Asianet Suvarna News Asianet Suvarna News

Mandya| ಭೀಕರ ಅಪಘಾತ: ಗ್ರಾಪಂ ಅಧ್ಯಕ್ಷೆ ಸೇರಿ ಐವರ ದುರ್ಮರಣ

*   ಮಂಡ್ಯದ ನೆಲಮಾಕನಹಳ್ಳಿಯಲ್ಲಿ ನಡೆದ ಘಟನೆ
*   ಟಿಪ್ಪರ್‌ ಲಾರಿ ಆಟೋ ಮುಖಾಮುಖಿ ಡಿಕ್ಕಿ 
*   ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು
 

5 Killed Including Gram Panchayat President in Road Accident at Malavalli in Mandya grg
Author
Bengaluru, First Published Nov 20, 2021, 9:34 AM IST
  • Facebook
  • Twitter
  • Whatsapp

ಮಳವಳ್ಳಿ(ನ.20):  ಪ್ಯಾಸೆಂಜರ್‌ ಆಟೋ, ಟಿಪ್ಪರ್‌ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ(Collision) ಸಂಭವಿಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೇರಿ ಒಂದೇ ಕುಟುಂಬದ ಐವರು ಸಾವಿಗೀಡಾದ(Death) ದುರ್ಘಟನೆ ಮಂಡ್ಯದ ನೆಲಮಾಕನಹಳ್ಳಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. 

ಮಂಡ್ಯ(Mandya)ಜಿಲ್ಲೆಯ ಮಳವಳ್ಳಿ(Malavalli) ತಾಲೂಕಿನ ಬಂಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ, ದಡದಪುರ ಗ್ರಾಮದ ಮುತ್ತಮ್ಮ(45), ಅವರ ಪುತ್ರಿ ಬಸಮ್ಮಣಿ(30), ಪುತ್ರ ವೆಂಕಟೇಶ(25), ಬಸಮ್ಮಣಿ ಮಕ್ಕಳಾದ 8 ವರ್ಷದ ಚಾಮುಂಡೇಶ್ವರಿ, ಎರಡು ವರ್ಷದ ಗಂಡು ಮಗು ಮೃತಪಟ್ಟಿದೆ.

ತಾಲೂಕಿನ ಬಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆ(President of the Gram Panchayat) ಮುತ್ತಮ್ಮ ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ(Temple) ಹೋಗಿ ವಾಪಸ್‌ ಬರುತ್ತಿದ್ದ ವೇಳೆ ನೆಲಮಾಕನಹಳ್ಳಿ ಬಳಿ ಎದುರಿಗೆ ಅತಿವೇಗವಾಗಿ ಬಂದ ಟಿಪ್ಪರ್‌ ಲಾರಿ ಆಟೋಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಟಿಪ್ಪರ್‌ ಲಾರಿ ಡಿಕ್ಕಿ ರಭಸಕ್ಕೆ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

Yadgir| ಆಟೋಗೆ ಲಾರಿ ಡಿಕ್ಕಿ, 2 ತಿಂಗಳ ಮಗು ಸೇರಿ ಮೂವರ ದುರ್ಮರಣ

ಅಪಘಾತ: ಪಾದಚಾರಿ ದಂಪತಿ ದುರ್ಮರಣ

ಕಲಬುರಗಿ(Kalaburagi): ಯಡ್ರಾಮಿ ತಾಲೂಕಿನ ಯಲಗೋಡದಲ್ಲಿರುವ ಪರಮಾನಂದ ಮಠದ ಗುರುಲಿಂಗ ಸ್ವಾಮೀಜಿ ಅವರಿದ್ದ ಕಾರು ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿ ದಂಪತಿ(Couple) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ತಾಲೂಕಿನ ಸರಡಗಿ (ಬಿ) ಕ್ರಾಸ್‌ ಬಳಿ ಇರುವ ಪೆಟ್ರೋಲ್‌ ಬಂಕ್‌ ಹತ್ತಿರ ಸಂಭವಿಸಿದೆ.

ದುರಂತದಲ್ಲಿ ಸಾವನ್ನಪ್ಪಿದವರನ್ನು ಶಿವಶರಣಪ್ಪ (55) ಹಾಗೂ ಅವರ ಪತ್ನಿ ಗುಂಡಮ್ಮ ಎಂದು ಗುರುತಿಸಲಾಗಿದೆ. ಮೃತ ದಂಪತಿ ಜೇವರ್ಗಿ ತಾಲೂಕಿನ ಕೋನಹಿಪ್ಪರಗಿ ಗ್ರಾಮದ ನಿವಾಸಿಗಳಾಗಿದ್ದಾರೆ. ಕಲಬುರಗಿ ನಗರಕ್ಕೆ ಆಗಮಿಸಿದ್ದ ಅವರು ತಮ್ಮ ಕೆಲಸ ಮುಗಿಸಿಕೊಂಡು ತಮ್ಮೂರಿಗೆ ಬಸ್ನಲ್ಲಿ ಸರಡಗಿ ಕ್ರಾಸ್‌ವರೆಗೂ ಬಂದಿಳಿದಿದ್ದಾರೆ.

ಸರಡಗಿ ಕ್ರಾಸ್‌ ಬಳಿ ರಸ್ತೆ ದಾಟುತ್ತಿದ್ದ ವೇಳೆಯೇ ಕಲಬುರಗಿ ಕಡೆಯಿಂದ ವೇಗವಾಗಿ ಬಂದ ಕಾರು ನೇರವಾಗಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ದಂಪತಿಯ ಸಾವಿಗೆ ಕಾರಣವಾದ ಕಾರಿನಲ್ಲಿ ಯಡ್ರಾಮಿ ತಾಲೂಕಿನ ಯಲಗೋಡದ ಪರಮಾನಂದ ಮಠದ ಗುರುಲಿಂಗ ಸ್ವಾಮಿ ಸೇರಿದಂತೆ ನಾಲ್ವರು ಇದ್ದರು. ಸರಡಗಿ ಕ್ರಾಸ್‌ ಹತ್ತಿರ ತಿರುವು ಇದ್ದರೂ ಕೂಡ ಚಾಲಕ ವೇಗವಾಗಿ ಕಾರು ಚಲಿಸಿದ್ದರಿಂದ ಈ ಅವಘಡ ಸಂಭವಿಸಿದೆ.

ಆದರೆ, ಕಾರಿನಲ್ಲಿದ್ದ ಸ್ವಾಮೀಜಿ ಹಾಗೂ ಕಾರು ಚಾಲಕ ಸೇರಿ ಯಾರಿಗೂ ಗಾಯಗಳಾಗಿಲ್ಲ. ಎಲ್ಲರೂ ಸೇಫ್‌ ಆಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಟ್ರಾಫಿಕ್‌ ಸಿಪಿಐ ಶಾಂತಿನಾಥ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕಲಬುರಗಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಟ್ರಾಫಿಕ್‌ ಸಿಪಿಐ ಶಾಂತಿನಾಥ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಲಬುರಗಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Selfie Tragedy| ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕ್ಯಾಂಟರ್‌ ಡಿಕ್ಕಿ: ಇಬ್ಬರ ಸಾವು

ಟ್ರ್ಯಾಕ್ಟರ್‌ ಪಲ್ಟಿ: ಒಬ್ಬ ಸಾವು, 8 ಜನರಿಗೆ ಗಾಯ

ದಾವಣಗೆರೆ(Davanagere): ಅಡಿಕೆ ಲೋಡ್‌ ಮಾಡಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, 8 ಮಂದಿ ಗಾಯಗೊಂಡ ಘಟನೆ ಚನ್ನಗಿರಿ ತಾಲೂಕಿನ ಸೇವಾನಗರ-ಮಧುರ ನಾಯಕನಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.

ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದ ಜಯಪ್ಪ(39) ಮೃತ ಕೆಲಸಗಾರ. ಲಿಂಗಾಪುರ ಗ್ರಾಮದವರಾದ ಸುರೇಶ, ಅರ್ಜುನ್‌, ಶೇಟು, ವೆಂಕಟೇಶ, ಶರಣ, ಸುರೇಶ, ಮಂಜಪ್ಪ, ಸುದೀಪ ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಡಕೆ ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್‌ ಚಾಲಕ ಯಕ್ಕನಹಳ್ಳಿ ಗ್ರಾಮದ ಡಿ.ಜಿ.ಸತೀಶನ ನಿರ್ಲಕ್ಷ್ಯ, ಅಜಾಗರೂಕತೆ, ಅತಿ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ, ಅಪಘಾತಕ್ಕೀಡಾಗಿದೆ ಎಂದು ಮೃತನ ಜಯಪ್ಪನ ಪತ್ನಿ ಪುಟ್ಟಮ್ಮ ನೀಡಿದ ದೂರಿನ ಮೇರೆಗೆ ಬಸವಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
 

Follow Us:
Download App:
  • android
  • ios