ಗುಂಡ್ಲುಪೇಟೆ (ಮೇ.24): ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿ ಶವ ಸಾಗಾಣಿಕೆಗೆ ಆ್ಯಂಬುಲೆನ್ಸ್‌ ಸಿಗದ ಕಾರಣ ಮೃತರ ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಯಲ್ಲಿ ಐದು ತಾಸು ಕಾದು ಕುಳಿತ ಪ್ರಸಂಗ ನಡೆದಿದೆ.

 ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಾಗಾರದ ಹೊರಗಡೆ ಮಧ್ಯಾಹ್ನ 12 ರಿಂದ ಸಂಜೆ 4ರ ತನಕ ಸೋಂಕಿತನ ಶವ ಸುಮಾರು ಐದು ತಾಸು ಅನಾಥವಾಗಿ ಬಿದ್ದಿತ್ತು. 

ಚೇತರಿಕೆ ಜತೆ ಸಾವಿನ ಸಂಖ್ಯೆಯೂ ಏರಿಕೆ, ಎಚ್ಚರ ತಪ್ಪುವಂತೆ ಇಲ್ಲ

ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಆ್ಯಂಬುಲೆನ್ಸ್‌ ಮತ್ತೊಬ್ಬ ಕೋವಿಡ್ ಸೋಂಕಿತನ ಶವ ಸಾಗಣೆಗೆ ಹೋಗಿದ್ದ ಸಂದರ್ಭದಲ್ಲಿ ಅರ್ಧ ದಾರಿಯಲ್ಲೇ ಕೆಟ್ಟು ನಿಂತಿದ್ದೇ, ಈ ಪ್ರಸಂಗಕ್ಕೆ ಕಾರಣ ಎಂದು ತಿಳಿದುಬಂದಿದೆ. ಕೊನೆಗೆ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ತಹಸೀಲ್ದಾರ್‌, ಬೇರೆ ಆ್ಯಂಬುಲೆನ್ಸ್‌ ಕರೆಸಿ ಮೃತದೇಹ ಸಾಗಣೆಗೆ ಸ್ಪಂದಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona