ಐದು ಮಂದಿ ಕೊರೋನಾ ಸೋಂಕಿತರು ಒಂದೇ ಬೈಕಲ್ಲಿ ಪ್ರಯಾಣ

ಐವರು ಕೊರೋನಾ ಸೋಂಕಿತರು ಒಂದೇ ಬೈಕಿನಲ್ಲಿ ಪ್ರಯಾಣಿಸಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ತಮ್ಮೂರಿಗೆ ಆಂಬುಲೆನ್ಸ್ ಬರದಾರದೆಂಬ ಕಾರಣಕ್ಕೆ ಬೈಕಿನಲ್ಲೇ ತೆರಳಿದ್ದಾರೆ. 

5 Covid Patients Travel in One Bike At Kolar snr

ಕೋಲಾರ (ಏ.04): ಐದು ಮಂದಿ ಕೊರೋನಾ ಸೋಂಕಿತರು ಒಂದೇ ಬೈಕ್‌ನಲ್ಲಿ ಪ್ರಯಾಣಿಸಿದ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್‌ ಆಗಿವೆ.

ಬುರಕಾಯಲಕೋಟೆ ಗ್ರಾಮದ ಮಂಜುನಾಥ್‌ ಅವರು ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಕ್ವಾರಂಟೈನ್‌ ಕೇಂದ್ರಕ್ಕೆ ಒಂದೇ ಬೈಕ್‌ನಲ್ಲಿ ತೆರಳಿದ್ದಾರೆ. 

ಲಕ್ಷ್ಮೀಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ 19 ಪರೀಕ್ಷೆ ಮಾಡಿದಾಗ ಈ ಕುಟುಂಬಕ್ಕೆ ಪಾಸಿಟಿವ್‌ ಬಂದಿದೆ ಎಂಬ ವರದಿಯಾಗಿದೆ. 

ರಾಜ್ಯದಲ್ಲಿ ಇನ್ನೂ 15 ದಿನ ಸೋಂಕು ತೀವ್ರ ಏರಿಕೆ: ಡಾ| ಬಲ್ಲಾಳ್! ...

ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಕ್ವಾರಂಟೈನ್‌ ಕೇಂದ್ರಕ್ಕೆ ಈ ಕುಟುಂಬವು ತೆರಳುತ್ತಿತ್ತು. ಆ್ಯಂಬುಲೆನ್ಸ್‌ ಸೇವೆ ಇದ್ದರೂ, ಅದನ್ನು ಲೆಕ್ಕಿಸದೆ ಒಂದೇ ಬೈಕ್‌ನಲ್ಲೇ ಸೋಂಕಿತರು ಕ್ವಾರಂಟೈನ್‌ ಕೇಂದ್ರಕ್ಕೆ ತೆರಳಿದರು. ಗ್ರಾಮಕ್ಕೆ ಆ್ಯಂಬುಲೆನ್ಸ್‌ ಬಂದರೆ ಮುಜುಗರ ಎಂದು ಭಾವಿಸಿ ಬೈಕ್‌ನಲ್ಲೆ ಪ್ರಯಾಣ ಬೆಳೆಸಿದರೆಂದು ಹೇಳಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios