Asianet Suvarna News Asianet Suvarna News

ಯಲಬುರ್ಗಾ ಕ್ಷೇತ್ರಕ್ಕೆ 4500 ಮನೆ ಮಂಜೂರು; ಫಲಾನುಭವಿಗಳು ಯಾರಿಗೂ ಹಣ ಕೊಡಬೇಡಿ - ಸಚಿವ ಹಾಲಪ್ಪ ಆಚಾರ

ಯಲಬುರ್ಗಾ ಕ್ಷೇತ್ರಕ್ಕೆ 4500 ಮನೆ ಮಂಜೂರು ಮಾಡಿಸಿದ್ದೇನೆ. ಫಲಾನುಭವಿಗಳು ಯಾರಿಗೂ ಒಂದು ರೂ. ಹಣ ಕೊಡಬೇಕಾಗಿಲ್ಲ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು. ಕದ್ರಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾದರು.

4500 houses allotted to Yalaburga says Minister Halappa Achara at kukanuru
Author
Hubli, First Published Aug 21, 2022, 3:15 PM IST

 ಕುಕನೂರು (ಆ.21) : ಕ್ಷೇತ್ರದ ಗೌರವಕ್ಕೆ ಕುತ್ತು ಬಾರದ ರೀತಿ ನಡೆದುಕೊಳ್ಳುತ್ತೇನೆ. ಕ್ಷೇತ್ರಕ್ಕೆ 4500 ಮನೆ ಮಂಜೂರು ಮಾಡಿಸಿದ್ದೇನೆ. ಮನೆಯ ಹಂಚುವಲ್ಲಿ ಯಾರಿಗೂ ಫಲಾನುಭವಿಗಳು ಒಂದು ರು.ವನ್ನೂ ನೀಡಬಾರದು ಎಂದು ಸಚಿವ ಹಾಲಪ್ಪ ಆಚಾರ ತಿಳಿಸಿದರು. ತಾಲೂಕಿನ ಕದ್ರಳ್ಳಿ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ ಕಾಂಗ್ರೆಸ್‌ನ್ನು ಕಟ್ಟಿದರು. ಆದರೆ ಸ್ವಾತಂತ್ರ್ಯ ನಂತರ ಅದನ್ನು ರಾಜಕೀಯಕ್ಕಾಗಿ ಬಳಸಿಕೊಂಡರು. ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಗಾಂಧಿಜಿ ಹೇಳಿದ್ದರು. ಅವರಿಗೆ ಕಾಂಗ್ರೆಸ್‌ನವರು ಬೆಲೆ ನೀಡಲಿಲ್ಲ ಎಂದರು.

ಗುಡಿಸಲುಮುಕ್ತ ರಾಜ್ಯ ಮಾಡಲು ಸರ್ಕಾರ ಬದ್ಧ: ಸಚಿವ ಹಾಲಪ್ಪ ಆಚಾರ

ನರೇಂದ್ರ ಮೋದಿ(Narendra Modi) ಅವರು ಪ್ರಧಾನಿ ಆದ ನಂತರ ಯಾವುದೇ ಯೋಜನೆ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಬರುತ್ತದೆ. ರೈತರಿಗೆ ಅನುಕೂಲ ಆಗಲಿ ಎಂದು ಪಿಎಂ ಕಿಸಾನ್‌ ಯೋಜನೆಯಲ್ಲಿ ಕೇಂದ್ರದ .6 ಸಾವಿರ, ರಾಜ್ಯದ .4 ಸಾವಿರ ಹಣ ರೈತರ ಖಾತೆಗೆ ಜಮೆ ಆಗುತ್ತದೆ. ಬೆಳೆನಷ್ಟಅವಧಿಯಲ್ಲಿ ನಷ್ಟದ ಮೊತ್ತವನ್ನು ಸಹ ಹೆಚ್ಚಿಸಲಾಗಿದೆ. ಬೆಳೆವಿಮೆ, ಬೆಳೆ ಪರಿಹಾರ, ಬೆಂಬಲ ಬೆಲೆ ಬಿಜೆಪಿ ಸರ್ಕಾರ ನೀಡಿದ ಕೊಡುಗೆ ಎಂದರು.

ಶಾಸಕನಾದ ಮೇಲೆ ನನ್ನ ಪ್ರಾಮಾಣಿಕ ಸೇವೆ ನೋಡಿ ರಾಜ್ಯದ ಮೂರು ಖಾತೆಗಳ ಜವಾಬ್ದಾರಿ ನನಗೆ ವಹಿಸಿದ್ದಾರೆ. ಯಾವ ಖಾತೆಯಲ್ಲೂ ಒಂದು ರು. ಅವ್ಯವಹಾರ ಆಗದಂತೆ ಕಾರ್ಯ ಮಾಡಿದ್ದೇನೆ. ನನ್ನನ್ನೂ ಮಂತ್ರಿ ಮಾಡಿ ಎಂದು ನಾನು ಎಂದಿಗೂ ಯಾರಿಗೂ ಕೇಳಿಲ್ಲ. ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಿದ್ದಾರೆ ಎಂದರು.

ಕಾಂಗ್ರೆಸ್‌(Congress) ಅವಧಿಯಲ್ಲಿ ಜನರು ಯೋಜನೆ ಪ್ರಯೋಜನ ಪಡೆಯಬೇಕಾದರೆ ಅವರ ಚಪ್ಪಲಿ ಹರಿಯುವವರೆಗೂ ತಿರುಗುವ ಪ್ರಮೇಯ ಇತ್ತು. ಜನರು ಕಚೇರಿಗಳಿಗೆ ಅಲೆಯಬೇಕಾದ ಪ್ರಮೇಯ ಬರಬಾರದೆಂದು ಜಿಲ್ಲಾಡಳಿತವೆ ಪ್ರತಿ ತಿಂಗಳ 3ನೇ ಶನಿವಾರ ಗ್ರಾಮಕ್ಕೆ ಭೇಟಿ ನೀಡುವುದರೊಂದಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಮಾಡಿದೆ ಎಂದರು.

ತಹಸೀಲ್ದಾರ್‌(Tahsildar) ಚಿದಾನಂದ ಗುರುಸ್ವಾಮಿ(Chidananda Guruswamy), ಇಒ ರಾಮಣ್ಣ ದೊಡ್ಮನಿ, ಗ್ರಾಪಂ ಅಧ್ಯಕ್ಷ ರೇವಣಸಿದ್ದನಗೌಡ ಮಾಲಿಪಾಟೀಲ್‌, ಉಪಾಧ್ಯಕ್ಷೆ ಯಮನವ್ವ ಕೊಪ್ಪಳದ್‌, ಪಿಡಿಒ ದೊಡ್ಡಬಸಮ್ಮ ಗೊರೆಬಾಳು, ಗ್ರಾಪಂ ಸದಸ್ಯ ಶಿವಕುಮಾರ ಹಳ್ಳಿಕೇರಿ, ಸರ್ವೆ ಅಧಿಕಾರಿ ವೀರಣ್ಣ, ಉಪತಹಸೀಲ್ದಾರರಾದ ಬಸವರಾಜ, ಮುರುಳಿಧರರಾವ್‌ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಸಿಂಧೂ ಯಲಿಗಾರ್‌, ಪ್ರಮುಖರಾದ ಕಳಕಪ್ಪ ಕಂಬಳಿ, ಶಂಭು ಜೋಳದ, ಶಿವಕುಮಾರ ನಾಗಲಾಪೂರಮಠ ಇತರರಿದ್ದರು.

ಕೊಪ್ಪಳ: ಹುಲಿಹೈದರ್‌ನಲ್ಲಿ ಮತ್ತೆ 5 ದಿನ ನಿಷೇಧಾಜ್ಞೆ

ಅಕ್ರಮ ಮದ್ಯ ಮಾರಾಟದ ವಿರುದ್ಧ ಧ್ವನಿ ಎತ್ತಿದ ಗ್ರಾಮಸ್ಥರು

ಗ್ರಾಮದಲ್ಲಿ ಮದ್ಯ ಅಕ್ರಮವಾಗಿ ಮಾರಾಟವಾಗುತ್ತಿದ್ದು, ಗ್ರಾಮದ ಯುವಕರು, ಜನರು ಮದ್ಯದ ದಾಸರಾಗುತ್ತಿದ್ದಾರೆ. ಇದರಿಂದ ಕುಟುಂಬಗಳು ಬೀದಿಗೆ ಬರುತ್ತಿವೆ. ಈ ಬಗ್ಗೆ ಹಲವಾರು ಬಾರಿ ಪೊಲೀಸ್‌ ಇಲಾಖೆ ಹಾಗೂ ಅಬಕಾರಿ ಇಲಾಖೆಗೆ ದೂರು ನೀಡಿದರೆ, ಅಧಿಕಾರಿಗಳು ಬಂದು ಅಕ್ರಮ ಮದ್ಯ ಮಾರಾಟಗಾರರಿಂದ ದುಡ್ಡು ಪಡೆದು ಹೋಗುತ್ತಾರೆ. ಮತ್ತಷ್ಟುಅವರಿಗೆ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಾರೆ. ಇದರಿಂದ ಇಲಾಖೆಗಳ ಮೇಲೆ ಹಾಗೂ ಅಧಿಕಾರಿಗಳ ಮೇಲೆ ನಮಗೆ ನಂಬಿಕೆ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೂ ಮದ್ಯ ಅಕ್ರಮ ಮಾರಾಟದ ಪರವಾನಗಿ ನೀಡಿ, ನಾವು ಮದ್ಯ ಮಾರಾಟ ಮಾಡುತ್ತೇವೆ. ಮತ್ತೇಕೆ ಇದನ್ನು ತಡೆಯುತ್ತಿರಿ ಎಂದು ತಹಸೀಲ್ದಾರ್‌, ಇಒ ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ತಹಸೀಲ್ದಾರ್‌ ಚಿದಾನಂದ ಗುರುಸ್ವಾಮಿ, ಅಬಕಾರಿ ಇಲಾಖೆ ಅಧಿಕಾರಿಗಳನ್ನು ಕರೆಯಿಸಿ ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.

Follow Us:
Download App:
  • android
  • ios