ನಕಲು ಮಾಡಲು ಇಯರ್ ಫೋನ್ ಬಳಸಿ ಸಿಕ್ಕಿಬಿದ್ದಳು!

ಎಸ್‌ಡಿಎ ನೇಮಕ ಪ್ರವೇಶ ಪರೀಕ್ಷೆ ವೇಳೆ ಘಟನೆ | ಮೊಬೈಲ್ ಬದಲು ಎಲೆಕ್ಟ್ರಾನಿಕ್ ಉಪಕರಣಕ್ಕೆ ಅಳವಡಿಸಿ ಬಳಕೆ | ಲಾಲ್‌ಬಾಗ್ ಸಮೀಪದ ಅಲ್ ಅಮೀನ್ ಕಾಲೇಜಿನಲ್ಲಿ ಜೂ. 16 ರಂದು ನಡೆದಿದ್ದ ಪರೀಕ್ಷೆ 

Girl caught while copy in KPSC SDA exam

ಬೆಂಗಳೂರು (ಜೂ. 26): ಕೆಪಿಎಸ್‌ಸಿ ನಡೆಸಿದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ವೈಯರ್ ಲೆಸ್ ಸಾಧನ ಬಳಸಿ ನಕಲು ಮಾಡುತ್ತಿದ್ದಾಗ ಮಹಿಳಾ ಅಭ್ಯರ್ಥಿಯೊಬ್ಬಳು ಸಿಕ್ಕಿಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡದ ರೇಣುಕಾ ಕದಮ್ ಬಂಧಿತರಾಗಿದ್ದು, ಲಾಲ್‌ಬಾಗ್ ಸಮೀಪದ ಅಲ್ ಅಮೀನ್ ಕಾಲೇಜಿನಲ್ಲಿ ಜೂ. 16 ರಂದು ನಡೆದಿದ್ದ ಪರೀಕ್ಷೆ ವೇಳೆ ಈ ಘಟನೆ ನಡೆದಿದೆ. ಪರೀಕ್ಷೆ ನಕಲು ಮಾಡುವಾಗ ಮೇಲ್ವಿಚಾರಕರ ಕಣ್ಣಿಗೆ ಆಕೆ ಬಿದ್ದಿದ್ದಾಳೆ. ಬಳಿಕ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ರೇಣುಕಾಳನ್ನು ಬಂಧಿಸಿದ್ದಾರೆ.

ಎಸ್‌ಡಿಎಂ ಪರೀಕ್ಷೆ ಬರೆಯುತ್ತಿದ್ದ ರೇಣುಕಾ ಬಳಿ ಪಿಸುದನಿಯಲ್ಲಿ ಮಾತುಗಳ ಸದ್ದು ಕೇಳು ಬರುತ್ತಿತ್ತು. ಇದರಿಂದ ಅನುಮಾನಗೊಂಡ ಕೊಠಡಿ ಮೇಲ್ವಿಚಾರಕ ರಾಜಕುಮಾರ್ ಮತ್ತು ಹೆಚ್ಚುವರಿ ಮೇಲ್ವಿಚಾರಕ ರಿಜ್ವಾನ್ ಅವರು, ಅಭ್ಯರ್ಥಿ ಬಳಿ ತೆರಳಿ ಪರಿಶೀಲಿಸಿದಾಗ ವೈರ್‌ಲೆಸ್ ಇಯರ್ ಫೋನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಲೆಗೂದಲನ್ನು ಕಿವಿಗೆ ಆಕೆ ಮುಚ್ಚಿಕೊಂಡಿದ್ದಳು. ಆಗ ಕಾಲೇಜಿನ ಮಹಿಳಾ ಸಿಬ್ಬಂದಿಯನ್ನು ರೇಣುಕಾ ಅವರನ್ನು ತಪಾಸಣೆಗೊಳಡಿಸಿದಾಗ ವೈರ್ ಲೆಸ್ ಮೂಲಕ ಮಾಹಿತಿ ಪಡೆದು ಶೇ.20 ಪ್ರಶ್ನೆಗಳಿಗೆ ಉತ್ತರ ಬರೆದಿದ್ದಳು. ರೇಣುಕಾ ಸಿಕ್ಕಿ ಬೀಳುತ್ತಿದ್ದಂತೆ ಆಕೆಗೆ ಉತ್ತರ ಒದಗಿಸುತ್ತಿದ್ದ ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಕಾಲ್ಕಿತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಗೃಹಿಣಿ ರೇಣುಕಾ ಪತಿ ಆನಂದ್ ಖಾಸಗಿ ಕಂಪನಿಯ ಉದ್ಯೋಗಿಯಾಗಿ ದ್ದಾರೆ. ಕೃತ್ಯಕ್ಕೆ ಬಳಸಿದ್ದ ಯಂತ್ರ ಮೊಬೈಲ್ ಅಲ್ಲ. ಮೊಬೈಲ್ ನಂತೆ ಕೆಲಸ ಮಾಡುವ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ ಸಾಧನವಾಗಿದೆ. ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ವಿಲ್ಸನ್ ಗಾರ್ಡ್ ನ್ ಪೊಲೀಸರು ತಿಳಿಸಿದ್ದಾರೆ.

 

Latest Videos
Follow Us:
Download App:
  • android
  • ios