ಮಡಿಕೇರಿ(ಫೆ.09): ನಾಪೋಕ್ಲುವಿನ ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟಅಮ್ಮಂಗೇರಿ ನಿವಾಸಿ ಇಗ್ಗುತ್ತಪ್ಪ ದೇವಳದ ಜೋತಿಷ್ಯ ಕುಟುಂಬ ಕಣಿಯರ ಕುಟುಂಬದ ನಾಣಯ್ಯ ಅವರು ತಮ್ಮ ಹಿತ್ತಲ ಜಾಗದಲ್ಲಿ ತಮ್ಮ ಸ್ವಂತ ಖರ್ಚಿಗಾಗಿ ಅರಿಶಿನ ಬೆಳೆಸಿದ್ದರು.

ಅರಿಶಿನ ಗಿಡದ ಬುಡವನ್ನು ಅಗೆದಾಗ ಒಂದೇ ಬುಡದಲ್ಲಿ ಸರಿ ಸುಮಾರು 5 ಕೆ.ಜಿ. ಗಳಷ್ಟುಫಸಲನ್ನು ನೋಡಿ ಅಶ್ಚರ್ಯ ಗೊಂಡಿದ್ದಾರೆ. ಇಷ್ಟುಗಾತ್ರದಲ್ಲಿ ಬೆಳೆದಿರುವುದು ಇದು ಪ್ರಥಮವಾಗಿದೆ. ಅವರ ಪ್ರಕಾರ ಹಿತ್ತಲಲ್ಲಿ ಮಣ್ಣು ಗುಡ್ಡೆ ಸೇರಿಸಿ ನೀರನ ಸೌಕರ್ಯ ನೀಡಿರುವುದರಿಂದ ಇದು ಇಷ್ಟುಗಾತ್ರವಾಗಿ ಬೆಳೆಯಲು ಸಾಧ್ಯವಾಗಿದೆ ಎನ್ನುತ್ತಾರೆ ನಾಣಯ್ಯ.

ತರಕಾರಿ ವ್ಯಾಪಾರಿ ಪುತ್ರಿ ಏರೋನಾಟಿಕಲ್ ಎಂಜಿನಿಯರ್.! ರಾಜ್ಯಕ್ಕೇ ಫಸ್ಟ್‌

ಹೆಚ್ಚಿನ ಔಷಧೀಯ ಅಂಶಗಳನ್ನು ಹೊಂದಿರುವ ಅರಶಿನ ಸಾಂಬಾರು ಪದಾರ್ಥವಾಗಿ, ಸೌಂದರ್ಯವರ್ಧಕವಾಗಿಯೂ ಬಳಸುತ್ತಾರೆ. ಕೊಡಗಿನಂತಹ ಪ್ರದೇಶದಲ್ಲಿ ಮನೆ ಖರ್ಚಿಗಾಗಿ ಅರಶಿನ ಬೆಳೆಸುವುದು ಸಾಮಾನ್ಯ. ಆದರೆ ಒಂದೇ ಗಿಡದಲ್ಲಿ ಇಷ್ಟೊಂದು ಇಳುವರಿ ಬರುವುದು ಅಪರೂಪ.