ಸಿರುಗುಪ್ಪ: ಬಡಿಗೆಯಲ್ಲಿ ಹೊಡೆದಾಡಿ ವಿಜಯದಶಮಿ ಆಚರಣೆ, 44 ಜನರಿಗೆ ಗಾಯ

*   ದೇವರಿಗಾಗಿ ಬಡಿಗೆ ಹಿಡಿದುಕೊಂಡು ಬಡಿದಾಡುವ ಭಕ್ತರು
*   ಭಂಡಾರ ಲೇಪಿಸಿಕೊಂಡು ಕಾಳಗಕ್ಕೆ ಅಣಿಯಾಗುವ ಭಕ್ತರು
*  ಆಂಧ್ರ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ಭಕ್ತರಿಗೆ ಮನೆದೇವರಾದ ಮಾಳಮಲ್ಲೇಶ್ವರ ದೇವರು
 

44 People Injured During Vijayadashami Celebration at Siruguppa in Ballari grg

ಸಿರುಗುಪ್ಪ(ಅ.17):  ಹಬ್ಬ ಹರಿದಿನಗಳು ಬಂದರೆ ದೇವರ(God) ಪೂಜೆ-ಪುನಸ್ಕಾರ ಮಾಡಿ ಭಕ್ತಿ ಸಮರ್ಪಿಸುವುದನ್ನು ಕಂಡಿದ್ದೇವೆ. ಆದರೆ ತಾಲೂಕಿನ(Siruguppa) ಗಡಿಭಾಗದಲ್ಲಿರುವ ಆಂಧ್ರದ(Andhra Pradesh) ಕರ್ನೂಲ್‌(Kurnool) ಜಿಲ್ಲೆಯ ದೇವರಗಟ್ಟು ಮಾಳಮಲ್ಲೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ(Vijayadashami) ದಿನದ ರಾತ್ರಿ ಭಕ್ತರು(Devotees) ದೇವರಿಗಾಗಿ ಬಡಿಗೆ ಹಿಡಿದುಕೊಂಡು ಬಡಿದಾಡುತ್ತಾರೆ. 

ಈ ವೇಳೆ ಇಬ್ಬರಿಗೆ ಬಡಿಗೆ ಏಟಿನಿಂದ ತೀವ್ರ ಗಾಯಗಳಾಗಿದ್ದು, ಆಧೋನಿ(Adoni) ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 44ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಾತ್ಕಾಲಿಕವಾಗಿ ತೆರೆಯಲಾಗಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಸಿ ಕ್ಯಾಮೆರಾ, ಡ್ರೋನ್‌ ಕ್ಯಾಮೆರಾದಲ್ಲಿ ಬಡಿಗೆ ಆಟವನ್ನು ಸೆರೆ ಹಿಡಿಯಲಾಗಿದೆ.

ದಸರಾ ವೇಳೆ ನಾಡಬಂದೂಕಿನಲ್ಲಿ ಗುಂಡು ಹಾರಿಸಿದ್ದ ನಂಜೇಗೌಡ : FIR ದಾಖಲು

ಯಾಕೆ ಬಡಿದಾಟ?

ಉತ್ಸವ ಮೂರ್ತಿಗಳನ್ನು ಸಿಂಹಾಸನಕಟ್ಟೆಗೆ ಕರೆದುಕೊಂಡು ಹೋಗುವಾಗ ಸುತ್ತಲಿನ ನೆರಣಿಕಿ, ವಿರೂಪಾಪುರ, ಸುಳುವಾಯಿ, ನೆರಣಿಕಿ ತಾಂಡಾ, ಹೊಳಗುಂದಿಯ ಭಕ್ತರು ಬಡಿದಾಡಿಕೊಳ್ಳುತ್ತಾರೆ. ತಮ್ಮ ಗ್ರಾಮಕ್ಕೆ(Village) ಉತ್ಸವ ಮೂರ್ತಿ ತೆಗೆದುಕೊಂಡು ಹೋದಲ್ಲಿ ಗ್ರಾಮದಲ್ಲಿ ಸ್ವಾಮಿಯ ಅನುಗ್ರಹ ಉಂಟಾಗಿ, ಮಳೆ, ಬೆಳೆ ಸಮೃದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ದೇವರನ್ನು ಕರೆದೊಯ್ಯಲು ಪೈಪೋಟಿ ಏರ್ಪಡುತ್ತದೆ.

ಈ ಬಡಿದಾಟದ ವೇಳೆ ಅನೇಕರಿಗೆ ಗಾಯಗಳಾಗುತ್ತವೆ. ಆದರೆ ಅದನ್ನು ಲೆಕ್ಕಿಸದೆ ಭಂಡಾರ ಲೇಪಿಸಿಕೊಂಡು ಮತ್ತೆ ಕಾಳಗಕ್ಕೆ ಅಣಿಯಾಗುತ್ತಾರೆ. ಈ ವಿಶೇಷತೆಗಾಗಿಯೇ ಈ ಹಬ್ಬ ದೇಶಾದ್ಯಂತ ಗಮನ ಸೆಳೆಯುತ್ತದೆ. ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಭಕ್ತರನ್ನು ತನ್ನೆಡೆಗೆ ಆಕರ್ಷಿಸಿದೆ. ಮಾಳಮಲ್ಲೇಶ್ವರ ದೇವರು(Maalamalleshwara Swamy) ಆಂಧ್ರ, ಮಹಾರಾಷ್ಟ್ರ(Maharashtra), ಕರ್ನಾಟಕ(Karnataka) ರಾಜ್ಯಗಳ ಸಾವಿರಾರು ಕುಟುಂಬಗಳಿಗೆ ಮನೆದೇವರಾಗಿದ್ದಾರೆ.
 

Latest Videos
Follow Us:
Download App:
  • android
  • ios