ್ ಮೂಲಕ ಕೆಪಿಎಸ್ಸಿ ಪರೀಕ್ಷೆಯಲ್ಲಿ ನಕಲು ಮಾಡಿದ್ದಾರೆ ಎನ್ನಲಾಗಿದೆ. ಈ ಜಾಲ ರಾಜ್ಯಾದ್ಯಂತ ಹರಡಿದೆ ಎಂದು ಹೇಳಲಾಗಿತ್ತು. 2017 ಅಕ್ಟೋಬರ್ 12 ರಂದು ದಾವಣಗೆರೆಯಲ್ಲಿ ಮೂಲ ಪತ್ತೆಯಾಗಿತ್ತು.

ನಕಲು ಮಾಡಲು ಇಯರ್ ಫೋನ್ ಬಳಸಿ ಸಿಕ್ಕಿಬಿದ್ದಳು!

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದೈಹಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ  ಮೈಕ್ರೋ ಪೋನ್ ಬಳಸಿ ನಕಲು ಮಾಡಿದ್ದರು. ರೇಲ್ವೆ ಪೊಲೀಸ್ ಪೇದೆಯೊಬ್ಬ ಇದರಲ್ಲಿ ಶಾಮೀಲಾಗಿರುವ ಶಂಕೆ ಇದ್ದು ಒಟ್ಟು ಐವರನ್ನು ಬಂಧಿಸಲಾಗಿದೆ. ಸಿಇಎನ್ ಪೊಲೀಸರ ತನಿಖೆ ಮುಂದುವರಿಸಿದ್ದಾರೆ.

Follow Us:
Download App:
  • android
  • ios