Asianet Suvarna News Asianet Suvarna News

ಮೈಸೂರು : 15 ರಿಂದ 19ರವರೆಗೆ ಮಳೆ - ಕೃಷಿ ಸಲಹೆ

  • ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಸೆ.15 ರಿಂದ 19 ರವರೆಗೆ ಮಳೆ
  • ಮೋಡ ಕವಿದ ವಾತಾವರಣ ಇರಲಿದ್ದು ತುಂತುರು ಮಳೆ ಬರುವ ಸಾಧ್ಯತೆ
5 Days normal rain prediction in mysuru snr
Author
Bengaluru, First Published Sep 15, 2021, 11:56 AM IST
  • Facebook
  • Twitter
  • Whatsapp

ಮೈಸೂರು (ಸೆ.15):  ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಸೆ.15 ರಿಂದ 19 ರವರೆಗೆ ಮೋಡ ಕವಿದ ವಾತಾವರಣ ಇರಲಿದ್ದು ತುಂತುರು ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಸಲಹೆಗಳು- ಮೋಡ ಕವಿದ ವಾತಾವರಣ ಇರುವುದರಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಭತ್ತದ ಬೆಳೆಯಲ್ಲಿ ಥ್ರಿಫ್ಸ್‌ ಹಾವಳಿ ಕಂಡು ಬಂದಿದ್ದು, ಇದರ ಹತೋಟಿಗೆ 2 ಮೀ.ಲೀ ಲ್ಯಾಂಬ್ಡಾ ಸೈಹಲೋಥ್ರಿನ್‌ 02.50% ಔಷÜಧಿಯನ್ನು ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ದೆಹಲಿಯಲ್ಲಿ ಭಾರೀ ಮಳೆ: 46 ವರ್ಷಗಳ ಗರಿಷ್ಠ!

ಭತ್ತದಲ್ಲಿ ಕಾಂಡ ಕೊರಕ ನಿಯಂತ್ರಣಕ್ಕೆ ಕಾರ್ಬೊಫ್ಯರನ್‌ 3 ಜಿ-8 ಕಿ.ಗ್ರಾಂ/ಎಕರೆಗೆ- ಹರಳು ರೂಪದ ಕೀಟನಾಸಕ ಬಳಸಿದರೆ, ಹರಳು ರೂಪದ ಕೀಟನಾಶಕಗಳನ್ನು ಮಣ್ಣಿನಲ್ಲಿ ಸೇರಿಸಿ ಎರಡು ದಿನಗಳ ನಂತರ ಹದವಾಗಿ ನೀರು ಹಾಯಿಸುವುದು. ಕ್ಲೋರ್‌ಫೈರಿಫಾಸ್‌ 20ಇಸಿ-2 ಮೀ.ಲೀ/ಲೀ ನೀರಿಗೆ- 250- 300 ಲೀ ಸಿಂಪರಣಾ ದ್ರಾವಣ ಪ್ರತಿ ಎಕರೆಗೆ ಬೇಕಾಗುತ್ತದೆ.

ಭತ್ತದಲ್ಲಿ ಗರಿ ಸುರಳಿ ಹುಳು ಕಂಡು ಬಂದಲ್ಲಿ, ಇದರ ಹತೋಟಿಗಾಗಿ 2 ಮಿ.ಲೀ. ಕ್ವಿನಾಲ್‌ ಫಾಸ್‌ 25 ಇ.ಸಿ. ಔಷÜಧಿಯನ್ನು ಅಥವಾ 2 ಮಿ.ಲೀ. ಕ್ಲೋರೋಫೈರಿಫಾಸ್‌ 20 ಇ.ಸಿ. ಔಷಧಿಯನ್ನು 1 ಲೀಟರ್‌ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು.

ಬದನೆ ಬೆಳೆಯಲ್ಲಿ ಟೊಂಗೆ ಮತ್ತು ಕಾಯಿ ಕೊರಕದ ನಿಯಂತ್ರಣಕ್ಕಾಗಿ ಒಣಗಿದ ಟೊಂಗೆಗಳನ್ನು ಹುಳುವಿನ ಸಮೇತ ಕಿತ್ತು ನಾಶಪಡಿಸಬೇಕು ನಂತರ ಪ್ರತಿ ಲೀಟರ ನೀರಿಗೆ 4 ಗ್ರಾಂ. ಕಾರ್ಬರಿಲ್‌ ಅಥವಾ ನಿಂಬಿಸಿಡಿನ್‌ 5 ಮಿ.ಲೀ. ಔಷಧಿಯನ್ನು ಬೆರೆಸಿ ಬೆಳೆಗೆ ಸಿಂಪಡಿಸಬೇಕು.

ರೈತರು ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರ ಮತ್ತು ಕಾಂಪೋಸ್ಟ್‌ ಗೊಬ್ಬರದ ಪ್ರಮಾಣವನ್ನು ನಿರ್ಧರಿಸಿ ಉಪಯೋಗಿಸಬೇಕು. ಕೃಷಿ ಹೊಂಡಗಳಲ್ಲಿ ಸಾಕಷ್ಟುನೀರು ಇದ್ದಲ್ಲಿ ಮೀನು ಮರಿಗಳನ್ನು ಮೀನುಗಾರಿಕೆ ಇಲಾಖೆಯಿಂದ ಖರೀದಿಸಿ 1:1:1 ಅನುಪಾತದಲ್ಲಿ ಕಾಟ್ಲ, ರಾಹೋ, ಹುಲ್ಲುಗೆಡ್ಡೆ ಪ್ರತಿ ಒಂದು ಎಕರೆಗೆ 4000 ಮೀನುಮರಿಗಳನ್ನು ಬಿಡಬಹುದು ಎಂದು ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್‌, ಸಹ ಸಂಶೋಧಕ ಎನ್‌. ನರೇಂದ್ರಬಾಬು ಸಲಹೆ ನೀಡಿದ್ದಾರೆ.

ರೈತರು ಹೆಚ್ಚಿನ ಮಾಹಿತಿಗಾಗಿ ಮೊ. 94498 69914, 93435 32154 ಸಂಪರ್ಕಿಸಬಹುದು.

Follow Us:
Download App:
  • android
  • ios